Chitradurga news|Nammajana.com|5-8-2025
ನಮ್ಮಜನ.ಕಾಂ, ಚಿತ್ರದುರ್ಗ: ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜಂಟಿ ಕ್ರಿಯಾ ಸಮಿತಿ ಇಂದಿನಿಂದ ರಾಜ್ಯವ್ಯಾಪಿ ಸಾರಿಗೆ ನೌಕರರ ಮುಷ್ಕರಕ್ಕೆ ಕರೆ ನೀಡಿದೆ. ಬೆಳಗ್ಗೆ 5 ಗಂಟೆಗೆ ಈ ಸುದ್ದಿ ಪ್ರಕಟವಾಗುವ ಹೊತ್ತಿಗೆ ಚಿತ್ರದುರ್ಗದಲ್ಲಿ KSRTC ಬಸ್ಸುಗಳ ಸಂಚಾರದಲ್ಲಿ ವ್ಯತ್ಯಸವಾಗಿದ್ದು ಬೆಳಗ್ಗೆ 7-30 ಗಂಟೆವರೆ ಚಿತ್ರದುರ್ಗ ಡಿಪೋ ದಿಂದ ಒಂದು ಬಸ್ ಸಹ ರಸ್ತೆಗೆ ಇಳಿದಿಲ್ಲ.

ಬೆಳಗ್ಗೆ 6 ಗಂಟೆಯಿಂದಲೆ ಮುಷ್ಕರ ನಡೆಸುವುದಾಗಿ ಜಂಟಿ ಕ್ರಿಯಾ ಸಮಿತಿ ಮತ್ತು ಎಐಟಿಯುಸಿ ಮುಖಂಡರು ತಿಳಿಸಿದ್ದರು. ಆದರೆ
ಸದ್ಯ ಹೇಗಿದೆ ಚಿತ್ರದುರ್ಗ ಬಸ್ ನಿಲ್ದಾಣದ ಸ್ಥಿತಿ?
- ಬೆಂಗಳೂರು, ಹುಬ್ಬಳ್ಳಿ ಸೇರಿದಂತೆ ವಿವಿಧ ಊರುಗಳಿಂದ ಕೆಎಸ್‌ಆರ್‌ಟಿಸಿ ಬಸ್ಸುಗಳು ಚಿತ್ರದುರ್ಗ ನಿಲ್ದಾಣಕ್ಕೆ ಆಗಮಿಸುತ್ತಿವೆ.
- ಚಿತ್ರದುರ್ಗ ಬಸ್ ನಿಲ್ದಾಣದಿಂದ ವಿವಿಧ ಊರುಗಳಿಗೆ ಬಸ್ಸುಗಳು ಪ್ಲಾಟ್‌ಫಾರಂಗಳಲ್ಲಿ ಒಂದು ಬಸ್ ಸಹ ನಿಂತಿಲ್ಲ.
- ಬಸ್ ನಿಲ್ದಾಣಕ್ಕೆ ಬೆಳಗ್ಗೆಯಿಂದಲೇ ಪ್ರಯಾಣಿಕರು ಆಗಮಿಸುತ್ತಿದ್ದು ಬಸ್ ಇಲ್ಲದೇ ಪ್ರಯಾಣಿಕರಿಗೆ ಪರದಾಟ ಶುರುವಾಗಿದೆ.
- ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆ ಚಿತ್ರದುರ್ಗ ನಿಲ್ದಾಣದ ಬಳಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.
- ನಿತ್ಯ1300 ಸಾರಿಗೆ ನೌಕರರು ಕಾರ್ಯ ನಿರ್ವಹಿಸುತ್ತಿದ್ದು ಯಾರು ಸಹ ಆಗಮಿಸಿಲ್ಲ.
ಇದನ್ನೂ ಓದಿ: ಚಿತ್ರದುರ್ಗ Ksrtc ನೌಕರ ಮುಷ್ಕರ, ರಸ್ತೆ ಬಂದಿಲ್ಲ ಬಸ್, ಜನರಿಗೆ ಪರದಾಟ ಗ್ಯಾರೆಂಟಿ | KSRTC bus shutdown
ಚಿತ್ರದುರ್ಗ ಬಸ್ ನಿಲ್ದಾಣಕ್ಕೆ ನಿತ್ಯ 329 ಕೆಎಸ್‌ಆರ್‌ಟಿಸಿ ಬಸ್ಸುಗಳು ಬಂದು ಹೋಗುತ್ತವೆ. ನಿತ್ಯ 10 ರಿಂದ 15 ಸಾವಿರಕ್ಕು ಹೆಚ್ಚು ಪ್ರಯಾಣಿಕರು ಬಂದು ಹೋಗುತ್ತಾರೆ. ಮುಷ್ಕರದ ಹಿನ್ನೆಲೆ ಪ್ರಯಾಣಿಕರು ಆತಂಕಕ್ಕೀಡಾಗಿದ್ದಾರೆ.
