
Chitradurga news|nammajana.com|16-6-2024
ನಮ್ಮಜನ.ಕಾಂ, ಚಿತ್ರದುರ್ಗ: ಮೈಸೂರು ಜಿಲ್ಲೆಯ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ಬಿಜೆಪಿ ಅಧ್ಯಕ್ಷ ಗೆಜ್ಜಗಳ್ಳಿ ಮಹೇಶ್ ಅವರು ಮೃತ ರೇಣುಕಾ ಸ್ವಾಮಿ ಅವರ ನಿವಾಸಕ್ಕೆ ಭೇಟಿ ನೀಡಿ ಅವರ ತಂದೆ-ತಾಯಿಯವರಿಗೆ ಸಾಂತ್ವನ (Chitradurga) ಹೇಳಿದ್ದಾರೆ.
ಇದನ್ನೂ ಓದಿ: K. C. Veerendra Puppy: ರೇಣುಕಾಸ್ವಾಮಿ ಕುಟುಂಬಕ್ಕೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಕೊಟ್ಟ ಭರವಸೆಗಳೇನು?

ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಾಮಾಯಾಣದಲ್ಲಿ ಶ್ರವಣಕುಮಾರ ತಂದೆ ತಾಯಿಗೆ ಯಾವ ಪರಿಸ್ಥಿತಿ ಬಂದಿತ್ತು, ಅದೇ ಪರಿಸ್ಥಿತಿ ಮನಸ್ಸಿಗೆ ನೋವಾಗಿದೆ. ಆದ ಕಾರಣ ನಮ್ಮ ಕಡೆಯಿಂದ ಆದ ಸಹಾಯ ಮಾಡುತ್ತಿದ್ದೇವೆ. ಯಾರೇ ತಪ್ಪು ಮಾಡಿರಲಿ ಅವರಿಗೆ ಶಿಕ್ಷೆ ಆಗಬೇಕು (Chitradurga) ಎಂದು ತಿಳಿಸಿ ನಟರಿಂದ ಅಭಿಮಾನಿಗಳಲ್ಲ ಅಭಿಮಾನಿಗಳಿಂದ ನಟರು ಎಂದರು. ಮೃತ ರೇಣುಕಾಸ್ವಾಮಿ ಕುಟುಂಬದವರಿಗೆ 60 ಸಾವಿರ ಚೆಕ್ ವಿತರಣೆ ಮಾಡಿದರು.
