ಪ್ರಾಯೋಗಿಕ ನಾಲ್ಕು ತಿಂಗಳ ಅವಧಿಗೆ ಕಾರ್ಡ್ ವಿತರಣೆ (Chitradurga Municipality)
ಪ್ರಾಯೋಗಿಕವಾಗಿ ನಾಲ್ಕು ತಿಂಗಳ ಅವಧಿಗೆ ಮುದ್ರಿಸಿ, ಏಪ್ರಿಲ್ ಮಾಹೆಯಲ್ಲಿ ವಾರ್ಡ್ ನಂ. 9 ರಿಂದ 17 ಒಟ್ಟು 9 ವಾರ್ಡ್‍ಗಳಲ್ಲಿ ಬರುವ ಎಲ್ಲಾ ಮನೆಗಳಿಗೂ ಹಂಚಲಾಗಿರುತ್ತದೆ. ಹಾಗೂ ಈ ಕುರಿತು (Chitradurga Municipality) ಪ್ರತಿನಿತ್ಯ ಪರಿಶೀಲನೆ ನಡೆಸಿದ್ದು, ಇದನ್ನು ಇತರೆ ವಾರ್ಡ್‍ಗಳಿಗೆ ಅನ್ವಯಿಸಿಲು ಯೋಚಿಸಿ, ಮೇ ಮಾಹೆಯಲ್ಲಿ ವಾರ್ಡ್ ನಂ.5, 6, 7, 24, 25, 26, 27 ಒಟ್ಟು 7 ವಾರ್ಡ್ ಮನೆಗಳಿಗೂ ಹಂಚಿ ಒಟ್ಟು 16 ವಾರ್ಡ್‍ಗಳಿಗೆ ನಾಲ್ಕು ತಿಂಗಳ ಕಾರ್ಡ್‍ನ್ನು ಹಂಚಲಾಗಿರುತ್ತದೆ.
35 ವಾರ್ಡಗೆ ಕಾರ್ಡ್ ಸೌಲಭ್ಯ (Chitradurga Municipality)
ಮುಂದುವರೆದು ಚಿತ್ರದುರ್ಗ ನಗರಸಭೆ ವ್ಯಾಪ್ತಿಯ 35 ವಾರ್ಡ್‍ಗಳಿಗೂ (Chitradurga Municipality) ಈ ಸೌಲಭ್ಯ ನೀಡಲು ಜುಲೈ ಮಾಹೆಯಲ್ಲಿ ಆರು ತಿಂಗಳ ಅವಧಿಗೆ ಅಂದರೆ 2024ರ ಡಿಸೆಂಬರ್ ಅಂತ್ಯದವರೆಗೆ ಕಾರ್ಡ್‍ಗಳನ್ನು ಉಳಿದ 19 ವಾರ್ಡ್‍ಗಳಿಗೆ ಅಂದರೆ ವಾರ್ಡ್ ನಂ.1, 2, 3, 4, 8, 18, 19, 20, 21, 22, 23, 28, 29, 30, 31, 32, 33, 34, 35 ವಾರ್ಡ್‍ಗಳ ಪ್ರತಿ ಮನೆಗೂ ಕಾರ್ಡ್‍ನ್ನು ವಿತರಣೆ ಮಾಡಲಾಗಿರುತ್ತದೆ.
ಸಾರ್ವಜನಿಕರು ಈ ಕಾರ್ಯಕ್ಕೆ ಸಹಕರಿಸಿ, ಪ್ರತಿನಿತ್ಯವೂ ಹಸಿ ಕಸ, ಒಣ ಕಸ ವಿಂಗಡಣೆ ಮಾಡಿ ನಗರಸಭೆಯ ವಾಹನಗಳಿಗೆ ನೀಡಿ, ತಮಗೆ ವಿತರಿಸಿರುವ ಕಾರ್ಡ್‍ಗಳಲ್ಲಿ (Chitradurga Municipality) ದಾಖಲಿಸಲು ಮನವಿ ಮಾಡಿದೆ. ಒಂದು ವೇಳೆ ನಗರಸಭೆಯ ವಾಹನ ಪ್ರತಿ ದಿನ ಅಥವಾ 2 ದಿನಕ್ಕೊಮ್ಮೆ ನಿರಂತರವಾಗಿ ಬರುತ್ತಿರುವ ಬಗ್ಗೆ ಸಹ ಈ ಕಾರ್ಡ್‍ನಲ್ಲಿ ಮನೆಯ ಮಾಲೀಕರ ಸಹಿ ಹಾಕುವುದರಿಂದ ತಿಳಿದುಬರುತ್ತದೆ.
ಎರಡು-ಮೂರು ತಿಂಗಳ ಅವಧಿಯಲ್ಲಿ ಸಾರ್ವಜನಿಕರಿಗೆ ನಗರಸಭೆಯ ಸಿಬ್ಬಂದಿಗಳು ಹಾಗೂ ಆರೋಗ್ಯ ನಿರೀಕ್ಷಕರು ಅರಿವು ಮೂಡಿಸಲು ಸೂಚಿಸಲಾಗಿರುತ್ತದೆ. ಆ ನಂತರವೂ ಸಹ ಸಾರ್ವಜನಿಕರು ಕಸವನ್ನು ವಿಂಗಡಿಸಿ ನಗರಸಭೆಯ (Chitradurga Municipality) ವಾಹನಗಳಿಗೆ ನೀಡದೇ ಇದ್ದರೆ, ದಂಡ ವಿಧಿಸಲು ಚಿಂತಿಸಲಾಗಿರುತ್ತದೆ.
ಚಿತ್ರದುರ್ಗ ನಗರವು ಐತಿಹಾಸಿಕ ನಗರವಾಗಿದ್ದು, ನಗರ ವ್ಯಾಪ್ತಿಯಲ್ಲಿ ಸ್ವಚ್ಛತೆ ಕಾಪಾಡುವುದು ಎಲ್ಲರ ಹೊಣೆ. ಇದಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ. ಪ್ರತಿ ದಿನ ಮನೆ, ಅಂಗಡಿಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ರಸ್ತೆಗೆ, ಚರಂಡಿಗೆ ಹಾಕದೇ ಹಸಿ ಕಸ, ಒಣ ಕಸವನ್ನಾಗಿ ಬೇರ್ಪಡಿಸಿ ನಗರಸಭೆಯ ವಾಹನ ಮನೆ ಬಾಗಿಲಿಗೆ ಬಂದಾಗ ನೀಡಲು ಪ್ರತಿ ನಿತ್ಯ ಕಸದ ವಾಹನಗಳಲ್ಲಿ ಪ್ರಚಾರ ಮಾಡಲಾಗುತ್ತಿದೆ. ಆದರೂ ಸಹ ಇನ್ನೂ ಪೂರ್ಣ ಪ್ರಮಾಣದಲ್ಲಿ ಹಸಿ ಕಸ, ಒಣ ಕಸ ವಿಂಗಡಿಸಿ, ನಗರಸಭೆಯ ವಾಹನಗಳಿಗೆ ನೀಡದೇ ರಸ್ತೆ, ಚರಂಡಿ ಮತ್ತು ಖಾಲಿ ನಿವೇಶನಗಳಲ್ಲಿ ಸಾರ್ವಜನಿಕರು ಎಸೆಯುತ್ತಿರುವುದು ಕಂಡುಬಂದಿರುತ್ತದೆ.
ಹಸಿ ಕಸ, ಒಣ ಕಸವನ್ನಾಗಿ ವಿಂಗಡಿಸಿ, ನಗರಸಭೆಯ ವಾಹನಗಳಿಗೆ (Chitradurga Municipality) ನೀಡಿದರೆ, ಚಿತ್ರದುರ್ಗ ನಗರವನ್ನು ಸ್ವಚ್ಛ, ಸುಂದರ ನಗರವನ್ನಾಗಿ ಮಾಡಲು ನಗರಸಭೆಯೊಂದಿಗೆ ಸಹಕರಿಸಬೇಕು ಎಂದು ಚಿತ್ರದುರ್ಗ ನಗರಸಭೆ ಪೌರಾಯುಕ್ತರಾದ ಎಂ.ರೇಣುಕಾ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.