Chitradurga news|nammajana.com|1-12-2024
ನಮ್ಮಜನ.ಕಾಂ, ಚಿತ್ರದುರ್ಗ: ಕೋಟೆ ನಾಡಿನ ಪ್ರತಿಷ್ಠಿತ ಸಿಟಿ ಇನ್ ಸ್ಟಿಟ್ಯೂಟ್ ಗೆ ಶನಿವಾರ ನಡೆದ ಚುನಾವಣೆಯಲ್ಲಿ (City Institute Election) ಎಲ್.ಎಲ್. ವೆಂಕಟೇಶ ರೆಡ್ಡಿ ಕಾರ್ಯದರ್ಶಿಯಾಗಿ, ಉಪಾಧ್ಯಕ್ಷ ರಾಗಿ ಟಿ.ಎಸ್.ಎನ್.ಜಯಣ್ಣ ಹಾಗೂ ಖಜಾಂಚಿ ಯಾಗಿ ಅಜಿತ್ ಕುಮಾರ್‌ಜೈನ್ ಭರ್ಜರಿ ಗೆಲುವು ಸಾಧಿಸಿ ಆಯ್ಕೆಯಾಗಿದ್ದಾರೆ.ಸಿಎಂ
ಚಿತ್ರದುರ್ಗ ಸಿಟಿ ಇನ್‌ಸ್ಟಿಟ್ಯೂಟ್‌ನ ಚುನಾವಣೆ ಸದ್ದಿಲ್ಲದಂತೆ ನಡೆಯುತ್ತಿತ್ತು ಆದರೆ ಈ ಬಾರಿ ಮಾತ್ರ ಬಾರಿ ಅಖಾಡದಲ್ಲಿ ಬಾರೀ ಪೈಪೋಟಿ ಏರ್ಪಟ್ಟಿದ್ದು ಜಿದ್ದಾ ಜಿದ್ದಿಯಿಂದ ಕೂಡಿತ್ತು.


ಜಯ್ಯಣ್ಣ ಉಪಾಧ್ಯಕ್ಷರಾಗಿ ಆಯ್ಕೆ
ನ್ಯಾಯಾಲಯದಿಂದ ಮತ ಚಲಾಯಿಸುವ ಹಕ್ಕು ಪಡೆದು ಸದಸ್ಯರು ಚುನಾವಣೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಮತದಾನ ಆರಂಭವಾಗುವ ಎರಡು ತಾಸು ಮುನ್ನ ಸದಸ್ಯರ (City Institute Election) ಪಟ್ಟಿ ನ್ಯಾಯಾಲಯದಿಂದ ಬಂದಿದ್ದು, ಚುನಾವಣೆ ಮತ್ತೊಂದು ಮಗ್ಗಿಲಿಗೆ ತಿರುವು ಪಡೆಯಲು ಕಾರಣವಾಯಿತು ಎಂಬ ಸಾರ್ವಜನಿಕರಲ್ಲಿ ಕೇಳಿ ಬರುತ್ತಿದೆ.
ಚುನಾವಣೆ ಘೋಷಣೆಯಾದಾಗ ಕೇವಲ 456 ಮಂದಿ ಮಾತ್ರ ಮತದಾನದ ಹಕ್ಕು ಪಡೆದಿದ್ದರು. ನಂತರ 98 ಜನರ ಪಟ್ಟಿಯೊಂದಕ್ಕೆ ಹೈಕೋರ್ಟ್ ಒಪ್ಪಿಗೆ ನೀಡಿ ಮತದಾನದ ಅವಕಾಶ ಕಲ್ಪಿಸಿತು. ಬಳಿಕ 32, ತರುವಾಯ 38 ಹಾಗೂ ಅಂತಿಮವಾಗಿ ಮತ್ತೆ 42 ಜನರಿಗೆ ಹೈಕೋರ್ಟ್ ಮತದಾನದ ಅವಕಾಶ ಮಾಡಿಕೊಟ್ಟಿತು. ಇದರಿಂದಾಗಿ ಒಟ್ಟು 666 ಮಂದಿ ಮತದಾನದ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು.

ಅಜಿತ್ ಕುಮಾರ್ ಜೈನ್ ಖಜಾಂಚಿ ಆಗಿ ಆಯ್ಕೆ
ಒಟ್ಟು ಹತ್ತು ಪದಾಧಿಕಾರಿ ಹುದ್ದೆಗೆ ಚುನಾವಣೆ ನಡೆದಿದ್ದು, 22 ಮಂದಿಸ್ಪರ್ಧಿಸಿದ್ದರು.ಕಾರ್ಯದರ್ಶಿ, ಉಪಾಧ್ಯಕ್ಷರ ಸ್ಥಾನಕ್ಕೆ ತಲಾ ಇಬ್ಬರು ಹಾಗೂ ಖಜಾಂಚಿಗೆ ಮೂವರು ಸ್ಪರ್ಧಿಸಿದ್ದು, ಉಳಿದ (City Institute Election) ಏಳು ನಿರ್ದೇಶಕರ ಸ್ಥಾನಕ್ಕೆ ಹದಿನೈದು ಮಂದಿ ಕಣದಲ್ಲಿದ್ದರು.
ಶನಿವಾರ ಬೆಳಿಗ್ಗೆ 9 ಗಂಟೆಗೆ ಆರಂಭವಾದ ಮತದಾನದಲ್ಲಿ ಚಿತ್ರದುರ್ಗ ಜಿಲ್ಲೆಯಷ್ಟೇ ಅಲ್ಲದೆ ಬೆಂಗಳೂರು, ದಾವಣಗೆರೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ ಸದಸ್ಯರು ಗುಂಪುಗಳಾಗಿ ಆಗಮಿಸಿ ಮತ ಚಲಾಯಿಸಿದರು. ಮತ ಗಟ್ಟಿಗೆ ಹೋಗುವ ಕಡೇ ಗಳಿಗೆಯವರೆಗೆ ಮತದಾರರ ಮನವೊಲಿಸುವ ದೃಶ್ಯಗಳು ಸಾಮಾನ್ಯವಾಗಿದ್ದವು. ಚುನಾವಣೆ ಹಿನ್ನಲೆ ಬಿಗಿ ಪೊಲೀಸ್ ಬಂದೋ ಬಸ್ತ್ ಏರ್ಪಡಿಸಲಾಗಿತ್ತು.
ಮತದಾನ 4 ಗಂಟೆಗೆ ಪೂರ್ಣಗೊಂಡ ನಂತರ 4.15 (City Institute Election) ಸುಮಾರಿಗೆ ಮತ ಎಣಿಕೆ ಕೈಗೆತ್ತಿಕೊಳ್ಳಲಾಯಿತು. ಆರಂಭದಲ್ಲಿ ಕಾರ್ಯದರ್ಶಿ, ಉಪಾಧ್ಯಕ್ಷ ಹಾಗೂ ಖಜಾಂಚಿ ಮತ ಪತ್ರಗಳ ಎಣಿಕೆಗೆ ಹಾಕಲಾಯಿತು. ಅಂತಿಮವಾಗಿ ಕಾರ್ಯದರ್ಶಿ ಸ್ಥಾನಕ್ಕೆ ಎನ್.ಎಲ್. ವೆಂಕಟೇಶರೆಡ್ಡಿ, ಉಪಾಧ್ಯಕ್ಷರಾಗಿ ಟಿ.ಎಸ್.ಎನ್ .ಜಯಣ್ಣ, ಖಜಾಂಚಿಯಾಗಿ ಅಜಿತ್ ಕುಮಾರ್ ಜೈನ್ ಆಯ್ಕೆಯ ಚುನಾವಣಾ ಅಧಿಕಾರಿ ಘೋಷಿಸಿದರು. ಸಿಟಿ ಇನ್ ಸ್ಟಿಟ್ಯೂಟ್ ಡಿಸಿ ಗೌರವಾಧ್ಯಕ್ಷರಾಗಿದ್ದರೆ, ಕಾರ್ಯದರ್ಶಿ ಹುದ್ದೆ ಪ್ರಮುಖವಾದುದು.
ಇದನ್ನೂ ಓದಿ: ಚಿತ್ರದುರ್ಗ ವೈದ್ಯಕೀಯ ಕಾಲೇಜು: ಬೋಧಕರ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ | Instructor post
ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿದ್ದವೆಂಕಟೇಶರೆಡ್ಡಿ 296 ಮತಪಡೆದರೆ, ಎದುರಾಳಿಮಾಜಿ ಕಾರ್ಯದರ್ಶಿ ಬಿ.ಚಿತ್ರಲಿಂಗಪ್ಪ 270 ಮತಗಳ ಪಡೆದರು. ಅಂತಿ ಮವಾಗಿ ವೆಂಕಟೇಶ ರೆಡ್ಡಿ 26 ಮತಗಳ ಅಂತರದಿಂದ ಜಯ ಸಾಧಿಸಿದರು.
ಇದನ್ನೂ ಓದಿ: Dina Bhavishya: ದಿನ ಭವಿಷ್ಯ | ಇವತ್ತು ಯಾವ್ಯಾವ ರಾಶಿಗೆ ಹೇಗಿದೆ ದಿನ?
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252