Chitradurga News | Nammajana.com | 07-07-2025
ನಮ್ಮಜನ ನ್ಯೂಸ್ ಕಾಂ, ಚಿತ್ರದುರ್ಗ: ಇತ್ತೀಚಿನ ವರ್ಷಗಳಲ್ಲಿ ಸೇವಂತಿಗೆ ಹೂವು(Chrysanthemum flower) ಬೆಳೆಗೆ ಸೊರಗು ರೋಗ ಬಾಧೆ ಅತಿಯಾಗಿ ಕಾಡುತ್ತಿದೆ. ಕಾರಣ, ಹೂವಿನ ಗುಣಮಟ್ಟ ಹಾಗೂ ಇಳುವರಿ ಕ್ಷೀಣಿಸುತ್ತಿರುವ ಪರಿಣಾಮ ಆಷಾಢ ಮಾಸದಲ್ಲೇ ಹೂವಿನ ಬೆಲೆ ಗಗನಕ್ಕೇರಿದೆ.
ಇದನ್ನೂ ಓದಿ: ಬಂಗಾರದ ಬೆಲೆಯಲ್ಲಿ ಭರ್ಜರಿ ಇಳಿಕೆ

ರಾಸಾಯನಿಕಯುಕ್ತ ಔಷಧ ಬಳಕೆ, ನಿರಂತರ ಒಂದೇ ಬೆಳೆ ಪದ್ಧತಿಯಿಂದಾಗಿ ಸೇವಂತಿಗೆ ಬೆಳೆಗೆ ಕಳೆದೆರೆಡು ವರ್ಷಗಳಿಂದ ಸೊರಗು ರೋಗ ಕಾಣಿಸಿಕೊಳ್ಳುತ್ತಿದೆ. ರೋಗ ಬಾಧೆಯಿಂದಾಗಿ ಶೇ.20ರಿಂದ 25 ರಷ್ಟು ಗಿಡಗಳು ಸೊರಗುತ್ತಿವೆ. ಜತೆಗೆ ನುಸಿ ರೋಗವೂ ಸೇರಿಕೊಂಡು ಸೇವಂತಿಗೆ ಬೆಳೆಗಾರರನ್ನು ಸಂಕಷ್ಟಕ್ಕೆ ದೂಡಿದೆ.
ಸೊರಗು ಮತ್ತು ನುಸಿ ರೋಗಗಳಿಂದ ಸೇವಂತಿಗೆ ಬೆಳೆಯ ಇಳುವರಿ ಕಡಿಮೆ ಆಗಿರುವುದರಿಂದ ಮಾರುಕಟ್ಟೆಗೆ ಕಡಿಮೆ ಪ್ರಮಾಣದ ಹೂವು ಬರುತ್ತಿದೆ. ಇದರಿಂದ ಹೂವಿನ ದರ ಹೆಚ್ಚಾಗಿದೆ. ಮೊಹರಂ, ಆಷಾಢ ಏಕಾದಶಿ ಇರುವುದರಿಂದ ಭಾನುವಾರ ಸಗಟು ಹೂವಿನ(Chrysanthemum flower) ಮಾರುಕಟ್ಟೆಯ ಲ್ಲಿ ಎಂಟರಿಂದ ಹತ್ತು ಮಾರು ಸೇವಂತಿಗೆ 1 ಸಾವಿರ ರೂ.ಗೆ ಮಾರಾಟವಾಯಿತು.
ಚಿತ್ರದುರ್ಗ ಜಿಲ್ಲೆಯಲ್ಲಿ ಹೂವಿನ ಬೆಳೆಗೆ ಸೂಕ್ತ ವಾತಾ ವರಣ ಇದ್ದು, 2500 ಸಾವಿರಕ್ಕೂ ಹೆಚ್ಚು ರೈತರು 3 ಸಾವಿರ ಹೆಕ್ಟೇರ್ ಗೂ ಹೆಚ್ಚು ಪ್ರದೇಶದಲ್ಲಿ ಹೂವು ಬೆಳೆಯಾಗುತ್ತಿದೆ. ಸಣ್ಣ ಅತಿ ಸಣ್ಣ ರೈತರು ಸೇವಂತಿಗೆ, ಸುಗಂಧರಾಜ, ಚೆಂಡು ಹೂ, ಮಲ್ಲಿಗೆ, ಕನಕಾಂಬರ, ಗುಲಾಬಿ, ಆಸ್ಟರ್ ಮತ್ತಿತರ ಹೂವು ಬೆಳೆಯುತ್ತಾರೆ. ಇಲ್ಲಿನ ಹೂವಿಗೆ ಹೊರ ಜಿಲ್ಲೆ ರಾಜ್ಯಗಳಲ್ಲೂ ಬೇಡಿಕೆಯಿದೆ.
ಇದನ್ನೂ ಓದಿ: ಭದ್ರೆ ನೀರು ಹರಿಸಿ ರೈತರಿಗೆ ಶಕ್ತಿ ತುಂಬಿ
ಹಿಂದೆಲ್ಲಾ ಸೇವಂತಿಗೆಯಲ್ಲಿ 3-4 ತಳಿಗಳನ್ನು ಮಾತ್ರ ಬೆಳೆಯಲಾಗುತ್ತಿತ್ತು. ಈಗ ತಳಿಗಳ ಸಂಖ್ಯೆ ಹತ್ತಕ್ಕೇರಿದೆ. ಅಲ್ಲದೆ ವರ್ಷಕ್ಕೆ ಮೂರು ಬೆಳೆ(Chrysanthemum flower) ಬೆಳೆಯುತ್ತಿದ್ದು, ರಾಸಾಯನಿಕ ಬಳಕೆ ಹೆಚ್ಚಾಗಿದೆ. ಈ ಎಲ್ಲ ಕಾರಣಗಳಿಂದ ಬೆಳೆಗಳಿಗೆ
ಎಲ್ಲೆಲ್ಲಿ ಹೂವಿನ ಬೆಳೆ?
ಮಲ್ಲಾಪುರ, ಮೆದೇಹಳ್ಳಿ, ಮದಕರಿಪುರ, ಹುಣಸೆಕಟ್ಟೆ, ಹಾಯ್ಕಲ್, ಬೆಳಗಟ್ಟಿ. ಅನ್ನೇಹಾಳ್, ದೊಡ್ಡಸಿದ್ದವ್ವನಹಳ್ಳಿ, ಜೆ.ಎನ್. ಕೋಟೆ, ಎಣ್ಣೆಗೆರೆ, ಕುಂಚಿಗನಾಳ್, ಬೊಮ್ಮಕ್ಕನಹಳ್ಳಿ, ನೆಲಗೇತನಹಟ್ಟಿ, ಸಜ್ಜನಕೆರೆ, ಬೊಮ್ಮೇರಹಳ್ಳಿ, ರಾಮದುರ್ಗ, ಜೋಡಿ ಚಿಕ್ಕೇನಹಳ್ಳಿ, ಕಕ್ಕೇರು, ಪಲ್ಲವಗೆರೆ, ಪಾಪೇನಹಳ್ಳಿ ಸೇರಿದಂತೆ ಚಿತ್ರದುರ್ಗ, ಹಿರಿಯೂರು, ಚಳ್ಳಕೆರೆ ಭಾಗಗಳಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಹೂವು ಬೆಳೆಯಲಾಗುತ್ತದೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252