Chitradurga news|nammajana.com|15-6-2024
ನಮ್ಮಜನ.ಕಾಂ, ಚಿತ್ರದುರ್ಗ: ವಿದ್ಯಾರ್ಥಿಗಳು ಅಧ್ಯಯನದ ಜತೆಗಸರ ಕಾಳಜಿ ವಹಿಸಬೇಕು. ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬ ನಾಗರೀಕರೂ ಕೈಜೋಡಿಸಬೇಕು. ಅಂದಾಗ ಮಾತ್ರ ಭವಿಷ್ಯದಲ್ಲಿ ಪರಿಸರ ಸಮತೋಲನೆ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಅಪರ ಜಿಲ್ಲಾಧಿಕಾರಿ (Chitradurga) ಬಿ.ಟಿ.ಕುಮಾರಸ್ವಾಮಿ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ (Chitradurga) ಕಚೇರಿ ಸಮೀಪದ ಕ್ರೀಡಾಭವನದಲ್ಲಿ ಶನಿವಾರ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಚಿತ್ರಕಲೆ ಸ್ಪರ್ಧೆ ಹಾಗೂ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪರಿಸರ ಸಂರಕ್ಷಣೆ ಕಾರ್ಯಕ್ಕೆ ವಿದ್ಯಾರ್ಥಿಗಳು ಜಾಗೃತರಾಗುವುದರ ಜತೆಗೆ ತಮ್ಮ ಕುಟುಂಬ ಹಾಗೂ ನೆರೆಹೊರೆಯವನ್ನೂ ಜಾಗೃತ ಮಾಡಬೇಕು. ಕೇವಲ ಪಠ್ಯಕ್ಕೆ ಮಾತ್ರ ಸೀಮಿತವಾಗದೇ, ಅಂಕಪಟ್ಟಿ ಹೊರತಾಗಿ ನಮ್ಮ ಜೀವನ ರೂಪಿಸಿಕೊಳ್ಳುವ ಕೌಶಲ್ಯಭರಿತ ಶಿಕ್ಷಣ ಪಡೆಯುವಂತಾಗಬೇಕು. ಮನೆಯಿಂದಲೇ ಪರಿಸರ ಜಾಗೃತಿ ಮೂಡಬೇಕು. ನಮ್ಮ ಮನೆ, ನಮ್ಮ ಮನಸ್ಸು ಸ್ವಚ್ಛವಾಗಿದ್ದರೆ ಪರಿಸರವೂ ಸ್ವಚ್ಛವಾಗಿರಲಿದೆ ಎಂದರು.
ನಾವುಗಳು ಪರಿಸರದ ಮೇಲೆ ದೌರ್ಜನ್ಯ ಮಾಡುತ್ತಾ ಹೋದಂತೆ ಮುಂದಿನ ದಿನಗಳಲ್ಲಿ ಭೂಮಂಡಲದಲ್ಲಿ ಮನುಷ್ಯ ಬದುಕುವ ಪರಿಸ್ಥಿತಿ ಕಷ್ಟಸಾಧ್ಯವಾಗಲಿದೆ. ಆದ್ದರಿಂದ ಮಕ್ಕಳು ಪರಿಸರದ ಕಾಳಜಿ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವಲಯ ಅರಣ್ಯಾಧಿಕಾರಿ ಉಷಾರಾಣಿ ಮಾತನಾಡಿ ಪ್ರತಿ ವರ್ಷವೂ ಜೂನ್ 5ರಂದು ವಿಶ್ವ ಪರಿಸರ ದಿನ ಆಚರಣೆ ಮಾಡಲಾಗುತ್ತದೆ. ಅರಣ್ಯ ಇಲಾಖೆ ವತಿಯಿಂದಲೂ ಗಿಡಗಳನ್ನು ಬೆಳೆಸಿ ವಿತರಣೆ ಮಾಡಲಾಗುತ್ತದೆ.ಪರಿಸರ ಉಳಿಸಲು ಹೆಚ್ಚಿನ ಸಂಖ್ಯೆಯಲ್ಲಿ ಗಿಡಮರಗಳನ್ನು ಬೆಳೆಸಬೇಕು. ಪರಿಸರ ಸಂರಕ್ಷಣೆ ನಿರಂತರ ಕೆಲಸವಾಗಬೇಕು ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ: Renukaswamy Murder Case: ಮಗನ ಬಂಧನದ ಸುದ್ದಿ ಟಿವಿ ಯಲ್ಲಿ ನೋಡಿ ಕುಸಿದು ಬಿದ್ದು ತಂದೆ ಸಾವು
ನಗರಸಭೆ ಪೌರಾಯುಕ್ತೆ ಎಂ.ರೇಣುಕಾ ಮಾತನಾಡಿ, ಪ್ರತಿಯೊಬ್ಬರು ಪರಿಸರಸ್ನೇಹಿ ಜೀವನ ನಡೆಸಬೇಕು. ಪ್ರಕೃತಿ ಹಾಳು ಮಾಡಿದರೆ ಮನುಷ್ಯ ಜೀವನ ನಡೆಸಲು ಸಾಧ್ಯವಿಲ್ಲ. ಪ್ಲಾಸ್ಟಿಕ್ ಬಳಕೆ ದೂರಮಾಡಿ ಬಟ್ಟೆ ಬ್ಯಾಗ್ ಬಳಸಬೇಕು ಎಂದು ಕಿವಿಮಾತು ಹೇಳಿದರು.
ಚಿತ್ರದುರ್ಗ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ನಾಗಭೂಷಣ್ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಹವಾಮಾನ ವೈಪರಿತ್ಯಾದಿಂಗಾಗಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಶಾಲಾ ಹಂತದಲ್ಲಿಯೇ ಮಕ್ಕಳಿಗೆ ಪರಿಸರ ಪ್ರಜ್ಞೆ ಹಾಗೂ ಪ್ರಾಯೋಗಿಕ ಮಾರ್ಗದರ್ಶನ ನೀಡಿ, ಪರಿಸರ ಕಾಳಜಿ ಕುರಿತು ಅರಿವು ಮೂಡಿಸಬೇಕು ಎಂದು ಹೇಳಿದರು.
ಇದನ್ನೂ ಓದಿ: Adarsh Vidyalaya: ಆದರ್ಶ ವಿದ್ಯಾಲಯ ದಾಖಲಾತಿ | ಪ್ರವೇಶ ಪರೀಕ್ಷೆ ಮುಂದೂಡಿಕೆ
ಪರಿಸರ ಅಧಿಕಾರಿ ಈ.ಪ್ರಕಾಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಜನಸಂಖ್ಯಾ ಸ್ಪೋಟ, ನಗರೀಕರಣ, ಕೈಗಾರೀಕರಣ ಹೆಚ್ಚಳ, ಮನುಷ್ಯನ ಹಸ್ತಕ್ಷೇಪದಿಂದಾಗಿ ಜೀವ ವೈವಿಧ್ಯತೆ ಹಾಳಾಗಿದೆ. ಹಾಗಾಗಿ ನಮ್ಮ ಜೀವನಶೈಲಿಯು ಪರಿಸರ ಸ್ನೇಹಿಯಾಗಿರಬೇಕು ಎಂದು ಹೇಳಿದರು.
ಪರಿಸರ ಸಂರಕ್ಷಣೆ ಜಾಗೃತಿಗಾಗಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದ್ದು, ಪರಿಸರ ದಿನಾಚರಣೆ ಅಂಗವಾಗಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಪ್ರಬಂಧ ಸ್ಪರ್ಧೆ, ಚಿತ್ರಕಲೆ ಸ್ಪರ್ಧೆ ಹಮ್ಮಿಕೊಂಡು ಪರಿಸರದ ಕುರಿತು ಜಾಗೃತಿ ಮೂಡಿಸಲಾಗಿದ್ದು, ಇಂದಿನ ವಿದ್ಯಾರ್ಥಿಗಳು ಪರಿಸರ ಯೋಧರಾಗಬೇಕಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪ ಪರಿಸರ ಅಧಿಕಾರಿ ರಾಜೇಶ್ ಸೇರಿದಂತೆ ವಿವಿಧ ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು ಇದ್ದರು.
ಚಿತ್ರಕಲೆ, ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಚಿತ್ರಕಲೆ ಸ್ಪರ್ಧೆ ಹಾಗೂ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ವಿಶ್ವ ಪರಿಸರ ದಿನಾಚರಣೆ-2024ರ ಘೋಷವಾಕ್ಯ “ಭೂ ಮರು ಸ್ಥಾಪನೆ, ಮರು ಭೂಮಿಕರಣ ಹಾಗೂ ಬರ ತಡೆಯುವಿಕೆ” ನಮ್ಮ ಭೂಮಿ ನಮ್ಮ ಭವಿಷ್ಯ ಸಂಬಂಧಿಸಿದಂತೆ ಚಿತ್ರದುರ್ಗ ನಗರ ವ್ಯಾಪ್ತಿಯ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸ್ಥಳದಲ್ಲಿಯೇ ಚಿತ್ರಕಲೆ ಮತ್ತು ಪ್ರಬಂಧ ಸ್ಪರ್ಧೆಯನ್ನು ಜೂನ್ 7ರಂದು ಏರ್ಪಡಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಚಿತ್ರಕಲೆ ಸ್ಪರ್ಧೆ: (Chitradurga)
8ನೇ ತರಗತಿಯಲ್ಲಿ ಡಾನ್ ಬಾಸ್ಕೋ ಶಾಲೆಯ ರಿದಾ ಷರೀಪ್ (ಪ್ರಥಮ), ವಿದ್ಯಾವಿಕಾಸ ಶಾಲೆಯ ಹರ್ಷಿತ್ ಎನ್ ಬೇದ್ರೆ (ದ್ವಿತೀಯ), ಎಸ್ಜೆಎಂ ಸಿಬಿಎಸ್ಇ ಶಾಲೆಯ ಸಿ.ಅನ್ವಿತ (ತೃತೀಯ) ವಾಸವಿ ವಿದ್ಯಾ ಸಂಸ್ಥೆಯ ಎಸ್.ವಿನೀತ್ ಚಂದ್ರ (ನಾಲ್ಕನೇ) ಬಹುಮಾನ ಪಡೆದರು.
9ನೇ ತರಗತಿಯಲ್ಲಿ ವಿದ್ಯಾವಿಕಾಸ ವಿದ್ಯಾಸಂಸ್ಥೆಯ ಎಸ್.ಕೆ.ಸಂಪ್ರತಾ (ಪ್ರಥಮ), ಕೆ.ಕೆ.ನ್ಯಾಷನಲ್ ಶಾಲೆಯ ಎ.ಪವನ್ (ದ್ವಿತೀಯ) ಅನುಪಮ ಇಂಟರ್ ನ್ಯಾಷನಲ್ ಶಾಲೆಯ ಎಂ.ದೇವರಾಜ್ (ತೃತೀಯ) ಎಸ್ಜೆಎಂ ಆಂಗ್ಲ ಮಾಧ್ಯಮ ಶಾಲೆಯ ಟಿ.ತೃಪ್ತಿ (ನಾಲ್ಕನೇ) ಬಹುಮಾನ ಪಡೆದರು.
10ನೇ ತರಗತಿಯಲ್ಲಿ ಎಸ್ಜೆಎಂ ಸಿಬಿಎಎಸ್ಇ ಶಾಲೆಯ ಸಿ.ಜೀವಿತಾ (ಪ್ರಥಮ), ಸಿ.ಭಾರತಿ (ದ್ವಿತೀಯ), ವಿದ್ಯಾವಿಕಾಸ ವಿದ್ಯಾಸಂಸ್ಥೆಯ ರಾಮ್ ಚರಣ್ (ತೃತೀಯ) ಜ್ಞಾನ ಭಾರತಿ ಶಾಲೆಯ ಎಂ ಶೋಭಾ (ನಾಲ್ಕನೇ) ಬಹುಮಾನ ಪಡೆದರು.
ಪ್ರಬಂಧ ಸ್ಪರ್ಧೆ: (Chitradurga)
8ನೇ ತರಗತಿಯಲ್ಲಿ ಎಸ್ಜೆಎಂ ಆಂಗ್ಲ ಮಾಧ್ಯಮ ಶಾಲೆಯ ಟಿ.ಮೌಲ್ಯಶ್ರಿ (ಪ್ರಥಮ), ಶ್ರೀ ವಾಸವಿ ಕನ್ನಡ ಮಾಧ್ಯಮ ಶಾಲೆಯ ಆರ್.ಬೃಂದಾ (ದ್ವೀತಿಯ), ಕೆ.ಕೆ.ನ್ಯಾಷನಲ್ ಶಾಲೆಯ ಎಂ.ಶುಭಶ್ರೀ (ತೃತೀಯ) ವಿದ್ಯಾವಿಕಾಸ ವಿದ್ಯಾಸಂಸ್ಥೆಯ ಬಿ.ವಿ.ಬಿಂದು (ನಾಲ್ಕನೇ) ಬಹುಮಾನ ಪಡೆದರು.
9ನೇ ತರಗತಿಯಲ್ಲಿ ಸಂಪಿಗೆ ಸಿದ್ದೇಶ್ವರ ಶಾಲೆಯ ಯಶಸ್ವಿನಿ (ಪ್ರಥಮ) ಕೆ.ಕೆ.ನ್ಯಾಷನಲ್ ಶಾಲೆಯ ಮದಿಹ ಫಾತಿಮಾ (ದ್ವೀತಿಯ) ಎಸ್ಜೆಎಂ ಸಿಬಿಎಸ್ಇ ಶಾಲೆಯ ಸಿ.ಎಸ್.ಹಿತಾಶ್ರೀ (ತೃತೀಯ) ಅನುಮಪ ಇಂಟರ್ ನ್ಯಾಷನಲ್ ಶಾಲೆಯ ಸಿ.ರುಕ್ಮೀಣಿ (ನಾಲ್ಕನೇ) ಬಹುಮಾನ ಪಡೆದರು.
10ನೇ ತರಗತಿಯಲ್ಲಿ ವಿದ್ಯಾವಿಕಾಸ ವಿದ್ಯಾಸಂಸ್ಥೆಯ ವಿ.ಜಾನವಿ (ಪ್ರಥಮ) ಎಸ್ಜೆಎಂ ಸಿಬಿಎಸ್ಇ ಶಾಲೆಯ ಎ.ಎಂ.ಸುಖಿತಾ (ದ್ವಿತೀಯ) ಕೆ.ಕೆ.ನ್ಯಾಷನಲ್ ಶಾಲೆಯ ಎ.ಉಮೇಸ್ನಾ (ತೃತೀಯ) ಬೃಹನ್ಮಠ ಶಾಲೆಯ ಪಿ.ಸಿ.ಬಿಂದು (ನಾಲ್ಕನೇ) (Chitradurga) ಬಹುಮಾನ ಪಡೆದರು.