Chitradurga news|nammajana.com |5-12-2024
ನಮ್ಮಜನ.ಕಾಂ, ಚಿತ್ರದುರ್ಗ: ಆದಿಶಕ್ತಿ ನಗರದಲ್ಲಿ ನಗರಸಭೆ ಜಾಗ ಒತ್ತುವರಿ ಮಾಡಿರುವುದನ್ನು ಆರೋಪಿಸಿ ನಗರಸಭೆ ಆಸ್ತಿ ಎಂದು ಬೋರ್ಡ್ ಹಾಕಿದವರು ಬೋರ್ಡ್ ತೆಗೆದು ಅದು ಖಾಸಗಿ ಆಸ್ತಿ ಎಂದು ಹೇಳುತ್ತಿರುವುದು ನಗರಸಭೆ (Chitradurga Municipality) ಪೌರಯುಕ್ತರು ಮತ್ತು ನಗರಸಭೆ ಸದಸ್ಯರಾದ ಬಾಸ್ಕರ್ ಮತ್ತು ಶ್ರೀನಿವಾಸ್ ಶಾಮೀಲಾಗಿ ನಗರಸಭೆ ಆಸ್ತಿ ಮಾರಟ ಮಾಡುತ್ತಿದ್ದಾರೆ ಎಂದು ನಗರಸಭೆ ಸದಸ್ಯ ದೀಪು ನೇರವಾಗಿ ಆರೋಪ ಮಾಡಿದ್ದಾರೆ.
ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕೋಟೆ ಮುಂಭಾಗದಲ್ಲಿ ನಗರಸಭೆ ಸದಸ್ಯರಾದ ಎಚ್.ಶ್ರೀನಿವಾಸ್ ಹಾಗೂ ಭಾಸ್ಕರ್‌ರವರು ಕಟ್ಟಿರುವ ಶಿಕ್ಷಣ ಸಂಸ್ಥೆಗಳಿಗೆ ಪರವಾನಗಿ ಪಡೆದಿರುವುದಕ್ಕೆ ದಾಖಲೆ (Chitradurga Municipality) ಒದಗಿಸುವಂತೆ ನಗರಸಭೆ ಪೌರಾಯುಕ್ತರಿಗೆ ದಾಖಲೆ ಕೇಳಿ 15 ದಿನಗಳಾದರೂ ಒದಗಿಸಿಲ್ಲ. ಈ ವಿಚಾರದಲ್ಲಿ ಪೌರಾಯುಕ್ತರು ಅವರ ಜತೆ ಶಾಮೀಲಾಗಿದ್ದಾರೆ ಎಂದು ನಗರಸಭೆ ಸದಸ್ಯ ದೀಪು ಆರೋಪ ಮಾಡಿದರು.
ಕೋಟೆ ಮುಂಭಾಗದಲ್ಲಿರುವ ಅನುಪಮ ವಿದ್ಯಾಸಂಸ್ಥೆ ಹಾಗೂ ರಾಘವೇಂದ್ರ ಪ್ಯಾರಾ ಮೆಡಿಕಲ್ ಕಾಲೇಜು ಈ ಎರಡು ಕಟ್ಟಡಗಳ ದಾಖಲಾತಿ ಒದಗಿಸುಂತೆ 15 ದಿನಗಳ ಹಿಂದೆ ಪೌರಾಯುಕ್ತರಿಗೆ ಪತ್ರ ನೀಡಿದ್ದೆ, ಆದರೆ ಅವರು ಇನ್ನೂ 20 ದಿನಗಳು ಕಾಲಾವಕಾಶ ಬೇಕು ಎಂದು ಪತ್ರ ಕೊಟ್ಟಿದ್ದಾರೆ. ಶ್ರೀನಿವಾಸ್ ಮತ್ತು ಭಾಸ್ಕರ್‌ರವರ ಪ್ರಭಾವಕ್ಕೆ ಒಳಗಾಗಿರುವ ಪೌರಾಯುಕ್ತರು ದಾಖಲೆ ಕೊಡುತ್ತಿಲ್ಲ, ದಾಖಲಾತಿ ಇಲ್ಲದೆ ಭಾಸ್ಕರ್ ಹೆಸರಿನಲ್ಲಿ ಇ ಸತ್ತು ಮಾಡಿಕೊಟ್ಟಿದ್ದಾರೆ.
ಅಲ್ಲದೇ ನಗರಸಭೆ ನಿಯಮಾವಳಿ ಪ್ರಕಾರ ಒಂದು ಅಥವಾ ಎರಡು ಮಹಡಿ ಕಟ್ಟಲು ಮಾತ್ರ ಅವಕಾಶವಿದೆ, ಆದರೆ ನಾಲ್ಕು ಮಹಡಿಗಳನ್ನು ನಿರ್ಮಿಸಿದ್ದಾರೆ. ಪರವಾನಗಿಯೂ ಇಲ್ಲ, ಕಂದಾಯವೂ ಇಲ್ಲ. .ಹಾಗಾದರೆ ನಗರಸಭೆಗೆ ಮೋಸ ಮಾಡುತ್ತಿರುವವರು ಯಾರು ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ವಾಣಿ ವಿಲಾಸ ಸಾಗರದ ಇಂದಿನ ನೀರಿನ ಮಟ್ಟ |Vani Vilasa Sagara Dam
ನಗರಸಭೆ ವ್ಯಾಪ್ತಿಗೊಳಪಡುವ ಖಾಲಿ ನಿವೇಶನಗಳಲ್ಲಿ ಮೊದಲು ನಗರಸಭೆ ಆಸ್ತಿ ಎಂದು ನಾಮಫಲಕ ಅಳವಡಿಸುತ್ತಾರೆ, ಆನಂತರ ಬೇರೆಯವರಿಗೆ ಖಾತೆ (Chitradurga Municipality) ಮಾಡಿಸಿಕೊಟ್ಟು ಆ ಆಸ್ತಿಯನ್ನು ಕಬಳಿಸಲು ಮುಂದಾಗುತ್ತಾರೆ, ಆದಿಶಕ್ತಿ ನಗರದಲ್ಲಿ ಆಗಿದ್ದು ಇದೇ ಕೆಲಸ. ಈ ರೀತಿಯ ಕೆಲಸ ಮಾಡಲು ಒಂದು ತಂಡ ಇದ್ದು, ಪೌರಾಯುಕ್ತರು ಇದಕ್ಕೆ ಸಹಕಾರ ನೀಡುತ್ತಿದ್ದಾರೆ ಎಂದು ದೂರಿದರು.