Chitradurga news|nammajana.com|10-6-2024
ನಮ್ಮಜನ.ಕಾಂ, ಚಿತ್ರದುರ್ಗ: ಚಿಕ್ಕಂದಿನಿಂದಲೇ ಮಕ್ಕಳಲ್ಲಿ ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವ ಅಗತ್ಯವಿದೆ (Chitradurga) ಎಂದು ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಸಿ.ರಘುಚಂದನ್ ಹೇಳಿದರು.
ನಗರದ ಮಾತೃ ಛಾಯಾ ಬಡಾವಣೆಯಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ನೀಲಾದ್ರಿ ನೇಸರ ಕ್ಷೇಮಾಭಿವೃದ್ದಿ ಸಂಘ ಹಾಗೂ ನೀಲಾದ್ರಿ ಲೇಡಿಸ್ ಕ್ಲಬ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಗಿಡ ನೆಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಾನವನ ದುರಾಸೆಯಿಂದ ಗಿಡ-ಮರ, ಕಾಡುಗಳು ನಾಶವಾಗುತ್ತಿದೆ. ಸಕಲ (Chitradurga) ಜೀವರಾಶಿಗಳು ನೆಮ್ಮದಿಯಿಂದ ಇರಬೇಕಾದರೆ ಹಸಿರು ಪರಿಸರವಿರಬೇಕು. ಚಿಕ್ಕಂದಿನಿಂದಲೇ ಮಕ್ಕಳ ಕೈಯಲ್ಲಿ ಗಿಡ ನೆಡಿಸುವ ಮೂಲಕ ಪರಿಸರ ಕಾಪಾಡುವ ಬಗ್ಗೆ ತಿಳಿಸಬೇಕಿದೆ ಎಂದರು.
ಇದನ್ನೂ ಓದಿ: Hosadurga: ಬೀರು ಬಾಟಲಿ ತುಂಬಿದ ಲಾರಿ ಪಲ್ಟಿ.
ನೀಲಾದ್ರಿ ನೇಸರ ಕ್ಷೇಮಾಭಿವೃದ್ದಿ ಹಾಗೂ ನೀಲಾದ್ರಿ ಲೇಡಿಸ್ ಕ್ಲಬ್ ಅಧ್ಯಕ್ಷರುಗಳು ಹಾಗೂ ಸದಸ್ಯರು ಈ ಸಂದರ್ಭದಲ್ಲಿ ಹಾಜರಿದ್ದರು.