Chitradurga news|Nammajana.com|12-9-2025
ನಮ್ಮಜನ.ಕಾಂ, ಚಿತ್ರದುರ್ಗ: ಚಿತ್ರದುರ್ಗ ನಗರಸಭೆ ನೂತನ ಅಧ್ಯಕ್ಷರಾಗಿ 20ನೇ ವಾರ್ಡಿನ ಎಂ.ಪಿ.ಅನಿತಾ ರಮೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಚಿತ್ರದುರ್ಗ ನಗರದ ನಗರಸಭೆಯ ಸಭಾಂಗಣದಲ್ಲಿ ಶುಕ್ರವಾರ ನಡೆದ ನಗರಸಭೆಯ ಅಧ್ಯಕ್ಷ ಚುನಾವಣೆಯಲ್ಲಿ ಚುನಾವಣಾಧಿಕಾರಿಗಳಾದ ಉಪ ವಿಭಾಗಾಧಿಕಾರಿಗಳಾದ ಮಹಮ್ಮದ್ ಜಿಲಾನಿ ಖುರೇಷಿನ ಚುನಾವಣಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದ್ದು, ಚುನಾವಣಾ ನಾಮಪತ್ರ ಸಲ್ಲಿಸುವ ಸಮಯದಲ್ಲಿ ಎಂ.ಪಿ. ಅನಿತಾರವರು ಎರಡು ನಾಮಪತ್ರಗಳನ್ನು ಸಲ್ಲಿಸಿದ್ದು, ಎರಡು ನಾಮಪತ್ರಗಳು ಸಿಂಧೂವಾಗಿದ್ದು, ನಾಮಪತ್ರ ವಾಪಾಸ್ಸು ಪಡೆಯುವ ಸಮಯ ಪೂರ್ಣವಾದ ನಂತರ ಎಂ.ಪಿ.ಅನಿತಾರವರನ್ನು ಚಿತ್ರದುರ್ಗ ನಗರಸಭೆಯ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಣೆಯನ್ನು ಮಾಡಿದರು.
ಚಿತ್ರದುರ್ಗ ನಗರಸಭೆಯ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಮೀಸಲಾತಿ ಬಂದ್ದಿದ್ದು, ಈಗಾಗಲೇ ಇಬ್ಬರು ಮಹಿಳೆಯರು ಈಗಾಗಲೇ ಅಧ್ಯಕ್ಷರಾಗಿ ಅಧಿಕಾರವನ್ನು ನಡೆಸಿದ್ದಾರೆ. ಇವರು ಮೂರನೇ ಅಧ್ಯಕ್ಷರಾಗಿ ಅಧಿಕಾರವನ್ನು ಪಡೆದಿದ್ದಾರೆ.
ಚಿತ್ರದುರ್ಗ ನಗರಸಭೆಯ 35, ಸಂಸದರು, ಶಾಸಕರು ಸೇರಿ 37 ಜನ ಸದಸ್ಯರಿದ್ದು ಇದರಲ್ಲಿ ಚುನಾವಣಾ ಸಮಯದಲ್ಲಿ 29 ಜನರು ಹಾಜರಾಗಿದ್ದು 8 ಜನ ಸದಸ್ಯರು ಗೈರು ಹಾಜರಾಗಿದ್ದರು. ಕೋರಂ ಇದ್ದ ಹಿನ್ನಲೆಯಲ್ಲಿ ಚುನಾವಣಾಧಿಕಾರಿಗಳು ಸಭೆಯನ್ನು ನಡೆಸಿ ಅನಿತಾರವರು ಆಧ್ಯಕ್ಷರಾಗಿ ಅವವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು.
ಚುನಾವಣಾ ಸಮಯದಲ್ಲಿ ಪೌರಾಯುಕ್ತರಾದ ಲಕ್ಷ್ಮೀ ಭಾಗವಹಿಸಿದ್ದರು.
ಇದನ್ನೂ ಓದಿ: actor photos: ಹಿಂದೂ ಮಹಾಗಣಪತಿ ಶೋಭಯಾತ್ರೆಯಲ್ಲಿ ನಟರ ಫೋಟೋ ನಿಷೇಧ
ಅಭಿಮಾನಿಗಳಿಂದ ಹೂ ಮಳೆ
ಚಿತ್ರದುರ್ಗ ನಗರಸಭೆಗೆ ನೂತನವಾಗಿ ಅಧ್ಯಕ್ಷರಾಗಿ ಅಯ್ಕೆಯಾದ ಎಂ.ಪಿ.ಅನಿತಾರವರಿಗೆ ಚುನಾವಣೆಯ ನಂತರ ಅವರು ನಗಸಭೆಯ ಸದಸ್ಯರು, ಹಿತೈಷಿಗಳು, ಅಭಿಮಾನಿಗಳು ಸ್ನೇಹಿತರು, ಹೂವಿನಹಾರ, ಬೊಕ್ಕೆ, ಶಾಲುನ್ನು ಹಾಕುವುದರ ಮೂಲಕ ಶುಭಾಷಯವನ್ನು ಕೋರಿದರು.
ಚುನಾವಣೆಯ ನಂತರ ತೆರೆದ ಜೀಪಿನಲ್ಲಿ ನಗರದ ವಿವಿಧ ಬಡಾವಣೆ ಹಾಗೂ 20ನೇ ವಾರ್ಡಿನಲ್ಲಿ ನೂತನ ಅಧ್ಯಕ್ಷರು ಹಾಗೂ ಅವರ ಪತಿಯಾದ ಕರವೇ ರಮೇಶ್‍ರವರನ್ನು ವಿವಿಧ ಜಾನಪದ ವಾದ್ಯಗಳು ಮೂಲಕ ಬೃಹತ್ ಮೆರವಣಿಗೆಯನ್ನು ಮಾಡಲಾಯಿತು.
