Chitradurga news|nammajana.com|5-2-2025
ನಮ್ಮಜನ.ಕಾಂ, ಚಿತ್ರದುರ್ಗ: ರಾಜ್ಯದ ಕಮಲ ಮನೆಯಲ್ಲಿ ಬೆಂಕಿ ಹೊತ್ತಿ ಉರಿಯುತ್ತಿರುವ ನಡುವೆ ಹಲವು (Chitradurga BJP) ಸಮುದಾಯಗಳ ಮಾಜಿ ಶಾಸಕರು, ಹಾಲಿ ಸಂಸದರು, ಶಾಸ ಲಲ ಅಗಸ್ತ್ಯಕರು, ಸ್ಥಳೀಯ ನಾಯಕರು ಜಿಲ್ಲಾಧ್ಯಕ್ಷ ನೇಮಕ ಮತ್ತು ಮಂಡಲ ಅಧ್ಯಕ್ಷರ ನೇಮಕದಲ್ಲಿ ವಿಶ್ವಾಸಕ್ಕೆ ಪಡೆದಿಲ್ಲ ಎಂದು ಬಿಜೆಪಿ ರಾಜ್ಯಧ್ಯಕ್ಷ ವಿರುದ್ದ ಬೆಂಕಿ ಉಗುಳುತ್ತಿದ್ದಾರೆ.
ಇದರ ನಡುವೆಯೇ ಇಂದು ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಹೊಸ ಅಧ್ಯಕ್ಷರು ಘೋಷಣೆ ಮಾಡಲು ಸಮಯ ನಿಗದಿ ಮಾಡಿದ್ದು ಸ್ಥಳೀಯ ನಾಯಕರು ಮತ್ತು ಆಕಾಂಕ್ಷಿಗಳ ಮುಸುಕಿನ ಗುದ್ದಾಟ ಎಂಬ ಮಾತು ಕಮಲ ಪಾಳಯದಲ್ಲಿ ಕೇಳಿ ಬರುತ್ತಿದೆ.
ಜಿಲ್ಲಾಧ್ಯಕ್ಷ ನೇಮಕ ಘೋಷಣೆಗೆ ತಡೆ:
ಬಿಜೆಪಿ ಹಾಲಿ ಜಿಲ್ಲಾಧ್ಯಕ್ಷ ಮುರುಳಿ ಅವರು ಮರಳಿ ನಾನೇ ಅಧಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವುದರಿಂದ ಸೈಲೆಂಟ್ ಗೇಮ್ ಪ್ಲಾನ್ ಮಾಡುತ್ತಿದ್ದು ಕೋಟೆ ನಾಡು ಚಿತ್ರದುರ್ಗ ಜಿಲ್ಲೆ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಮುಗಿದು ನಂತರ ಘೋಷಣೆಗೆ ಸಮಯ ನಿಗದಿಯಾದಗ ಬ್ರೇಕ್ ಬಿದ್ದಿದ್ದು ಮುರುಳಿ ಹೊಸ (Chitradurga BJP) ರಾಜಕೀಯ ದಾಳ ಉರುಳಿಸಿದ್ದಾರೆ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.
ಲೋಕಸಭಾ ಚುನಾವಣೆ ದೃಷ್ಟಿಯಿಂದ ಗೊಲ್ಲ ಸಮುದಾಯಕ್ಕೆ ಸೇರಿದ ಮುರುಳಿ ಅವರ ಬದಲಾವಣೆಯಿಂದ ಸಮಾಜ ಬೇರೆ ಸಂದೇಶ ಹೋಗಬಾರದು ಎಂದು ಅವಧಿ ಮುಗಿದ ನಂತರ ಮುಂದುವರೆಸಿದ್ದರು. ಆದರೆ ಈಗ ರಾಜ್ಯದಲ್ಲಿ ಕಮಲ ಪಾಳಯದಲ್ಲಿ ಬಿರುಸಿನಿಂದ ಜಿಲ್ಲಾಧ್ಯಕ್ಷರ ಬದಲಾವಣೆ ಮಾಡುತ್ತಿದ್ದು ಚಿತ್ರದುರ್ಗದಲ್ಲಿ ಎಲ್ಲಾ ಸಹ ಉಸ್ತುವಾರಿಗಳು ಅಭಿಪ್ರಾಯ ಆಯ್ಕೆ ಪ್ರಕ್ರಿಯೆ ಎಲ್ಲಾ ಮುಗಿದಿದ್ದು ಘೋಷಣೆ ಮಾತ್ರ ಬಾಕಿ ಇತ್ತು ಆದರೆ ಈಗ ಗೊಂದಲದ ಗೂಡಗಿರುವ ಕಾರಣ ಎರಡು ಗುಂಪುಗಳು ನೇರವಾಗಿ ಯುದ್ದಕ್ಕೆ ಇಳಿದಂತೆ ಆಗಿದೆ.
ಮೂವರ ನಡುವೆ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ (Chitradurga BJP)
ಹಾಲಿ ಜಿಲ್ಲಾಧ್ಯಕ್ಷ ಮುರುಳಿ ಮತ್ತು ಪಕ್ಷದಲ್ಲಿ ಅನೇಕ ಜವಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಿದ ಮಲ್ಲಿಕಾರ್ಜುನ್, ವೆಂಕಟೇಶ್ ಯಾದವ್ ಮಧ್ಯೆ ಪೈಪೋಟಿ ಏರ್ಪಟ್ಟಿದೆ.
ಜಿಲ್ಲಾಧ್ಯಕ್ಷ ಮುರುಳಿ
ಕಳೆದ ಒಂದು ಅವಧಿ ನಂತರ ಲೋಕಸಭೆ ಚುನಾವಣಾ ಬಂದ ಕಾರಣದಿಂದ ಮುರುಳಿ ಅವರನ್ನು ಜಿಲ್ಲಾಧ್ಯಕ್ಷ ಸ್ಥಾನದಲ್ಲಿ ಬದಲಾವಣೆ ಮಾಡದೇ ಮುಂದುವರೆಸಿದ್ದರು. ಈಗ ಬದಲಾವಣೆ ಸಮಯದಲ್ಲಿ ಸಹ ಸೈಲೆಂಟ್ ಇದ್ದ ಮುರುಳಿ, ಹೊಸ ಅಧ್ಯಕ್ಷರ ಹೆಸರು ಫೈನಲ್ ಮಾಡಿ ನಾಳೆ ಘೋಷಣೆ ಮಾಡುತ್ತಾರೆ ಎಂದು ತಿಳಿದ ತಕ್ಷಣ ರಾತ್ರೋ ರಾತ್ರಿ ರಾಜಕೀಯ ದಾಳ ಜನನ (Chitradurga BJP) ಉರುಳಿಸಿ ಮುರುಳಿ ಅವರೇ ಸ್ವತಃ ರಾಜಕೀಯ ತಂತ್ರ ಬಳಸಿ ಘೋಷಣೆ ತಡೆ ಹಿಡಿಸಿದ್ದಾರೆ ಎಂಬ ಮಾತು ದುರ್ಗ ರಾಜಕೀಯ ವಲಯದಲ್ಲಿ ಮರ್ದನಿಸುತ್ತಿದೆ.
ಮಲ್ಲಿಕಾರ್ಜುನ್
ಬಿಜೆಪಿ ಪಾಳಯದಲ್ಲಿ ಮಲ್ಲಿಕಾರ್ಜುನ್ ಅಧ್ಯಕ್ಷರು ಹಾಗೇ ಬಿಟ್ಟರು ಎಂಬ ಸಂಭ್ರಮದಲ್ಲಿದ್ದರು ಆದರೆ ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು ಎನ್ನುವುದಕ್ಕೆ ಘೋಷಣೆ ತಡೆ ಹಿಡಿದಿದ್ದೆ ದೊಡ್ಡ ಉದಾಹಾರಣೆಗೆ ಆಗಿದೆ. ಸರಳ ಸಜ್ಜನಕೆ ಮತ್ತು ಪಕ್ಷ ನಿಷ್ಠೆ ಇತ್ತು. ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಪಕ್ಷ ವಿರೋಧಿಸಿದ್ದಾರೆ ಎಂಬ ಮಾತಿನ ಮೂಲಕ ಅಧ್ಯಕ್ಷ ಸ್ಥಾನಕ್ಕೆ ಕೊಕ್ಕೆ ಹಾಕಿದ್ದಾರೆ, ಆದರೆ ಅವರು ಗಲಾಟೆ ಬೇಡ ಸಂಧಾನ ಮಾಡಲು ತೆರಳಿದ್ದರು ಅದನ್ನೂ ಬಿಟ್ಟು ಬಣ್ಣ ಕಟ್ಟಿ ಹೇಳುವ ಮೂಲಕ ಜಿಲ್ಲಾಧ್ಯಕ್ಷ ಸ್ಥಾನ ತಪ್ಪಿಸಲು ಹುನ್ನಾರ ಎಂಬ ಮಾತು ಬಿಜೆಪಿ ಪಕ್ಷದ ವಲಯದಲ್ಲಿ ಜೋರಾಗಿ ಕೇಳಿ ಬರುತ್ತಿದೆ.
ವೆಂಕಟೇಶ್ ಯಾದವ್
ವೆಂಕಟೇಶ್ ಯಾದವ್ ಅವರು ಪಕ್ಷ ನಿಷ್ಠೆ ಹೊಂದಿದ ವ್ಯಕ್ತಿಯಾಗಿದ್ದು ಈ ಬಾರಿ ಅಧ್ಯಕ್ಷ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಯಾಗಿದ್ದರು. ಯಾದವ ಸಮುದಾಯದ ನಾಯಕರಾಗಿ ಹೊರಹೊಮ್ಮಿರುವ ವೆಂಕಟೇಶ್ ಯಾದವ್ 2004 ರಿಂದ ಯುವ ಮೋರ್ಚಾ ಉಪಾಧ್ಯಕ್ಷ, ಯುವ ಮೋರ್ಚಾ ಕಾರ್ಯಕಾರಣಿ, ಜಿಲ್ಲಾ ಬಿಜೆಪಿ ಕಾರ್ಯದರ್ಶಿ, ರೈತ ಮೋರ್ಚಾ ಜಿಲ್ಲಾಧ್ಯಕ್ಷ, ಕಾಡುಗೊಲ್ಲ ಸಮುದಾಯದ ಮುಖಂಡರಾಗಿ ಬಿಜೆಪಿ ಪಕ್ಷದಲ್ಲಿ ಸಕ್ರಿಯರಾಗಿ ತೊಡಗಿದ್ದು ಮುರುಳಿ ನಂತರ ನಾನು ಸಹ ಪ್ರಬಲ ಆಕಾಂಕ್ಷಿಯಾಗಿದ್ದೇನೆ ಎಂಬುದರ ಸಾಕಷ್ಟು ಪೈಪೋಟಿಯನ್ನು ನೀಡುತ್ತಿದ್ದಾರೆ.
ಇದನ್ನೂ ಓದಿ: ಮೈಕ್ರೋ ಫೈನಾನ್ಸ್ ಅವರು ನಿಮಗೆ ಕಿರುಕುಳ ಕೊಟ್ಟರೆ ಸಹಾಯವಾಣಿಗೆ ಕರೆ ಮಾಡಿ | Microfinance Harassment
ಚಿತ್ರದುರ್ಗ ಜಿಲ್ಲಾ ಬಿಜೆಪಿ ರಾಜ್ಯ ನಾಯಕರಿಗೆ ಕಬ್ಬಿಣದ ಕಡಲೆಯಾಗಿದೆ. ಇಂತರ ಬೆಳವಣಿಗೆಯಿಂದ ಜಿಲ್ಲಾ ಬಿಜೆಪಿಯಲ್ಲಿ ಎಲ್ಲಾ ಸರಿಯಿಲ್ಲ, ಸರಿ ಇದ್ದಿದ್ದರೆ ಈ ವೇಳೆ ನೂತನ ಬಿಜೆಪಿ ಜಿಲ್ಲಾ ಅಧ್ಯಕ್ಷರ ಆಯ್ಕೆ ಆಗಬೇಕಿತ್ತು ಎಂಬ ಮಾತು ಬಿಜೆಪಿ (Chitradurga BJP) ವಲಯದಲ್ಲಿ ಕೇಳುತ್ತಿದ್ದು ಜಿಲ್ಲಾ ಬಿಜೆಪಿ ಬಣಬಡಿದಾಟದಿಂದ ಜಿಲ್ಲಾ ಬಿಜೆಪಿಗೆ ಯಾರು ಸಾರಥಿ ಆಗುತ್ತಾರೆ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.