Chitradurga news | nammajana.com | 7-9-2024
ಹೈಲೆಟ್ಸ್
- ಚಿತ್ರಲಿಂಗಪ್ಪ, ಸೇತೂರಾಂ, ಅಜಿತ್ ಮೇಲೆ ಎಫ್‌ಐಆರ್
- • ಮಾಜಿ ನಿರ್ದೇಶಕ ಕರಿಯಪ್ಪನಗರ ಠಾಣೆ ಪೊಲೀಸರಿಗೆ ದೂರು
ನಮ್ಮಜನ.ಕಾಂ, ಚಿತ್ರದುರ್ಗ: ಚಿತ್ರದುರ್ಗ ನಗರದ ಪ್ರತಿಷ್ಠಿತ ಸಿಟಿ ಇನ್ ಸ್ಟಿಟ್ಯೂಟ್ ನಲ್ಲಿ ನಡೆದಿದೆ ಎನ್ನಲಾದ ಲಕ್ಷಾಂತರ ರುಪಾಯಿ ಅವ್ಯವಹಾರಕ್ಕೆ ಸಂಬಂಧಿಸಿದಂತೆ (Chitradurga)ಮಾಜಿಕಾರ್ಯದರ್ಶಿ ಬಿ. ಚಿತ್ರಲಿಂಗಪ್ಪ, ಮಾಜಿ ಉಪಾಧ್ಯಕ್ಷ ಎಂ.ಎ. ಸೇತೂರಾಂ, ಮಾಜಿ ಖಜಾಂಚಿ ಅಜಿತ್ ಕುಮಾರ್ ಜೈನ್ ಮೇಲೆ ಚಿತ್ರದುರ್ಗ ನಗರಠಾಣೆ ಪೊಲೀಸರು ಠಾಣೆಯಲ್ಲಿ ಎಫ್ ಐ ಆರ್ ದಾಖಲು ಮಾಡಿದ್ದಾರೆ.
ಮಾಜಿ ನಿರ್ದೇಶಕ ಡಿ.ವಿ.ಟಿ ಕರಿಯಪ್ಪ ಅವರ ದೂರಿನನ್ವಯ ಪೊಲೀಸರು FIR ದಾಖಲಿಸಿಕೊಂಡಿದ್ದಾರೆ.
ಕಳೆದ ಆಡಳಿತ ಮಂಡಳಿ ಉಪಾಧ್ಯಕ್ಷ ಎಂ.ಎ.ಸೇತೂರಾಂ, ಕಾರ್ಯದರ್ಶಿ ಬಿ. ಚಿತ್ರಲಿಂಗಪ್ಪ, ಖಜಾಂಚಿ ಅಜಿತ್ (Chitradurga) ಕುಮಾರ್‌ಜೈನ್ ಅವರು ಸಂಸ್ಥೆ ಬೈಲಾ ಉಲ್ಲಂಘಿಸಿ ಲಕ್ಷಾಂತರ ರುಪಾಯಿ ಅವ್ಯವಹಾರ ಮಾಡಿದ್ದಾರೆ. ಸಂಸ್ಥೆಯ ಸದಸ್ಯರಿಗೆ ನೀಡಲು ಒಂದು ಸಾವಿರ ಸೂಟ್ ಕೇಸ್ ಖರೀದಿಸಲಾಗಿದ್ದು ಟೆಂಡರ್ ಕರಿಯಪ್ಪ ಆರೋಪಿಸಿದ್ದಾರೆ.
ಇದನ್ನೂ ಓದಿ: Dina Bhavishya: ಇಂದಿನ ಗಣೇಶ ಹಬ್ಬಕ್ಕೆ ಯಾರಿಗೆ ಶುಭ ಅಶುಭ?
ಸಂಸ್ಥೆಯ 2020-2021 ಮತ್ತು 2021-22 ನೇ ಸಾಲಿನ ವಾರ್ಷಿಕ ಮಹಾ ಸಭೆ ನಡೆಸದೆ ನಕಲಿ ದಾಖಲೆ ಸೃಷ್ಟಿಸಿ ಉಪ ನಿಬಂಧಕರ ಕಚೇರಿಗೆ ಲೆಕ್ಕ ಪತ್ರ ನೀಡಿ ಸಂಸ್ಥೆ ನವೀಕರಣ (Chitradurga) ಮಾಡಲಾಗಿದೆ ಎಂದು ವಿವಿಧ ಅಂಶಗಳನ್ನೊಳಗೊಂಡ ದೂರು ಕಾನೂನು ಕ್ರಮಕ್ಕೆ ಆ ಆಗ್ರಹಿಸಿದ್ದರು. ನೀಡಿ ಸೂಕ್ತ ದೂರು ದಾಖಲಿಸಿಕೊಂಡಿರುವ ನಗರ ಠಾಣೆ , 409, 465,471,468, 420 ಅಡಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.