Chitradurga news|nammajana.com|17-8-2024
ನಮ್ಮಜನ.ಕಾಂ, ಚಿತ್ರದುರ್ಗ: ಶುಕ್ರವಾರ ಸುರಿದ ಮಳೆ (Chitradurga Rain) ವಿವರದನ್ವಯ ಚಿತ್ರದುರ್ಗ ಜಿಲ್ಲೆಯಲ್ಲಿ 21.9 ಮಿ.ಮೀ ಮಳೆಯಾಗಿದೆ.
ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನಲ್ಲಿ 32.1 ಮಿ.ಮೀ, ಚಿತ್ರದುರ್ಗ ತಾಲ್ಲೂಕಿನಲ್ಲಿ 19.8 ಹಿರಿಯೂರು ತಾಲ್ಲೂಕು 21.8 ಮಿ.ಮೀ, ಹೊಳಲ್ಕೆರೆ ತಾಲ್ಲೂಕು 13.5 ಮಿ.ಮೀ, ಹೊಸದುರ್ಗ (Chitradurga Rain) ತಾಲ್ಲೂಕಿನಲ್ಲಿ 21.9 ಹಾಗೂ ಮೊಳಕಾಲ್ಮುರು ತಾಲ್ಲೂಕಿನಲ್ಲಿ 9.5 ಮಿ.ಮೀ ಮಳೆಯಾಗಿದೆ.
ಹೋಬಳಿವಾರು ಮಳೆ ವಿವರ: (Chitradurga Rain)
ಚಳ್ಳಕೆರೆ ತಾಲ್ಲೂಕಿನ ಚಳ್ಳಕೆರೆಯಲ್ಲಿ 26.2 ಮಿ.ಮೀ, ನಾಯಕನಹಟ್ಟಿ 35.7 ಮಿ.ಮೀ, ಪರಶುರಾಂಪುರ 44.3 ಮಿ.ಮೀ, ತಳಕು 23.1 ಮಿ.ಮೀ ಮಳೆಯಾಗಿದೆ.
ಚಿತ್ರದುರ್ಗ ತಾಲ್ಲೂಕಿನ ಚಿತ್ರದುರ್ಗದಲ್ಲಿ 32.2 ಮಿ.ಮೀ, ಭರಮಸಾಗರ 10.4 ಮಿ.ಮೀ, ಹಿರೇಗುಂಟನೂರು 16.3 ಮಿ.ಮೀ, ತುರುವನೂರು 11.1 ಮಿ.ಮೀ ಮಳೆಯಾಗಿದೆ.
ಹಿರಿಯೂರು ತಾಲ್ಲೂಕಿನ ಹಿರಿಯೂರಿನಲ್ಲಿ 16.8 ಮಿ.ಮೀ, ಐಮಂಗಲ 18.9 ಮಿ.ಮೀ, ಧರ್ಮಪುರ 36.9 ಮಿ.ಮೀ, ಜೆ.ಜೆ.ಹಳ್ಳಿ 13.7 ಮಿ.ಮೀ ಮಳೆಯಾಗಿದೆ.
ಹೊಳಲ್ಕೆರೆ ತಾಲ್ಲೂಕಿನ ಹೊಳಲ್ಕೆರೆಯಲ್ಲಿ 13.8 ಮಿ.ಮೀ, ಬಿ.ದುರ್ಗ 2.7 ಮಿ.ಮೀ, ರಾಮಗಿರಿ 10.6 ಮಿ.ಮೀ, ತಾಳ್ಯ 23.1 ಮಿ.ಮೀ ಮಳೆಯಾಗಿದೆ.
ಹೊಸದುರ್ಗ ತಾಲ್ಲೂಕಿನ ಹೊಸದುರ್ಗದಲ್ಲಿ 12.1 ಮಿ.ಮೀ, ಮಾಡದಕೆರೆ 12.6 ಮಿ.ಮೀ, ಮತ್ತೋಡು 37.9 ಮಿ.ಮೀ, ಶ್ರೀರಾಂಪುರ 34 ಮಿ.ಮೀ ಮಳೆಯಾಗಿದೆ.
ಮೊಳಕಾಲ್ಮುರು ತಾಲ್ಲೂಕಿನ ಮೊಳಕಾಲ್ಮುರುನಲ್ಲಿ 3.2 ಮಿ.ಮೀ ಹಾಗೂ ದೇಮಸಮುದ್ರದಲ್ಲಿ 16.5 ಮಿ.ಮೀ ಮಳೆಯಾಗಿದೆ.
44 ಮನೆಗಳು ಭಾಗಶಃ ಹಾನಿ: (Chitradurga Rain)
ಶುಕ್ರವಾರ ಸುರಿದ ಮಳೆಗೆ ಜಿಲ್ಲೆಯಾದ್ಯಂತ ಒಟ್ಟು 44 ಮನೆಗಳು ಭಾಗಶಃ ಹಾನಿಯಾಗಿವೆ. 20 ಮನೆಗಳಿಗೆ ನೀರು ನುಗ್ಗಿರುವ (Chitradurga Rain) ಪ್ರಕರಣಗಳು ವರದಿಯಾಗಿದ್ದು, 106 ಸಣ್ಣ ಜಾನುವಾರುಗಳು ಮೃತಪಟ್ಟಿವೆ. 2 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾಗೂ 612.4 ಹೆಕ್ಟೇರ್ ಕೃಷಿ ಬೆಳೆಹಾನಿಯಾಗಿದೆ.
ಚಿತ್ರದುರ್ಗ ತಾಲ್ಲೂಕಿನಲ್ಲಿ 22 ಮನೆಗಳು ಭಾಗಶಃ ಹಾನಿ ಹಾಗೂ 20 ಮನಗಳಿಗೆ ನೀರು ನುಗ್ಗಿದ್ದು, 610 ಹೆಕ್ಟೇರ್ ಕೃಷಿ ಬೆಳೆಹಾನಿಯಾಗಿದೆ.
ಚಳ್ಳಕೆರೆ ತಾಲ್ಲೂಕಿನಲ್ಲಿ 18 ಮನೆಗಳು ಭಾಗಶಃ ಹಾನಿ, 106 ಸಣ್ಣ ಜಾನುವಾರು ಮೃತಪಟ್ಟಿವೆ ಹಾಗೂ 2 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾಗೂ 2 ಹೆಕ್ಟೇರ್ ಕೃಷಿ ಬೆಳೆಹಾನಿಯಾಗಿದೆ.
ಹೊಳಲ್ಕೆರೆ ತಾಲ್ಲೂಕಿನಲ್ಲಿ 1 ಮನೆ ಭಾಗಶಃ ಹಾನಿಯಾಗಿದೆ. ಹಿರಿಯೂರು ತಾಲ್ಲೂಕಿನಲ್ಲಿ 2 ಮನೆಗಳು ಭಾಗಶಃ (Chitradurga Rain) ಹಾನಿಯಾಗಿದ್ದು, 0.40 ಹೆಕ್ಟೇರ್ ಕೃಷಿ ಬೆಳೆಹಾನಿಯಾಗಿದೆ.
ಮೊಳಕಾಲ್ಮುರು ತಾಲ್ಲೂಕಿನಲ್ಲಿ 1 ಮನೆ ಭಾಗಶಃ ಹಾನಿಯಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.