
Chitradurga news|nammajana.com|18-7-2024
ನಮ್ಮಜನ.ಕಾಂ, ಚಿತ್ರದುರ್ಗ: ಚಿತ್ರದುರ್ಗ ನಗರದ (Chitradurga Prostitution) ವೇಶ್ಯಾವಾಟಿಕೆ ಅಡ್ಡೆ ಮೇಲೆ ಪೊಲೀಸರ ದಾಳಿ ನಡೆಸಿ ಓರ್ವ ಯುವತಿ ಸೇರಿ 6 ಜನರ ರಕ್ಷಣೆ ಮಾಡಿದ ಘಟನೆ ಬುಧವಾರ ನಡೆದಿದೆ.
ವಿಶೇಷ ಎಂದರೆ ಪಶ್ಚಿಮ ಬಂಗಾಳದ ರಾಜ್ಯ ಓರ್ವ ಯುವತಿ ಸೇರಿ 6 ಜನರನ್ನು ಪೋಲಿಸರು ರಕ್ಷಿಸಿದ್ದಾರೆ. ಚಿತ್ರದುರ್ಗದ (Chitradurga Prostitution) ಮೆದೇಹಳ್ಳಿಯಲ್ಲಿ ಬಾಡಿಗೆ ಮನೆ ಪಡೆದು ವೇಶ್ಯಾವಾಟಿಕೆ ನಡೆಸಲಾಗುತ್ತಿತ್ತು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ಮಾಡಿ 6 ಜನರ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: Dairy farming: ಹೈನುಗಾರಿಕೆ ಮಾಡುವ ರೈತ ಮಹಿಳೆಯರಿಗೆ ಶೇ.6ರ ಬಡ್ಡಿ ಸಹಾಯಧನ
ಸಿಇಎನ್ ಠಾಣೆ ಪಿಐ ವೆಂಕಟೇಶ ನೇತೃತ್ವದಲ್ಲಿ ದಾಳಿ (Chitradurga Prostitution) ನಡೆಸಲಾಗಿದೆ. ದಾಳಿ ವೇಳೆ ರಫಿವುಲ್ಲಾ, ಅಪ್ಸದ್ ಬಾನು ಎಂಬುವರನ್ನ ಬಂಧಿಸಲಾಗಿದೆ. ದಾಳಿ ವೇಳೆ ವೇಶ್ಯಾವಾಟಿಕೆ ಕಿಂಗ್ ಪಿನ್ ನೀಲು ಫರಾನ್ ಎಸ್ಕೇಪ್ ಆಗಿದ್ದಾನೆ. ಮಹಿಳಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
