Chitradurga news|nammajana.com|7-6-2024
ನಮ್ಮಜನ.ಕಾಂ, ಚಿತ್ರದುರ್ಗ: ನಗರದ ಭೀಮಸಮುದ್ರ ರಸ್ತೆಯ ಧವಳಗಿರಿ ಬಡಾವಣೆಯ ಎರಡನೇ ಹಂತದಲ್ಲಿರುವ ಶ್ರೀ ಕ್ಷಿಪ್ರ ಪ್ರಸಾದ ಮಹಾ ಗಣಪತಿ ದೇವಸ್ಥಾನದ 11ನೇ ವಾರ್ಷಿಕೋತ್ಸವ ಸಮಾರಂಭವನ್ನು ಇದೇ ಜೂನ್ 9 ಮತ್ತು 10ರಂದು ಹಮ್ಮಿಕೊಳ್ಳಲಾಗಿದೆ.
ಜೂನ್ 9ರಂದು ಬೆಳಿಗ್ಗೆ 8 ರಿಂದ ಸ್ವಸ್ತಿ ಪುಣ್ಯಾಹವಾಚನ, ಆಚಾರ್ಯದಿ ಋತ್ವಿಗ್ವರಣ, ಪಂಚಗವ್ಯ ಹವನ, ಕ್ಷಿಪ್ರ ಪ್ರಸಾ ಮಹಾಗಣಪತಿಗೆ ಮಹಾನ್ಯಾಸ ಪೂರ್ವಕ ಲಘು ರುದ್ರಾಭಿಷೇಕ, ಮಹಾಭಿಷೇಕ ಪೂಜಾದಿಗಳು ಮಹಾಮಂಗಳಾರತಿ ನಂತರ ಪ್ರಸಾದ ವಿನಿಯೋಗ ನಡೆಯಲಿದೆ.
ಸಂಜೆ 6.30 ರಿಂದ ರಾಕ್ಷೋಘ್ನ ಹೋಮ ನಡೆಯಲಿದೆ. ಸಂಜೆ 7 ಗಂಟೆಗೆ ಗಂಜಿಗಟ್ಟೆ ಆರ್.ಕೃಷ್ಣಮೂರ್ತಿ ಮತ್ತು ಸಂಗಡಿಗರಿಂದ ಜಾನಪದ, ಭಕ್ತಿಗೀತೆ, ಲಾವಣಿ ಹಾಗೂ ಶರಣರ ವಿಚಾರಧಾರೆ ತದನಂತರ ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ.
ಇದನ್ನೂ ಓದಿ: Rain report: ರಾಯಾಪುರದಲ್ಲಿ 80 ಮಿ.ಮೀ ಮಳೆ, ಯಾವ ತಾಲೂಕಿನಲ್ಲಿ ಹಾನಿ ಎಷ್ಟು, ಮಳೆ ಎಷ್ಟು, ಬಿದ್ದ ಮನೆಗಳೆಷ್ಟು ಇಲ್ಲಿದೆ ವಿವರ
ಜೂನ್ 10ರಂದು ಬೆಳಿಗ್ಗೆ 8 ರಿಂದ ಶ್ರೀ ಕ್ಷಿಪ್ತ ಪ್ರಸಾದ ಮಹಾಗಣಪತಿಗೆ ಪಂಚಾಮೃತ ಸಹಿತ ರುದ್ರಾಭಿಷೇಕ ಹಾಗೂ ನವಗ್ರಹ ಪುರಸ್ಸರ ಅಷ್ಟದ್ರವ್ಯ ಮಹಾಗಣಪತಿ ಹೋಮ, ಪೂರ್ಣಾಹುತಿ, ಅಲಂಕಾರ ಮಧ್ಯಾಹ್ನ 12.30 ರಿಂದ ಅಷ್ಟಾವಧಾನ ಮಹಾಮಂಗಳಾರತಿ ನಂತರ ಮಧ್ಯಾಹ್ನ 1 ರಿಂದ ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ 6 ರಿಂದ ಧವಳಗಿರಿ ಬಡಾವಣೆಯ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮ ಜರುಗಲಿದೆ.
ನೊಂದಣಿ ಮಾಹಿತಿ
ಸಾಂಸ್ಕøತಿಕ ಕಾರ್ಯಕ್ರಮಕ್ಕೆ ಹೆಸರು ನೋಂದಾಯಿಸಲು ಮೊಬೈಲ್ ಸಂಖ್ಯೆ 9880466192, 9449145416 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.