Chitradurga news|nammajana.com|16-9-2024
ನಮ್ಮಜನ.ಕಾಂ, ಚಿತ್ರದುರ್ಗ: ನೀರಾವರಿ ಅನುಷ್ಠಾನ (Chitradurga) ಹೋರಾಟ ಸಮಿತಿಯಿಂದ ಇಂದು ಶಾಸಕ ವೀರೇಂದ್ರ ಪಪ್ಪಿ ಮನೆ ಮುಂಭಾಗ ತಮಟೆ ಚಳುವಳಿಗೆ ಸಿದ್ದತೆ ಮಾಡಲಾಗಿದೆ.

ಚಿತ್ರದುರ್ಗ-ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ನೀಡುವಲ್ಲಿ ಉದಾಸೀನ ತೋರುತ್ತಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡೆ ಖಂಡಿಸಿ ಹಾಗೂ ಎಚ್ಚರಿಸುವ ಸಂಬಂಧ (Chitradurga) ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಸೆಪ್ಟಂಬರ್ 16 ರ ಸೋಮವಾರ ಶಾಸಕ ವೀರೇಂದ್ರ ಪಪ್ಪಿ ಅವರ ನಿವಾಸದ ಮುಂಭಾಗ ತಮಟೆ ಚಳವಳಿ ಹಮ್ಮಿಕೊಂಡಿದೆ.
ಇದನ್ನೂ ಓದಿ: ದಾಖಲೆಯ ಮಾನವ ಸರಪಳಿ ನಿರ್ಮಾಣ : ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಹರ್ಷ | Chitradurga
ಚಿತ್ರದುರ್ಗ ಜೆಸಿಆರ್ ಬಡಾವಣೆಯ ಒಂದನೇ ಕ್ರಾಸ್ ನಲ್ಲಿರುವ ಶಾಸಕ ವೀರೇಂದ್ರ ಪಪ್ಪಿ ಮನೆ ಮುಂಭಾಗ ಬೆಳಿಗ್ಗೆ 11 (Chitradurga) ಗಂಟೆಯಿಂದ ತಮಟೆ ಚಳವಳಿ ಆರಂಭವಾಗಲಿದೆ ಎಂದು ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ತಿಳಿಸಿದ್ದಾರೆ.
