Chitradurga news | nammajana.com | 07-07-2025
ನಮ್ಮಜನ.ಕಾಂ, ಚಿತ್ರದುರ್ಗ: ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದರು ಎಂಬ ಆರೋಪದ ಮೇರೆಗೆ ಕರ್ನಾಟಕ ಫ್ಯಾಮಿಲಿ ಅಸೋಸಿಯೇಷನ್ (ಕೆಎಫ್‌ಎ) ಕ್ಲಬ್(Club) ಅಧ್ಯಕ್ಷ ಎಸ್.ನಾಗರಾಜು ಅವರನ್ನು ಹೊಳಲ್ಕೆರೆ ಪೊಲೀಸರು ಬಂಧಿಸಿದರು. ನ್ಯಾಯಾಲಯದ ಎದುರು ಹಾಜರು ಪಡಿಸಿದ ನಂತರ ಅವರನ್ನು ಜಾಮೀನಿನ ಮೇಲೆ ಶನಿವಾರ ಬಿಡುಗಡೆ ಮಾಡಲಾಯಿತು.

ಇದನ್ನೂ ಓದಿ: ಭದ್ರೆ ನೀರು ಹರಿಸಿ ರೈತರಿಗೆ ಶಕ್ತಿ ತುಂಬಿ
ಕೆಎಫ್‌ಎ ಕ್ಲಬ್ ಚಟುವಟಿಕೆಗಳಿಗೆ ಪೊಲೀಸರು ಕಿರುಕುಳ ನೀಡುತ್ತಿದ್ದಾರೆ ಎಂದು ನಾಗರಾಜ್ ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಆರೋಪಿಸಿದ್ದರು. ಸಂಜೆಯೇ ಪೊಲೀಸರು ಅವರನ್ನು ಬಂಧಿಸಿದ್ದರು.
‘ಪೊಲೀಸರ ವಿರುದ್ಧ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಕಾರಣದಿಂದಲೇ ಪೊಲೀಸರು ನನ್ನನ್ನು ಬಂಧಿಸಿದ್ದರು. ಈ ಹಿಂದೆಯೂ(club) ನಮ್ಮ ವಿರುದ್ಧ 2 ಎಫ್‌ಐಆರ್ ದಾಖಲು ಮಾಡಿದ್ದರು. ಸುಳ್ಳು ಪ್ರಕರಣ ಎಂಬ ಕಾರಣಕ್ಕೆ ಈಗಾಗಲೇ ಹೈಕೋರ್ಟ್ ಅವುಗಳನ್ನು ರದ್ದು ಪಡಿಸಿದೆ.
ಈ ವಿಷಯವನ್ನು ನ್ಯಾಯಾಲಯದ ಗಮನಕ್ಕೆ ತಂದಾಗ ಜಾಮೀನು ಮಂಜೂರು ಮಾಡಿತು’ ಎಂದು ನಾಗರಾಜ್ ತಿಳಿಸಿದ್ದಾರೆ.
ಇದನ್ನೂ ಓದಿ: ನಗರಸಭೆಗೆ ನಾಲ್ಕು ಸ್ಥಾಯಿ ಸಮಿತಿ ಅಧ್ಯಕ್ಷರ ನೇಮಕ
‘ನನ್ನದು ತಪ್ಪಿಲ್ಲದಿದ್ದರೂ ಪೊಲೀಸರು ವಿನಾಕಾರಣ ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ. ಈಗಾಗಲೇ ಎರಡು ಎಫ್‌ಐಆರ್ ರದ್ದಾಗಿದ್ದರೂ ಮತ್ತೆ ಪ್ರಕರಣ ದಾಖಲು ಮಾಡಿದ್ದಕ್ಕೆ ನ್ಯಾಯಾಂಗ ನಿಂದನೆ ಪ್ರಕರಣ ದಾಖಲು ಮಾಡಲಾಗುವುದು. ಕಾನೂನು ಬದ್ಧವಾಗಿ ನಡೆಯುತ್ತಿರುವ ಕ್ರೀಡಾ, ಮನರಂಜನಾ, ಸಾಂಸ್ಕೃತಿಕ ಕ್ಲಬ್(club) ಚಟುವಟಿಕೆಗೆ ತೊಂದರೆ ನೀಡಿದರೆ ಪ್ರತಿಭಟನೆ ನಡೆಸಲಾಗುವುದು’ ಎಂದು ಎಚ್ಚರಿಸಿದ್ದಾರೆ.
