Chitradurga news | nammajana.com | 26-8-2024
ನಮ್ಮಜನ.ಕಾಂ, ಚಿತ್ರದುರ್ಗ: ಚಿತ್ರದುರ್ಗ ನಗರಸಭೆ (Chitradurga Municipality) ಚುನಾವಣೆ ಫಲಿತಾಂಶ ಅಧಿಕೃತವಾಗಿ ಪ್ರಕಟವಾಗಿದ್ದು ಅಧ್ಯಕ್ಷರಾಗಿ ಬಿ.ಎನ್. ಸುಮಿತ ರಾಘವೇಂದ್ರ ಮತ್ತು ಉಪಾಧ್ಯಕ್ಷರಾಗಿ ಶ್ರೀದೇವಿ ಚಕ್ರವರ್ತಿ ನೂತನವಾಗಿ ಆಯ್ಕೆಯಾಗಿದ್ದಾರೆ.
ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ 29ನೇ ವಾರ್ಡ್ ಸದಸ್ಯೆ ಬಿ.ಎನ್.ಸುಮಿತ ರಾಘವೇಂದ್ರ, 32 ನೇ ವಾರ್ಡ್ ಎಸ್.ಸಿ.ತಾರಕೇಶ್ವರಿ ಹಾಗೂ ಉಪಾಧ್ಯಕ್ಷ ಸ್ಥಾನಕ 33ನೇ (Chitradurga Municipality) ವಾರ್ಡ್ ಸದಸ್ಯೆ ಜಿ.ಎಸ್.ಶ್ರೀದೇವಿ ಚಕ್ರವರ್ತಿ ಹಾಗೂ 22 ವಾರ್ಡ್ ಬಿ.ಎಸ್.ರೋಹಿಣಿ ನವೀನ್ ನಾಮಪತ್ರ ಸಲ್ಲಿಸಿದ್ದರು.
ಇದನ್ನೂ ಓದಿ: ಚಿತ್ರದುರ್ಗ ನಗರಸಭೆಗೆ ಎರಡು ಕಡೆಯಿಂದ ನಾಮಪತ್ರ ಸಲ್ಲಿಕೆ | ಯಾರ್ಯಾರು ನಾಮಪತ್ರ ಸಲ್ಲಿಸಿದ್ದಾರೆ? Municipality Election
ಚುನಾವಣೆ ಫಲಿತಾಂಶ ಹೊರ ಬಿದ್ದಿದ್ದು ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಎಣೆದ ತಂತ್ರಕ್ಕೆ ಬಿಜೆಪಿ ಅಸಮಾಧಾನಿತ ನಗರಸಭೆ ಸದಸ್ಯರು ಕಾಂಗ್ರೆಸ್ ಬೆಂಬಲಿಸಿದ ಪರಿಣಾಮ ಬಹುಮತವಿದ್ದ ಬಿಜೆಪಿ ಅಧಿಕಾರ ಕಳೆದುಕೊಂಡಿದೆ.
ಕಾಂಗ್ರೆಸ್ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ಸ್ವರ್ಧೆ ಮಾಡಿದ್ದ ಬಿ.ಎನ್. ಸುಮಿತ ಅವರು 22 ಮತಗಳನ್ನು ಪಡೆದು ಬಿಜೆಪಿ ಅಭ್ಯರ್ಥಿ ತಾರಕೇಶ್ವರಿ ವಿರುದ್ದ ಗೆಲುವು ಸಾಧಿಸಿದ್ದಾರೆ.
ಇದನ್ನೂ ಓದಿ: ಚಿತ್ರದುರ್ಗ | ನಗರಸಭೆ ಚುನಾವಣೆ | ಅಭ್ಯರ್ಥಿಗಳು ಪಡೆದ ಮತಗಳ ವಿವರ | Municipality Election
ನಗರಸಭೆ ಉಪಾಧ್ಯಕ್ಷ ಸ್ಥಾನಕ್ಕೆ ಸ್ವರ್ಧೆ ಮಾಡಿದ್ದ ಬಿಜೆಪಿ ನಗರಸಭೆ ಸದಸ್ಯೆ ಶ್ರೀದೇವಿ ಚಕ್ರವರ್ತಿ ಅವರು 22 ಮತ ಪಡೆದು ಬಿಜೆಪಿ ಪಕ್ಷದಿಂದ ಉಪಾಧ್ಯಕ್ಷ ಸ್ಥಾನಕ್ಕೆ ಸ್ವರ್ಧೆ ಮಾಡಿದ್ದ ರೋಹಿಣಿ ವಿರುದ್ಧ ಗೆಲುವು ಸಾಧಿಸಿದ್ದಾರೆ.