Chitradurga news|Nammajana.com|12-9-2025
ನಮ್ಮಜನ.ಕಾಂ, Chitradurga: ಹಿಂದೂ ಮಹಾಗಣಪತಿ ಶೋಭಾ ಯಾತ್ರೆಯ ಡಿಜೆ ಮೆರವಣಿಗೆಗಳ ಕುರಿತು ಪ್ರತಿಭಟನೆ (Chitradurga Hindu Mahaganpati 2025) ನಂತರ ಹಲವು ಬೆಳವಣಿಗೆಗಳ ನಂತರ ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ನೇತೃತ್ವದಲ್ಲಿ ಪೋಲಿಸ್ ಅವರ ಜೊತೆ ಮಾತುಕತೆ ನಂತರ ಅಂತಿಮ ತೆರೆ ಬಿದ್ದಿದೆ.

ಈ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಮಾತನಾಡಿ ಡಿಜೆ ಮೆರವಣಿಗೆ ಕುರಿತು ವಿಶ್ವ ಹಿಂದೂ ಪರಿಷತ್ ಸಂಘಟನೆ ಪ್ರತಿಭಟನೆ ಮತ್ತು ಪೋಲಿಸ್ ಇಲಾಖೆ ನಡುವೆ ಸಣ್ಣ ವ್ಯತ್ಯಸವಾಗಿತ್ತು. ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಮತ್ತು ಐಜಿ ಅವರ ಜೊತೆ ನಮ್ಮ ಸಂಸದ ಕಾರಜೋಳ್ ಮತ್ತು ನಾನು ಮಾತನಾಡಿದ್ದು ಜಿಲ್ಲಾಡಳಿತದ ಸಭೆಯಲ್ಲಿ ನಮ್ಮ ಸಂಘಟನೆಯವರ ಮಾತು ಕೊಟ್ಟಂತೆ (Chitradurga Hindu Mahaganpati 2025) ನಡೆದುಕೊಳ್ಳುತ್ತಾರೆ ಎಂದರು.
ಸರ್ಕಾರ ಕಾಳಜಿ ವಹಿಸಿ ಇಂಟಲಿಜೆನ್ಸ್ ರಿಪೋರ್ಟ್ ನೋಡಿ ಹೆಚ್ಚು ಮುಜುವರ್ಜಿ ವಹಿಸಿದ್ದು ಏಕೆ ಎಂದು ಗೊತ್ತಿಲ್ಲ. ನಾವು ಎಲ್ಲಾ ಇಲ್ಲೇ ಇದ್ದೇವೆ. ಯಾವಗಲೂ ನಮ್ಮ ಅಂತಹ ಅಹಿತಕರ ಘಟನೆ ನಡೆದಿಲ್ಲ ನಡೆಯಲು ಬಿಡುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದರು.
ಆರು ವಾಹನಗಳಿಗೆ ಡಿಜೆ ಸ್ಪೀಕರ್ ಬಾಕ್ಸ್ ಕಟ್ಟಲು ಅವಕಾಶ
ನಮ್ಮ ಸಂಘಟನೆಯವರು ಈ ಮೊದಲು ನಾಲ್ಕು ವಾಹನಗಳಿಗೆ ಸ್ಪೀಕರ್ ಬಾಕ್ಸ್ ಕಟ್ಟಲು ಅವಕಾಶ ನೀಡಿತ್ತು. ಆದರೆ ಈಗ ಆರು ವಾಹನಗಳಿಗೆ ಒಂದು ವಾಹನಕ್ಕೆ ನಾಲ್ಕು ಸ್ಪೀಕರ್ ಬಾಕ್ಸ್ ನಂತೆ ಇನ್ಮೂ ಎರಡು ಹೆಚ್ಚು ವಾಹನಕ್ಕೆ ಅನುಮತಿ ಪಡೆದಿದ್ದು ಪ್ರತಿ (Chitradurga Hindu Mahaganpati 2025) ವರ್ಷದಂತೆ ಶಾಂತಿಯುತವಾಗಿ ಮತ್ತು ಅದ್ದೂರಿಯಾಗಿ ಹಿಂದೂ ಮಹಾಗಣಪತಿ ಶೋಭಾಯಾತ್ರೆ ನಡೆಯಲಿದೆ ಎಂದು ತಿಳಿಸಿದರು.
