Chitradurga news|nammajana.com|30-9-2024
ನಮ್ಮಜನ.ಕಾಂ, ಚಿತ್ರದುರ್ಗ: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನಟ ದರ್ಶನ್ ಜೈಲಿನಲ್ಲಿ (Chitradurga) ಬಂಧಿಯಾಗಿದ್ದಾರೆ.ಆದರೂ ಶನಿವಾರ (ಸೆಪ್ಟೆಂಬರ್ 28) ಹಿಂದೂ ಮಹಾಗಣಪತಿ ಬೃಹತ್ ಶೋಭಾಯಾತ್ರೆಯಲ್ಲಿ ಕೆಲ ಅಭಿಮಾನಿಗಳು ದರ್ಶನ್ ಭಾವಚಿತ್ರದ ಬಾವುಟ ಹಿಡಿದಿದ್ದು, ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಈ ವೇಳೆ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಹಾಗೂ ದರ್ಶನ್ ಫ್ಯಾನ್ಸ್ ಮಧ್ಯೆ ವಾಗ್ವಾದ ನಡೆಯಿತು.
ನಗರದ ಮದಕರಿ ಸರ್ಕಲ್‌ನಲ್ಲಿಈ ಘಟನೆ ನಡೆದಿದೆ. ಮದಕರಿ ವೃತ್ತದಲ್ಲಿ ಕೆಲವರು ಸುದೀಪ್ ಭಾವಚಿತ್ರದ ಫ್ಲ್ಯಾಗ್ ಹಿಡಿದು ಡಾನ್ಸ್ ಮಾಡಿದ್ದು, ಮತ್ತೊಂದೆಡೆ ಇನ್ನೂ ಕೆಲವರು ದರ್ಶನ್ ಭಾವಚಿತ್ರದ ಫ್ಲ್ಯಾಗ್ ಪ್ರದರ್ಶನ ಮಾಡಿದ್ದಾರೆ.
ಈ ವೇಳೆ ದರ್ಶನ್ ಭಾವಚಿತ್ರದ ಫ್ಲ್ಯಾಗ್ ಹಾರಿಸುವುದಕ್ಕೆ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ವಿರೋಧ ವ್ತಕ್ತೊಡಿಸಿದ್ದಾರೆ. ಅಲ್ಲದೆ, ದರ್ಶನ್ ಅಭಿಮಾನಿಗಳಿಂದ ಫ್ಲ್ಯಾಗ್ ಕಿತ್ತುಕೊಂಡು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ದರ್ಶನ್ ಭಾವಚಿತ್ರದ (Chitradurga) ಫ್ಲ್ಯಾಗ್ ಕಿತ್ತು ಪೊಲೀಸರಿಗೆ ನೀಡಿದರು. ಈ ಮೂಲಕ ದರ್ಶನ್ ಭಾವಚಿತ್ರವಿರುವ ಬಾವುಟವನ್ನು ಸೀಜ್ ಮಾಡಿದ್ದಾರೆ.
ಇದನ್ನೂ ಓದಿ: ಹಿಂದೂ ಮಹಾಗಣಪತಿ | ನಾವೆಲ್ಲಾ ಹಿಂದೂ ಒಗ್ಗಟ್ಟಾಗಿ ಇರಬೇಕಿದೆ: ನೀರಜ್ ದೋನೆರಿಯಾ ಕರೆ | Hindu Mahaganapati
ಇನ್ನೂ ಇತ್ತೀಚೆಗೆ ಫ್ಯಾನ್ ವಾರ್‌ಗಳು ಹೆಚ್ಚಾಗುತ್ತಿವೆ. ಅಂಧಾಭಿಮಾನಿಗಳಿಂದಲೇ ಇಂತಹ ಘಟನೆಗಳು ನಡೆಯಲು ಸಾಧ್ಯ. ಹಾಗೆಯೇ ಇಂದು ಚಿತ್ರದುರ್ಗದಲ್ಲಿ ಹಿಂದೂ ಮಹಾಗಣಪತಿ ವಿಸರ್ಜನಾ ಮೆರವಣಿಗೆ ವೇಳೆ ಕೆಲವು (Chitradurga) ಅಭಿಮಾನಿಗಳು ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಬಾವುಟವನ್ನು ಹಾರಿಸಿದ್ದಾರೆ.
