Chitradurga news|Nammajana.com|3-10-2025
ನಮ್ಮಜನ.ಕಾಂ, ಚಿತ್ರದುರ್ಗ: ಐತಿಹಾಸಿಕ ಕೋಟೆ ನಾಡಿನಲ್ಲಿ ಸುಂದರವಾಗಿ ನಿರ್ಮಿಸಲಾಗಿದ್ದ ವಾಲ್ಮೀಕಿ ಭವನಕ್ಕೆ (Chitradurga Valmiki Bhavan) ಅಂಟಿಕೊಂಡಿದ್ದ ವಿಘ್ನಗಳು ನಿವಾರಣೆಯಾಗಿ ಸಾರ್ವಜನಿಕ ಬಳಕೆಗೆ ಲಭ್ಯವಾಗುವುದಕ್ಕೆ ಮುಹೂರ್ತ ಫಿಕ್ಸ್ ಆಗಿದ್ದು ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ಬಳಕೆಯ ನಂತರ ಭವನದ ಕೊರತೆಗಳನ್ನು ಹಂತ ಹಂತವಾಗಿ ಸಮಸ್ಯೆಗಳಿಗೆ ಪರಿಹಾರ ಹುಡುಕೋಣ ಎಂಬ ನಿರ್ಧಾರಕ್ಕ ನಾಯಕ ಸಮಾಜದ ಮುಖಂಡರು ಒಮ್ಮತದ ನಿರ್ಧಾರ ಮಾಡಿರುವುದು ಜನರಲ್ಲಿ ಸಂತಸ ತಂದಿದೆ.

ಜಿಲ್ಲಾಡಳಿತದಿಂದ ಆಯೋಜಿಸಿದ್ದ ವಾಲ್ಮೀಕಿ ಜಯಂತಿ ಪೂರ್ವಭಾವಿ ಸಭೆಯಲ್ಲಿ ಪೂರ್ಣ ಪ್ರಮಾಣದಲ್ಲಿ ನಿರ್ಮಾಣಗೊಂಡು ಕೆಲ ಸಣ್ಣಪುಟ್ಟಕೊರತೆಗಳ ಕಾರಣಕ್ಕೆ ವಾಲ್ಮೀಕಿಭವನವನ್ನು ಬಳಕೆ ಮಾಡದೇ ಬೀಗ ಹಾಕಿರುವುದು ಸರಿಯಲ್ಲ, ಭವನ ಅಧಿಕೃತ ಬಳಕೆಗೆ ಪ್ರಾರಂಭವಾದಲ್ಲಿ ಬರುವ ಆದಾಯದಿಂದ ಭವನದಲ್ಲಿನ ಕೊರತೆಗಳು, ಸಮಸ್ಯೆಗಳನ್ನು, ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಳ್ಳೋಣ ಎ ಎಂದು ಅಭಿಪ್ರಾಯಯೊಂದಿಗೆ ಅಪರ ಜಿಲ್ಲಾಧಿಕಾರಿಗಳು ಸಹ ಡಿಎಂಎಫ್ ಸೇರಿ ಇತರೆ ಅನುದಾನದಲ್ಲಿ ಸಮಸ್ಯೆಗೆ ಪರಿಹಾರ ಒದಗಿಸಲು ಪ್ರಯತ್ನಿಸುವುದಾಗಿ ತಿಳಿಸಿದ್ದು ಭವನದ ಬೀಗ (Chitradurga Valmiki Bhavan) ತೆಗೆಯಲು ಮತ್ತಷ್ಟು ಪುಷ್ಟಿ ಬಂದಿತು.
ವಾಲ್ಮೀಕಿ ಭವನವನ್ನು ಈಗಾಗಲೇ ದೂಳು ಕೊಡವಿ ಸ್ವಚ್ಚತೆ ಕಾರ್ಯ ಭರದಿಂದ ಸಾಗಿದ್ದು ವಾಲ್ಮೀಕಿ ಜಯಂತಿ ಅಂದರೆ ಅಕ್ಟೋಬರ್.7ರಂದು ನಡೆಯಲಿರುವ ವಾಲ್ಮೀಕಿ ಜಯಂತಿಗೆ ಪೂರ್ಣ ಪ್ರಮಾಣದಲ್ಲಿ ಸ್ವಚ್ಚತೆ ಮುಗಿಸಿ ವಾಲ್ಮೀಕಿ ಜಯಂತಿಯನ್ನು ಅದ್ದೂರಿಯಾಗಿ ಮಾಡಲು ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿಗಳು ನೇತೃತ್ವದಲ್ಲಿ ಎಲ್ಲಾ ಸಿದ್ದತೆ ನಡೆಯುತ್ತಿದೆ.
ಕಲ್ಯಾಣ ಮಂಟಪ್ಪ ಮಾದರಿಯಲ್ಲಿ ವಾಲ್ಮೀಕಿ ಭವನ
ವಾಲ್ಮೀಕಿ ಭವನವು ಥೇಟ್ ಕಲ್ಯಾಣ ಮಂಟಪ ಮಾದರಿಯಲ್ಲಿ ನಿರ್ಮಿಸಿದ್ದಾರೆ, ವಿವಾಹ ಸಮಾರಂಭಗಳ ಜೊತೆಗೆ ದೊಡ್ಡ ದೊಡ್ಡ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಬಹುದಾಗಿದೆ.
ಬಾಕ್ಸ್
ವಾಲ್ಮೀಕಿ ಭವನ ರೂಪುಗೊಂಡ ಹಿನ್ನೆಲೆ
ಈಗ ವಾಲ್ಮೀಕಿ ಭವನ ನಿರ್ಮಾಣಗೊಂಡಿರುವ ಸ್ಥಳದಲ್ಲಿ ಚಿತ್ರದುರ್ಗ ನಗರಸಭೆಯ ಹಳೆಯ ಕಟ್ಟಡ ಇತ್ತು. ಕಾಂಗ್ರೆಸ್ ಆಡಳಿತಾವಧಿ 2017ರಲ್ಲಿ ಅಂದು ಜಿಲ್ಲಾ ಉಸ್ತುವಾರಿ ಸಚಿವರು, ಸಮಾಜ ಕಲ್ಯಾಣ ಸಚಿವರೂ ಆಗಿದ್ದ ಎಚ್.ಆಂಜನೇಯ ಅವರು ಹತ್ತು ಕೋಟಿ ರೂಪಾಯಿಗಳ ವೆಚ್ಚದಲ್ಲಿ ವಾಲ್ಮೀಕಿ ಭವನ ನಿರ್ಮಾಣಕ್ಕೆ ನೀಡಿದ್ದರು.
ಎಚ್.ಆಂಜನೇಯ ಅವರಿಗೆ ತಮ್ಮ ಅಧಿಕಾರವಧಿಯಲ್ಲೇ ಲೋಕಾರ್ಪಣೆ ಮಾಡುವ ಇಚ್ಛೆ ಇದ್ದರೂ ಸಕಾಲದಲ್ಲಿ ಕಾಮಗಾರಿ ಪೂರ್ಣಗೊಳ್ಳದ ಕಾರಣ ಅದು ನೆರವೇರಿರಲಿಲ್ಲ, ಹಲವು ಆಕ್ಷೇಪಗಳು, ಕಾಮಗಾರಿ ಬಾಕಿ, ಕಳಪೆ ಕಾಮಗಾರಿ ಹೀಗೆ ಸಾಲು ಸಾಲು ಸಮಸ್ಯೆಗಳ ಜೊತೆಗೆ ಮುಖಂಡರ ಮನಸ್ತಾಪ, (Chitradurga Valmiki Bhavan) ರಾಜಕರಾಣ ನಡುವೆಯೂ ಕಾಮಗಾರಿಗೆ ವೇಗ ಸಿಕ್ಕಿರಲಿಲ್ಲ.
ಬಿಜೆಪಿ ಸರ್ಕಾರದ ಅವಧಿಯಲ್ಲಿ 2023 ಚುನಾವಣೆ ವೇಳೆಗೆ ತರಾತುರಿಯಲ್ಲಿ ಉದ್ಘಾಟನೆ ಕಾರ್ಯ ನೆರವೇರಿಸಲಾಯಿತು. ಆದರೆ, ಭವನದಲ್ಲಿ ಕೊರತೆಗಳನ್ನು ನೀಗಿಸುವ ತನಕ ಬಳಕೆಗೆ ಬೇಡ ಎಂಬ ವಾದವನ್ನು ನಾಯಕ ಸಮಾಜದ ಮುಖಂಡರು ಮಂಡಿಸಿದ್ದರಿಂದ ಇದುವರೆಗೂ ಸಾರ್ವಜನಿಕರ ಬಳಕೆಗೆ ಲಭ್ಯವಾಗಿರಲಿಲ್ಲ. ಈಗ ಎಲ್ಲಾರ ಒತ್ತಾಯ ಮತ್ತು ಹಂತ ಹಂತವಾಗಿ ಅನುದಾನ ತರುವ ಜೊತೆಗೆ ಬಳಕೆಯ ಆದಾಯದಲ್ಲಿ ಸುಧಾರಣೆಗೆ ಇಲಾಖೆ ಮತ್ತು ವಾಲ್ಮೀಕಿ ಸಮಾಜ ಬಳಕೆಗೆ ಮುಕ್ತಗೊಳಿಸಿದ್ದಾರೆ.
ಇದನ್ನೂ ಓದಿ: Adike Rate | ಅಡಕೆ ಧಾರಣೆ | 02 ಅಕ್ಟೋಬರ್ 2025 | ಯಾವ್ಯಾವ ಮಾರುಕಟ್ಟೆಯಲ್ಲಿ ಎಷ್ಟಿದೆ ಅಡಿಕೆ ರೇಟ್?
ವಾಲ್ಮೀಕಿ ಭವನ ಸೌಲಭ್ಯಗಳು
ವಿಶಾಲವಾದ ಹಾಲ್
ಒಂದು ಸಾವಿರಕ್ಕೂ ಹೆಚ್ಚು ಆಸನಗಳ ವ್ಯವಸ್ಥೆ.
ಹನ್ನೆರಡು ಕೊಠಡಿಗಳು
ಪಾರ್ಕಿಂಗ್ ವ್ಯವಸ್ಥೆ
ನೆಲ ಮಹಡಿಯಲ್ಲಿ ವಿಶಾಲವಾದ ಊಟದ ಹಾಲ್
ಅಡುಗೆ ಸಿದ್ಧತೆ ಕೋಣೆ,
ಶೌಚಾಲಯ ವ್ಯವಸ್ಥೆ
ಜಿಲ್ಲೆಯ ಭವನಗಳ ಅತ್ಯುತ್ತಮ
ವೇದಿಕೆಗೆ ಬೆಳಕಿನ ವ್ಯವಸ್ಥೆ
ಧ್ವನಿ ವರ್ಧಕ ವ್ಯವಸ್ಥೆ.
ಹಾಲ್‌ನಲ್ಲಿ ಉತ್ತಮ ಆಸನಗಳು
ಗಂಡು ಹೆಣ್ಣಿನ ಕೊಠಡಿಗಳು
ವಾಲ್ಮೀಕಿ ಭವನಕ್ಕೆ ತುರ್ತಾಗಿರುವ ಅಗತ್ಯತೆಗಳು
ಊಟದ ಹಾಲ್ ಗೆ ಕುರ್ಚಿ ಹಾಗೂ ಟೇಬಲ್
ಊಟದ ಸಿದ್ದತೆಗೆ ಪಾತ್ರೆ ಸಾಮಾನುಗಳು
ಗ್ಯಾಸ್ ಸ್ಟವ್ ಗಳು
ಕಸ ತೆಗೆಯುವ ಮಿಷನ್
ಮತ್ತೊಂದು ಬೃಹತ್ ಸಿಂಟೇಕ್ಸ್
ಚಿಕ್ಕ ವಿನಾಯಕನ ವಿಗ್ರಹದ ದೇವಸ್ಥಾನ
ಚೇರ್ ಫಿಕ್ಸಿಂಗ್ ನಲ್ಲಿ ಏರಿಳಿತದ ಕೆಲಸಕೆಲಸ
ಮಾಜಿ ನಗರಸಭೆ ಅಧ್ಯಕ್ಷ ಬಿ.ಕಾಂತರಾಜ್ ಶ್ರಮದಿಂದ ವಾಲ್ಮೀಕಿ ಸಮಾಜಕ್ಕೆ ಜಾಗ ಮಂಜೂರು
ನಗರಸಭೆ ಹಳೇ ಕಟ್ಟಡವಿದ್ದ ಜಾಗದಲ್ಲಿ ವಾಲ್ಮೀಕಿ ಭವನ ನಿರ್ಮಿಸಲು ನಿರ್ಧರಿಸಿದ್ದರು. ನಗರಸಭೆ ಜಾಗವಾದ್ದರಿಂದ ನಗರಸಭೆ ಕೆಲವು ಸದಸ್ಯರು ಆಕ್ಷೇಪ ಸಹ ಕೇಳಿ ಬಂದಿದ್ದವು. ಆದರೆ ವಾಲ್ಮೀಕಿ ಭವನಕ್ಕೆ ಜಾಗ ಕೊಡಿಸುವಲ್ಲಿ ನಾಯಕ ಸಮಾಜದ ಮುಖಂಡ ಅಂದಿನ ನಗರಸಭೆ ಅಧ್ಯಕ್ಷರಾಗಿದ್ದ ಬಿ.ಕಾಂತರಾಜ್ ಅವರ ಪರಿಶ್ರಮದಿಂದ ಹಲವು ಸವಾಲುಗಳು ಎದುರಾಗಿದ್ದರು ನಗರಸಭೆ ಸದಸ್ಯರೆಲ್ಲರನ್ನೂ ಮನವೊಲಿಸಿ ವಾಲ್ಮೀಕಿ ಸಮಾಜಕ್ಕೆ ಜಾಗ ಕೊಡಿಸುವಲ್ಲಿ ಕಾಂತರಾಜ್ ಯಶಸ್ವಿಯಾದರು, ಇದಕ್ಕೆ ನಾಯಕ ಸಮಾಜದ ಮುಖಂಡರು ಸಾಥ್ ನೀಡಿದರು.
ಬಾಕ್ಸ್
ಚಿತ್ರದುರ್ಗ ನಗರದ ಹೃದಯ ಭಾಗದಲ್ಲಿರುವ ವಾಲ್ಮೀಕಿ ಭವನ ವಾಲ್ಮೀಕಿ ಜಯಂತಿಯಂದು ಜನರ ಬಳಕೆಗೆ ಸಿದ್ದತೆಗೊಡಿದೆ. ವಾಲ್ಮೀಕಿ ಭವನಕ್ಕೆ ಮೂಲಭೂತ ಸೌಲಭ್ಯಕ್ಕೆ ಅನುದಾನ ಅತ್ಯಗತ್ಯವಿದೆ ಎಂಬುದನ್ನು ಮುಖಂಡರು ಗಮನಕ್ಕೆ ತಂದಿದ್ದು ಸರ್ಕಾರ, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸ್ಥಳೀಯ ಶಾಸಕರ ಜೊತೆ ಅನುದಾನದ ಕುರಿತು ಚರ್ಚಿಸಲಾಗುವುದು.
ಟಿ.ರಘುಮೂರ್ತಿ
ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮ ಅಧ್ಯಕ್ಷರು ಹಾಗೂ ಶಾಸಕರು ಚಳ್ಳಕೆರೆ
ಇದನ್ನೂ ಓದಿ: Rashi prediction | ಇಂದಿನ ರಾಶಿ ಭವಿಷ್ಯ | 03-10-2025
ವಾಲ್ಮೀಕಿ ಜಯಂತಿ ಪೂರ್ವಭಾವಿ ಸಭೆಯಲ್ಲಿ ಸಮಾಜದ ಮುಖಂಡರು ಮನವಿ ಮತ್ತು ಅಪರ ಜಿಲ್ಲಾಧಿಕಾರಿಗಳ ಸೂಚನೆಯಂತೆ ವಾಲ್ಮೀಕಿ ಭವನವನ್ನು ಸಾರ್ವಜನಿಕ ಬಳಕೆಗೆ ಸಿದ್ದತೆ ಕೈಗೊಳ್ಳಲಾಗಿದೆ. ವಾಲ್ಮೀಕಿ ಭವನದಲ್ಲಿ ವಾಲ್ಮೀಕಿ ಜಯಂತಿ ನಡೆದ ನಂತರ ನಿರ್ವಹಣೆಗೆ ಸಮಿತಿ ರಚಿಸಲಾಗುವುದು. ಇಲಾಖೆ ಮಾರ್ಗಸೂಚಿಯನ್ವಯ ಭವನದ ಬಾಡಿಗೆ ದರ ಸಹಾ ನಿಗದಿಪಡಿಸಲಾಗುವುದು. ಭವನವನ್ನು ಜಯಂತಿಗೆ ಸಜ್ಜುಗೊಳಿಸುವ ಕೆಲಸ ಪೂರ್ಣಗೊಂಡಿದೆ.
– ದಿವಾಕರ್, ಜಿಲ್ಲಾ ಪರಿಶಿಷ್ಟವರ್ಗಗಳ ಕಲ್ಯಾಣಾಧಿಕಾರಿ
