Chitradurga news|Nammajana.com|12-8-2025
ನಮ್ಮಜನ.ಕಾಂ, ಚಿತ್ರದುರ್ಗ: ಇಂದು ಬೆಂಗಳೂರಿನ ವಿಧಾನಸೌಧ ವಿಶೇಷ ಅಧಿವೇಶನದಲ್ಲಿ ಚಿತ್ರದುರ್ಗ (Chitradurga Tourism) ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಅವರು ಮಾತನಾಡಿ ಚಿತ್ರದುರ್ಗದಲ್ಲಿ ವಿಶ್ವದಲ್ಲಿ ಎಲ್ಲೂ ಇಲ್ಲದಂತಹ ಏಳು ಸುತ್ತಿನ ಕೋಟೆ ವಿಶ್ವ ಪ್ರಸಿದ್ದಿ ಪಡೆದುಕೊಂಡಿದೆ.
ಕದಂಬರ ಕಾಲದಲ್ಲಿ ನಿರ್ಮಾಣವಾಗಿರುವ ಚಂದ್ರವಳ್ಳಿ ಕೆರೆ, ಆಡುಮಲ್ಲೇಶ್ವರ ಮತ್ತು ಪ್ರಾಣಿ ಸಂಗ್ರಹಾಲಯದ, ಯುವಕರಿಗೆ ದವಳಪ್ಪನ ಬೆಟ್ಟವಿದ್ದು ಬೆಂಗಳೂರಿನಿಂದ ಕೇವಲ ನಾಲ್ಕು ಗಂಟೆ ಪ್ರಯಾಸವಿದ್ದು ಹಂಪಿಯ ಪ್ರವಾಸದ ಪ್ಯಾಕೇಜ್ ನಂತೆ (Chitradurga Tourism) ಚಿತ್ರದುರ್ಗ ಪ್ರವಾಸಿತಾಣಗಳಿಗೆ ವಿಶೇಷ ಪ್ಯಾಕೇಜ್ ಮಾಡಿ ಎಂದು ಪ್ರವಾಸೋದ್ಯಮ ಸಚಿವ ಹೆಚ್.ಕೆ.ಪಾಟೀಲ್ ಅವರಿಗೆ ಮನವಿ ಸಲ್ಲಿಸಿದರು.

ಶಾಸಕ ಕೆ.ಸಿ.ವೀರೇಂದ್ರ ಮನವಿಗೆ ಸ್ಪಂದಿಸಿದ ಸಚಿವರು
ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಮನವಿಗೆ ಸ್ಪಂದಿಸಿದ ಪ್ರವಾಸೋದ್ಯಮ ಸಚಿವರಾದ ಹೆಚ್.ಕೆ.ಪಾಟೀಲ್ ಅವರು ಪ್ರತಿಕ್ರಿಯೆ ನೀಡಿ ಚಿತ್ರದುರ್ಗದಲ್ಲಿ ಅನೇಕ ಪ್ರವಾಸಿ ತಾಣಗಳಿವೆ. ಅದಕ್ಕಾಗಿ ನಾವು ಕೆಎಸ್ಇಡಿಸಿ (KSTDC) ಯಿಂದ ಶೀಘ್ರದಲ್ಲೇ ಈ ಪ್ಯಾಕೇಜ್‌ನಲ್ಲಿ ಚಿತ್ರದುರ್ಗವನ್ನು (Chitradurga Tourism) ಸೇರಿಸುವುದಾಗಿ ಭರವಸೆ ನೀಡಿದರು.
ಇದನ್ನೂ ಓದಿ: Adike rate : ಅಡಕೆ ಧಾರಣೆ | 12 ಆಗಸ್ಟ್ 2025 | ಚನ್ನಗಿರಿ ಮಾರುಕಟ್ಟೆಯಲ್ಲಿ ಅಡಿಕೆ ರೇಟ್ ಎಷ್ಟಿದೆ
ಎರಡು ದಿನಗಳು ಪ್ರವಾಸಿ ಪ್ಯಾಕೇಜ್ ಘೋಷಣೆ ಶೀಘ್ರ
ಎರಡು ದಿನ ಪ್ಯಾಕೇಜ್ ಟೂರ್ ನಲ್ಲಿ ಒಂದು ದಿನ ಚಿತ್ರದುರ್ಗ ಜಿಲ್ಲೆಯ ಕೋಟೆ ಸೇರಿ ಎಲ್ಲಾ ಪ್ರವಾಸಿ ತಾಣಗಳು ಮತ್ತು ಇನ್ನೊಂದು ದಿನ ಹಂಪಿಯ ಪ್ರವಾಸಿ ತಾಣಗಳು ಸೇರಿ ಒಟ್ಟು ಎರಡು ದಿನದ ಪ್ರವಾಸಿ ಪ್ಯಾಕೇಜ್ ಮಾಡಲು ಶೀಘ್ರವಾಗಿ (Chitradurga Tourism) ಪ್ರಕಟಿಸಲಾಗುವುದು. ಆದರ ಆಗಸ್ಟ್ 15 ಅಥವಾ ಸೆಪ್ಟೆಂಬರ್ 1 ರಿಂದ ಪ್ರಾರಂಭ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252