Chitradurga news|nammajana.com|26-11-2024
ನಮ್ಮಜನ.ಕಾಂ, ಚಳ್ಳಕೆರೆ: ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಅವರ ಮಾರ್ಗದರ್ಶನದಲ್ಲಿ ನವೆಂಬರ್ 29 ಮತ್ತು 30 ಎರಡು ದಿನಗಳ ಕಾಲ ಎಚ್‌ಪಿಪಿಸಿ ಸರ್ಕಾರಿ ಪ್ರಥಮ ದರ್ಜೆ (Chitradurga hero kings) ಕಾಲೇಜಿನಲ್ಲಿ ಚಿತ್ರದುರ್ಗ ನಾಯಕ ಅರಸರ ಬಗ್ಗೆ ರಾಷ್ಟೀಯ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳುವ ಮೂಲಕ ಹೊಸ ಇತಿಹಾಸ ಸೃಷ್ಠಿಮಾಡಲಿ ಎಂದು ಕಾಲೇಜು ಪ್ರಾಚಾರ್ಯ ಪ್ರೊ.ಬಿ.ಎಸ್.ಮಂಜುನಾಥ ತಿಳಿಸಿದರು.
ಅವರು, ಸೋಮವಾರ ಕಾಲೇಜಿನಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಹಂಪಿ ಕನ್ನಡ ವಿಶ್ವವಿದ್ಯಾಲಯದ ವಾಲ್ಮೀಕಿ ಅಧ್ಯಯನ ಪೀಠ, ಕಾಲೇಜು ಶಿಕ್ಷಣ ಇಲಾಖೆ ಮತ್ತು ಕನ್ನಡ ಸಾಹಿತ್ಯ ಪರಿಷತ್ ನ.29 ಮತ್ತು 30 (Chitradurga hero kings) ಎರಡು ದಿನಗಳ ಕಾಲ ಕಾಲೇಜಿನ ವಿಶೇಷ ಸಭಾಂಗಣದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದೆ.
ಕಾರ್ಯಕ್ರಮ ಯಶಸ್ವಿಗೆ ಎಲ್ಲರೂ ಕೈಜೋಡಿಸುವಂತೆ ಮನವಿ ಮಾಡಿದರು. ನ.29 ಶುಕ್ರವಾರ ಬೆಳಗ್ಗೆ 10 ಗಂಟೆಗೆ ಹಂಪಿ ವಿಶ್ವವಿದ್ಯಾಲಯ ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.
ಪ್ರಾಧ್ಯಾಪಕ ಡಾ.ವೆಂಕಟಗಿರಿದಳವಾಯಿ ಆಶಯ ನುಡಿಯಾಡಲಿದ್ದು, ಆಂಧ್ರಪ್ರದೇಶದ ಅನಂತಪುರದ ಕೃಷ್ಣದೇವರಾಯ ವಿವಿಯ ಪ್ರಾಧ್ಯಾಪಕ ಡಾ.ಎನ್.ಸದಾಶಿವರೆಡ್ಡಿ, ಜಾನಪದ ಮತ್ತು ರಂಗಭೂಮಿ ತಜ್ಞ ಪಿ.ತಿಪ್ಪೇಸ್ವಾಮಿ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಜಿ.ಟಿ.ವೀರಭದ್ರಸ್ವಾಮಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದರು. ಕಾರ್ಯಕ್ರಮಕ್ಕೆ (Chitradurga hero kings) ಆಗಮಿಸುವ ಮುಖ್ಯ ಅತಿಥಿಗಳಿಗೆ ಸೂಕ್ತ ಸ್ಥಳಾವಕಾಶವನ್ನು ಮಾಡಿಕೊಡಲಾಗುವುದು ಎಂದರು.
ಎಚ್‌ಪಿಪಿಸಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಕೆ.ಶಿವಾನಂದಯ್ಯ, ರಾಷ್ಟೀಯ ವಿಚಾರ ಸಂಕಿರಣದ ಎರಡು ದಿನದ ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಮಾಹಿತಿ ನೀಡಿದರು.
ಒಟ್ಟು ನಾಲ್ಕು ಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿದೆ. 12 ವಿದ್ವಾಂಸರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಸೂಕ್ತ ಮಾರ್ಗದರ್ಶನ ನೀಡುವರು.
ನ.29 ರ ಬೆಳಗ್ಗೆ 11 ಕ್ಕೆ ಮೊದಲ ಗೋಷ್ಠಿ ಕುವೆಂಪು ವಿಶ್ವವಿದ್ಯಾಲಯ ಕಾರ್ಯಕಾರಿ ಸಮಿತಿ ಸದಸ್ಯ ಡಾ.ಎಸ್.ಎಂ.ಮುತ್ತಯ್ಯ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ವಿಶ್ರಾಂತ ಪ್ರಾಚಾರ್ಯ ಡಾ.ಬಿ.ರಾಜಶೇಖರಪ್ಪ ಶಾಸನಗಳ ಬಗ್ಗೆ, ಡಾ.ಎಚ್.ಗುಡ್ಡದೇಶ್ವರಪ್ಪ ರಾಜಕೀಯ ಇತಿಹಾಸದ ಬಗ್ಗೆ, ಡಾ.ಎಸ್.ವೈ.ಸೋಮಶೇಖರ್ ವಾಸ್ತುಶಿಲ್ಪದ ಬಗ್ಗೆ, ಯುದ್ದ ನೀತಿ ಮತ್ತು ಸೈನ್ಯ ವ್ಯವಸ್ಥೆಯ ಬಗ್ಗೆ ಡಾ.ಆರ್.ಶಿವಪ್ಪ ಮಾತನಾಡಲಿದ್ದು, ತಾಲ್ಲೂಕು ನಾಯಕ ಸಮಾಜದ ಅಧ್ಯಕ್ಷರಾದ (Chitradurga hero kings) ಎಚ್.ಎಂ.ಮಲ್ಲಪ್ಪನಾಯಕ, ಸಹ ಪ್ರಾಧ್ಯಾಪಕ ಡಾ.ಕೆಆರ್‌ಜೆ ರಾಜಕುಮಾರ್‌ಮುಖ್ಯಅತಿಥಿಗಳಾಗಿ ಪಾಲ್ಗೊಳ್ಳುವರು. ಎರಡನೇ ಗೋಷ್ಠಿ ಮಧ್ಯಾಹ್ನ ೩ಕ್ಕೆ ಆರಂಭವಾಗಲಿದ್ದು, ತುಮಕೂರು ವಿಶ್ವವಿದ್ಯಾಲಯದ ಇತಿಹಾಸ ಮತ್ತು ಪುರಾತತ್ವ ಶಾಸ್ತçವಿಭಾಗದ ಮುಖ್ಯಸ್ಥ ಡಾ.ಎಂ.ಕೋಟ್ರೇಶ್ ಅಧ್ಯಕ್ಷತೆ ವಹಿಸಲಿದ್ದು, ರಾಜಾಬಿಚ್ಚುಗತ್ತಿ ಭರಮಣ್ಣನಾಯಕನ ಬಗ್ಗೆ ಹಿರಿಯೂರು ಬಿಇಒ ಸಿ.ಎಂ.ತಿಪ್ಪೇಸ್ವಾಮಿ, ಮಹಾಮತೃಶ್ರೀ ಗಂಡಿ¯ಓಬಳ್ವನಾಯಕಿಯ ಬಗ್ಗೆ ವಿಶ್ರಾಂತಿ ಪ್ರಾಧ್ಯಾಪಕಿ ಡಾ.ಪಿ.ಯಶೋಧ, ಒನಕೆಓಬವ್ವಳ ಬಗ್ಗೆ ಪ್ರಾಧ್ಯಾಪಕ ಡಾ.ಅಮರೇಶ್‌ಯತಗಲ್, (Chitradurga hero kings) ರಾಜವೀರಮದಕರಿನಾಯಕರ ಬಗ್ಗೆ ಹೊಸದುರ್ಗ ಸಂಶೋಧಕ ಬಾಗೂರು ನಾಗರಾಜಪ್ಪ ಮಾಹಿತಿ ನೀಡಲಿದ್ದು, ಮುಖ್ಯ ಅತಿಥಿಗಳಾಗಿ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಟಿ.ವೀರೇಶ್, ಸಹ ಪ್ರಾಧ್ಯಾಪಕ ಎನ್.ಜಗನ್ನಾಥ ಭಾಗವಹಿಸುವರು.
ನ.30ರ ಶನಿವಾರ ಬೆಳಗ್ಗೆ 9 ಕ್ಕೆ ಮೂರನೇ ಗೋಷ್ಠಿ ಆರಂಭವಾಗಲಿದ್ದು, ಪ್ರಾಧ್ಯಾಪಕ ಹಾಗೂ ಸಂಶೋಧನಾ ವಿದ್ಯಾರ್ಥಿಗಳು ಸಂಶೋಧನ ಪ್ರಬಂಧಗಳ ಮಂಡನೆ ಮಾಡುವರು.
ಇದನ್ನೂ ಓದಿ: ಎಸ್.ನಿಜಲಿಂಗಪ್ಪ ಮನೆ ಖರೀದಿ ಕಾರ್ಯ ಶೀಘ್ರ ಮುಗಿಯಲಿ: ಎಚ್.ಟಿ.ಬಳೆಗಾರ್ | S.Nijalingappa
ಅಧ್ಯಕ್ಷತೆಯನ್ನು ಎಚ್‌ಪಿಪಿಸಿ ಕಾಲೇಜು ಕನ್ನಡ ವಿಭಾಗದ ಮುಖ್ಯಸ್ಥ ಡಾ.ಕೆ.ಶಿವಾನಂದಯ್ಯ, ಸಂಚಾಲಕ ಡಾ.ಸಿ.ಚನ್ನಕೇಶವ, ಪ್ರೊ.ಡಾ.ಜಿ.ವಿ.ರಾಜಣ್ಣ, ಎಂ.ಮುರುಳಿ, ಎ.ಎಸ್.ಸತೀಶ್, ಗ್ರಂಥಪಾಲಕ ಡಾ.ಎಸ್.ಪಾಪಣ್ಣ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು. ೪ನೇ ಗೋಷ್ಠಿ ಮಧ್ಯಾಹ್ನ ೧ಗಂಟೆಗೆ ಆರಂಭವಾಗಲಿದ್ದು, ಅಧ್ಯಕ್ಷತೆಯನ್ನು ಪ್ರೋ.ಎಂ.ಜಿ.ರಂಗಸ್ವಾಮಿ ವಹಿಸುವರು. ಜಾನಪದ ಬಗ್ಗೆ ವಿಶ್ರಾಂತ ಪ್ರಾಧ್ಯಾಪಕ ಡಾ.ಮೀರಸಾಬಿಹಳ್ಳಿಶಿವಣ್ಣ, ಕಟ್ಟೆಮನೆಗಳ ಬಗ್ಗೆ ಡಾ.ವಿರೂಪಾಕ್ಷಿಪೂಜಾರಹಳ್ಳಿ, ಅಲಕ್ಷಿತ ನಾಗತಿಯರ ಬಗ್ಗೆ ಡಾ.ಬಿ.ಜಯಮ್ಮ, ನಾಯಕರ ಕುರಿತು ಅಧ್ಯಯನಗಳ ಬಗ್ಗೆ ಡಾ.ಎನ್.ಎಸ್.ಮಹಂತೇಶ್ ಮಾಹಿತಿ ನೀಡಲಿದ್ದು, ವಿಶ್ರಾಂತ ಪ್ರಾಧ್ಯಾಪಕ ಡಾ.ಶಿವಲಿಂಗಪ್ಪ, ಡಾ.ಎಂ.ಕೆ.ದೇವಪ್ಪ, ಡಾ.ಕೆ.ಚಿತ್ತಯ್ಯ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.
ಇದನ್ನೂ ಓದಿ: ಕೆರೆಗೆ ನೀರು ಹರಿಸಿ ಹೋರಾಟಕ್ಕೆ 160 ದಿನ | Fill the lake:
ನ.30ರ ಶನಿವಾರ ಸಂಜೆ 4 ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಅಧ್ಯಕ್ಷತೆಯನ್ನು ಹಂಪಿ ವಿಶ್ವವಿದ್ಯಾಲಯ ಕುಲಸಚಿವ ಡಾ.ವಿಜಯ್‌ಪೂಣಚ್ಚತಂಬಡ ಅಧ್ಯಕ್ಷತೆ ವಹಿಸಲಿದ್ದು, ಹರ್ತಿಕೋಟೆ ವೀರೇಂದ್ರಸಿಂಹ ಸಮಾರೋಪನುಡಿ ನುಡಿಯುವರು. ಡಾ.ಅರ್ಜುನ ಯ.ಪಂಗಣ್ಣನವರ, ಖ್ಯಾತಸಾಹಿತಿ ಬಿ.ತಿಪ್ಪಣ್ಣಮರಿಕುಂಟೆ, ನೌಕರರ ಸಂಘದ ಮಾಜಿ ಅಧ್ಯಕ್ಷ ಕೆ.ಸೂರನಾಯಕ, (Chitradurga hero kings) ಡಿ.ಒ.ತಿಪ್ಪೇಸ್ವಾಮಿ, ಪ್ರಾಚಾರ್ಯ ಬಿ.ಎಸ್.ಮಂಜುನಾಥ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು ಎಂದು ತಿಳಿಸಿದ್ದಾರೆ.