ನಮ್ಮಜನ.ಕಾಂ, ಚಿತ್ರದುರ್ಗ: ನಗರದ ತುರುವನೂರು ರಸ್ತೆಯಲ್ಲಿ ನಡೆಸುತ್ತಿರುವ ಶ್ರೀ ತಿಪ್ಪೇರುದ್ರಸ್ವಾಮಿ ಆಶ್ರಮದಲ್ಲಿ ತಾಯಿ ಮತ್ತು ಮಗಳು ಮೃತಪಟ್ಟಿರುವ ಘಟನೆ ನಡೆದಿದೆ.
ತುರುವನೂರು ರಸ್ತೆಯಲ್ಲಿರುವ ಶ್ರೀ ತಿಪ್ಪೇರುದ್ರಸ್ವಾಮಿ ಆಶ್ರಮದಲ್ಲಿರುವ ನಿತ್ಯ ಉಪಯೋಗಿಸುವ ನೀರಿನ ತೊಟ್ಟಿಯಲ್ಲಿ (ಸಂಪು)ನಲ್ಲಿ ಮಗಳ ಮೃತದೇಹ ಪತ್ತೆಯಾದರೆ, ಡ್ರಮ್ ನಲ್ಲಿ ಡ್ರಮ್ಮಿನಲ್ಲಿ ತಾಯಿಯ ಮೃತ ದೇಹ ಪತ್ತೆಯಾಗಿದೆ.
ಈ ಘಟನೆಯಲ್ಲಿ ಮೃತಪಟ್ಟವರು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಮೂಲದ ಸುರೇಶ್ ಎಂಬುವವರ ಪತ್ನಿ ಗೀತಾ(40) ಹಾಗೂ ಪುತ್ರಿ ಪ್ರಿಯಾಂಕ (22) ಶವವಾಗಿ ಪತ್ತೆಯಾಗಿದೆ.

Read Also: Ground Report: ಕಮಲ ಪಡೆಗೆ ಬಂಡಾಯದ ಬಿಸಿ ಹೆಚ್ಚಿಸಿದ್ದ ಹೊಳಲ್ಕೆರೆಯಲ್ಲಿ ಹೇಗಿದೆ ವಾತಾವರಣ, ಕೈ ಪಡೆಯ ಕತೆ ಏನು?
ಮಂಗಳವಾರ ರಾತ್ರಿ ಈ ಘಟನೆ ನಡೆದಿದ್ದು ಮಾಹಿತಿ ತಿಳಿದಯುತ್ತಿದ್ದಂತೆ ಅಲರ್ಟ್ ಆದ ಪೊಲೀಸರು ತಡರಾತ್ರಿ 1 ಗಂಟೆವರೆಗೆ ಸ್ಥಳ ಪರಿಶೀಲನೆ ನಡೆಸಿ ಮೃತದೇಹಗಳನ್ನು ಶವಾಗಾರಕ್ಕೆ ಸ್ಥಳಾಂತರ ಮಾಡಿಸಿದ್ದಾರೆ.
ಕಳೆದ 3-4 ವರ್ಷಗಳಿಂದ ತಿಪ್ಪೇರುದ್ರಸ್ವಾಮಿ ಆಶ್ರಮದಲ್ಲಿ ವಾಸಿಸುತ್ತಿದ್ದ ಸುರೇಶ್ ಹಾಗೂ ಗೀತಾ ಕುಟುಂಬ ದೇವಸ್ಥಾನದಲ್ಲಿ ಪೂಜೆ ನೇರವೇರಿಸಿಕೊಂಡು ಜೀವನ ನಡೆಸುತ್ತಿದ್ದರು.
ಮಂಗಳವಾರ ಸಂಜೆ ಗೀತಾ ಅವರ ಪತಿ ಸುರೇಶ್ ಹಾಗೂ ಪುತ್ರ ಮೋಹನ್ ಆಶ್ರಮದಿಂದ ಹೊರಗೆ ತೆರಳಿದ್ದರು. ರಾತ್ರಿ ವಾಪಾಸ್ ಬರುತ್ತಿದ್ದಂತೆ ಇಬ್ಬರ ಮೃತ ದೇಹ ನೋಡಿ ಅವರಿಗೆ ಶಾಕ್ ಆಗಿದೆ.
ತಾಯಿ ಮಗಳ ಸಾವಿನ ಕುರಿತು ಅನುಮಾನ ವ್ಯಕ್ತವಾಗಿದ್ದು ಚಿತ್ರದುರ್ಗ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಪ್ರಕರಣಕ್ಕೆ ಮೂಲ ಕಾರಣ ತನಿಖೆಯಿಂದ ಹೊರಬರಬೇಕಿದೆ.
English Summary: Mother-daughter suicide in Sri Tipperudraswamy Ashram, Turvanur Road, Chitradurga A dead body was found in a water tank. Chitradurga Crime News
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252