Chitradurga News | Nammajana.com | 29-08-2025
ನಮ್ಮಜನ ನ್ಯೂಸ್ ಕಾಂ,ಚಿತ್ರದುರ್ಗ: ಮೆದಹಳ್ಳಿ (CHITRADURGA )ರಸ್ತೆಯಲ್ಲಿರುವ ಖಾಸಗಿ ಬಸ್‍ನಿಲ್ದಾಣದಲ್ಲಿ ಮಂಗಳವಾರ ರಾತ್ರಿ ಮೂರು ಅಂಗಡಿಗಳಲ್ಲಿ ಸರಣಿ ಕಳ್ಳತನವಾಗಿದೆ. ಮೂರು ಅಂಗಡಿಗಳ ಮೇಲಿನ ಶೀಟ್‍ಗಳನ್ನು ಮುರಿದು ಒಳಗೆ ಇಳಿದಿರುವ ಚಾಲಾಕಿಗಳು ನಗದು ಕಳವು ಮಾಡಿದ್ದಾರೆ.

ಎಸ್.ಆರ್.ಎಂ.ಎಸ್.ಮೋಟಾರ್ಸ್‍ನ ಶೀಟ್ ಮುರಿದು ಕೆಳಗೆ ನುಸುಳಿ ರೂ.1 ಲಕ್ಷ 20 ಸಾವಿರ, ವಿನಾಯಕ ಪ್ರಾವಿಜನ್ ಸ್ಟೋರ್‍ನಲ್ಲಿ ರೂ.12 ಸಾವಿರ, ಶಿವನ್ ಫಾರ್ಮದಲ್ಲಿ ರೂ.20 ಸಾವಿರ ಕಳ್ಳತನವಾಗಿದೆ.
ಇದನ್ನೂ ಓದಿ: ಸುದ್ದಿ ಮಾಧ್ಯಮದಲ್ಲಿ ಅಂಬೇಡ್ಕರ್ ದೃಷ್ಟಿಕೋನ : ಆ.30 ರಂದು ವಿಚಾರ ಸಂಕಿರಣ
ಎಸ್.ಆರ್.ಎಂ.ಎಸ್. ಮೋಟಾರ್ಸ್‍ನಲ್ಲಿ ಪೀಠೋಪಕರಣಗಳನ್ನೆಲ್ಲಾ ಚೆಲ್ಲಾಪಿಲ್ಲಿಯಾಗಿ ಹರಡಿದ್ದು, ಹಣಕ್ಕಾಗಿ ಹುಡುಕಾಡಿರಬಹುದೆಂಬುದು ಗೊತ್ತಾಗುತ್ತದೆ.
ಬುಧವಾರ ಬೆಳ್ಳಿಗೆ ಮೂರು(CHITRADURGA) ಅಂಗಡಿಗಳ ಮಾಲೀಕರುಗಳು ಬೀಗ ತೆರೆದು ಒಳಗೆ ಹೋದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದ್ದು, ನಗರ ಪೊಲೀಸ್ ಠಾಣೆ ಅಪರಾಧ ವಿಭಾಗದಲ್ಲಿ ದೂರು ದಾಖಲಾಗಿದೆ.
