Chitradurga News | Nammajana.com |24-09-2025
ನಮ್ಮಜನ.ನ್ಯೂಸ್ ಕಾಂ, ಚಳ್ಳಕೆರೆ: ಬೆಳ್ಳಂಬೆಳಗ್ಗೆ(Civic Workers) ಸೂರ್ಯದಯಕ್ಕೂ ಮುಂಚೆಯೇ ತಮಗೆ ನಿಗದಿಪಡಿಸಿದ ಸ್ಥಳಗಳಲ್ಲಿ ಕೈಯಲ್ಲಿ ಸ್ವಚ್ಚತಾ ಸಾಮಾಗ್ರಿಗಳನ್ನು ಹಿಡಿದು ತಮ್ಮಪಾಡಿಗೆ ತಾವು ಸ್ವಚ್ಚತಾ ಕಾರ್ಯವನ್ನು ಕೈಗೊಂಡು, ಸಾರ್ವಜನಿಕರಿಗೆ ಯಾವುದೇ ರೋಗಗಳು ಹರಡದಂತೆ ಸ್ವಚ್ಚತಾ ಕಾರ್ಯದ ಮೂಲಕ ತಮ್ಮ ಪ್ರಾಮಾಣಿಕ ಕಾರ್ಯದಮೂಲಕ ಜನರ ವಿಶ್ವಾಸವನ್ನು ಗಳಿಸಿದ ಪೌರಕಾರ್ಮಿಕರಿಗೆ ನಾವೆಲ್ಲರೂ ಅಭಾರಿಗಳಾಗಿರಬೇಕು. ಅವರ ಸಲ್ಲಿಸುತ್ತಿರುವ ಅತ್ಯುತ್ತಮ ಸೇವೆಯನ್ನು ನಾವೆಲ್ಲರೂ ಗೌರವಿಸಬೇಕು. ತಮ್ಮ ಆರೋಗ್ಯವನ್ನು ಮರೆತು ಜನರ ಆರೋಗ್ಯಕ್ಕಾಗಿ ನಿರಂತರ ಶ್ರಮಿಸುವ ಪೌರಕಾರ್ಮಿಕರ ಸೇವೆ ಅಮೂಲ್ಯವಾದದ್ದು ಎಂದು ಕ್ಷೇತ್ರದ ಶಾಸಕ, ಸಣ್ಣಕೈಗಾರಿಕೆ ಅಭಿವೃದ್ದಿಮಂಡಳಿ ಅಧ್ಯಕ್ಷ ಟಿ.ರಘುಮೂರ್ತಿ ತಿಳಿಸಿದರು.

ಇದನ್ನೂ ಓದಿ: Power cut : 2 ದಿನ ವಿದ್ಯುತ್ ವ್ಯತ್ಯಯ | ಈ ಹಳ್ಳಿಗಳಲ್ಲಿ ಕರೆಂಟ್ ಇರಲ್ಲ…
ಅವರು, ಮಂಗಳವಾರ ನಗರಸಭೆ ಕಾರ್ಯಾಲಯದ ಮುಂಭಾಗದಲ್ಲಿ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮವನ್ನು ಜ್ಯೋತಿಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ರಾಜ್ಯ ಸರ್ಕಾರ ಪೌರಕಾರ್ಮಿಕರ ಸಮಸ್ಯೆಗಳ ಬಗ್ಗೆ ಸಕರಾತ್ಮವಾಗಿ ಸ್ಪಂದಿಸುತ್ತಾ ಬಂದಿದೆ.
ಕಳೆದ ಕೆಲವು ತಿಂಗಳ ಹಿಂದೆ ಪೌರಕಾರ್ಮಿಕರು ಮುಷ್ಕರ ನಡೆಸಿದ ಸಂದರ್ಭದಲ್ಲಿ ಅವರ ಬೇಡಿಕೆ ಈಡೇರಿಕೆಗೆ ಮುಖ್ಯಮಂತ್ರಿಗಳು ಸಕರಾತ್ಮಕವಾಗಿ ಸ್ಪಂದಿಸುವ ಭರವಸೆ ನೀಡಿದ್ದರು. ನಗರಸಭೆ ಆಡಳಿತ ಪ್ರತಿವರ್ಷವೂ ಪೌರಕಾರ್ಮಿಕರಿಗೆ ರಕ್ಷಾಕವಚ ನೀಡುತ್ತಾ ಬಂದಿದೆ.
ಪೌರಕಾರ್ಮಿಕರು ತಮ್ಮ ಕರ್ತವ್ಯವನ್ನು ಕೀಳಾಗಿ ಬಾವಿಸದೆ ಸಾರ್ವಜನಿಕರ ಸೇವೆವೆಂದು ಪರಿಗಣಿಸಬೇಕೆಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ನಗರಸಭೆಯ ಪೌರಾಯುಕ್ತ ಎಚ್.ಜಿ.ಜಗರೆಡ್ಡಿ, ಸರ್ಕಾರ ನಿಯಮಗಳ ಅನುಸಾರ ಪೌರಕಾರ್ಮಿಕರಿಗೆ ನ್ಯಾಯುತವಾಗಿ ನೀಡಬೇಕಾದ ಎಲ್ಲಾ ಸೌಲಭ್ಯಗಳನ್ನು ನೀಡಲಾಗಿದೆ.
ಇದನ್ನೂ ಓದಿ: Chitradurga Gold Rate | ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ
ಪ್ರತಿವರ್ಷವೂ ಪೌರಕಾರ್ಮಿಕರಿಗೆ ವಿವಿಧ ಹಂತದಲ್ಲಿ ಆರೋಗ್ಯ ತಪಾಸಣೆ ನಡೆಸಲಾಗುವುದು, ಪೌರಕಾರ್ಮಿಕರ ಕುಟುಂಬಗಳನ್ನು ಆರೋಗ್ಯತಪಾಸಣೆಗೆ ವ್ಯಾಪ್ತಿಗೆ ಒಳಪಡಿಸಲಾಗಿದೆ. ರಕ್ಷಾ ಕವಚದೊಂದಿಗೆ ಪೌರಕಾರ್ಮಿಕರಿಗೆ ಉಚಿತವಾಗಿ ಸಮವಸ್ತçವನ್ನು ನೀಡಲಾಗುತ್ತಿದೆ. ಪೌರಕಾರ್ಮಿಕರ ದಿನಾಚರಣೆ ಪೌರಕಾರ್ಮಿಕರ ಪಾಲಿಗೆ ಹಬ್ಬವೇ ಸರಿ ಅವರ ಸಂತಸದಲ್ಲಿ ನಾವುಸಹ ಬಾಗಿಯಾಗಿರುವುದು ಸಂತಸ ತಂದಿದೆ ಎಂದರು.
ಪೌರಕಾರ್ಮಿಕರ ಸಮಸ್ಯೆ ಮತ್ತು ವ್ಯವಸ್ಥೆಗಳ ಬಗ್ಗೆ ನೈರ್ಮಲ್ಯ ಇಂಜಿನಿಯರ್ ನರೇಂದ್ರಬಾಬು, ಎಇಇ ವಿನಯ್, ಹಿರಿಯ ಆರೋಗ್ಯ ಮಹಾಲಿಂಗಪ್ಪ, ಗಣೇಶ್, ರುದ್ರಮುನಿ, ಗೀತಾಕುಮಾರಿ, ಹರೀಶ್ ಮುಂತಾದವರು ಮಾತನಾಡಿದರು.
ಪೌರಕಾರ್ಮಿಕರ ಅಧ್ಯಕ್ಷ ಈ.ತಿಪ್ಪೇಸ್ವಾಮಿ, ಪೌರಕಾರ್ಮಿಕರ ಸಂಕಷ್ಟಗಳಿಗೆ ಸರ್ಕಾರ ಇನ್ನೂ ಹೆಚ್ಚಿನ ಮಟ್ಟದಲ್ಲಿ ಸ್ವಂದಿಸಬೇಕಿದೆ. ಸ್ವಚ್ಚತೆಯಷ್ಟೇಯಲ್ಲದೆ, ಹಲವಾರು ರಾಷ್ಟೀಯ ಕಾರ್ಯಕ್ರಮಗಳಿಗೂ ಪೌರಕಾರ್ಮಿಕರು ಶ್ರಮವಹಿಸಿ ಕಾರ್ಯನಿರ್ವಹಿಸುತ್ತಾ ಬಂದಿದ್ದಾರೆ. ಅವರ ಸೇವೆಯ ಬಗ್ಗೆ ಸರ್ಕಾರ ಇನ್ನೂ ಹೆಚ್ಚಿನ ಗಂಭೀರ ಚಿಂತನೆ ನಡೆಸಬೇಕು.
ಇದನ್ನೂ ಓದಿ: application : ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ
ಪೌರಕಾರ್ಮಿಕರಿಗೆ(Civic Workers) ನೀಡಬೇಕಾದ ಎಲ್ಲಾ ಸೌಲಭ್ಯಗಳನ್ನು ನೀಡಬೇಕು. ಕಾರಣ, ಬೇರೆ ಎಲ್ಲಾ ಇಲಾಖೆಗೆಗಿಂತ ಪೌರಕಾರ್ಮಿಕರು ವಿಭಿನ್ನರೀತಿಯಲ್ಲಿ ಕಾರ್ಯನಿರ್ವಹಿಸುತ್ತಾ ಬಂದಿದ್ದಾರೆಂದರು. ಪೌರಕಾರ್ಮಿಕರ ಸಂಘದಿಂದ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ.
ಕಾರ್ಯಕ್ರಮದಲ್ಲಿ ಡಿವೈಎಸ್ಪಿ ಟಿ.ಬಿ.ರಾಜಣ್ಣ, ಅಧ್ಯಕ್ಷೆ ಶಿಲ್ಪಮುರುಳಿ, ಉಪಾಧ್ಯಕ್ಷೆ ಕವಿತವೀರೇಶ್, ಸ್ಥಾಯಿಸಮಿತಿ ಅಧ್ಯಕ್ಷ ಟಿ.ಮಲ್ಲಿಕಾರ್ಜುನ್, ಸದಸ್ಯರಾದ ಬಿ.ಟಿ.ರಮೇಶ್‌ಗೌಡ, ಕೆ.ವೀರಭದ್ರಪ್ಪ, ಎಂ.ಜೆ.ರಾಘವೇಂದ್ರ, ಸಿ.ಶ್ರೀನಿವಾಸ್, ಶಿವಕುಮಾರ್, ಕವಿತಾಬೋರಯ್ಯ, ಸುಮಭರಮಣ್ಣ, ಗ್ಯಾರಂಟಿ ಸಮಿತಿ ಅಧ್ಯಕ್ಷ ಗದ್ದಿಗೆತಿಪ್ಪೇಸ್ವಾಮಿ, ನಾಮಿನಿ ಸದಸ್ಯರಾದ ನಟರಾಜ್, ವೀರಭದ್ರಿ ಮುಂತಾದವರು ಮಾತನಾಡಿದರು.
