Chitradurga news |nammajana.com|11-6-2024
ನಮ್ಮಜನ.ಕಾಂ, ಚಿತ್ರದುರ್ಗ: ಚಿತ್ರದುರ್ಗ (Chitradurga crime) ನಗರದ ಬ್ಯಾಂಕ್ ಕಾಲೋನಿ ವ್ಯಕ್ತಿ ರೇಣುಕಾಸ್ವಾಮಿ ಕೊಲೆಯಾಗಿದ್ದಾನೆ. ದರ್ಶನ್ ಅವರು ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆದುಕೊಂಡು ಬರಲು ಚಿತ್ರದುರ್ಗದ ಅಭಿಮಾನಿಗಳ ಸಂಘದ ಅಧ್ಯಕ್ಷ ರಘು ಅವರಿಗೆ ಫೋನ್ ಮಾಡಿ ಹೇಳಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Renukaswamy murder: ರೇಣುಕಾಸ್ವಾಮಿ ಕೊಲೆ | ಮಾಜಿ ಶಾಸಕರಾದ G.H.ತಿಪ್ಪಾರೆಡ್ಡಿ, S.K.ಬಸವರಾಜನ್ ಹೇಳಿದ್ದೇನು?
ಆ ನಂತರ ಅವರನ್ನು ಕಾಮಾಕ್ಷಿಪಾಳ್ಯದ ಶೆಡ್‌ಗೆ ಕರೆದುಕೊಂಡು ಬರಲಾಗಿತ್ತು. ಬೆಂಗಳೂರಿನ ಶೆಡ್‌ನಲ್ಲಿ ರೇಣುಕಾಸ್ವಾಮಿ ಮೇಲೆ ಹಲ್ಲೆ ಆಗಿದ್ದು, ಭಾರೀ ಪೆಟ್ಟು ಬಿದ್ದ ಕಾರಣ ಮೃತಪಟ್ಟಿದ್ದಾರೆ. ಆಮೇಲೆ ಕಾಮಾಕ್ಷಿಪಾಳ್ಯದ ಬಳಿಯ ಮೋರಿಗೆ (Chitradurga crime) ರೇಣುಕಾಸ್ವಾಮಿಗೆ ಶವವನ್ನು ಬೀಸಾಡಲಾಗಿತ್ತು. ಆ ಶವವನ್ನು ನಾಯಿಗಳು ಎಳೆದಾಡುವಾಗ ಮೃತದೇಹ ಇರೋದು ಪತ್ತೆಯಾಗಿದೆ. ಇದನ್ನು ಕಂಡ ಕೇವಲ್ ರಾಮ್ ದೋರ್ ಜೀ ಎಂಬ ಅಪಾರ್ಟ್‌ಮೆಂಟ್ ಭದ್ರತಾ ಸಿಬ್ಬಂದಿ ಪೊಲೀಸರಿಗೆ ದೂರು ನೀಡಿದ್ದಾರೆ.
