Chitradurga News | Nammajana. Com |23-4-2024
ನಮ್ಮಜನ.ಕಾಂ.ಚಿತ್ರದುರ್ಗ : ಚಿತ್ರದುರ್ಗ ನಗರದ ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ಆಯೋಜಿಸಿದ್ದ ನ್ಯಾಯ ಸಂಕಲ್ಪ ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಅಭ್ಯರ್ಥಿ ಅವರನ್ನು ಹೆಚ್ಚಿನ ಬಹುಮತದಿಂದ ಗೆಲ್ಲಿಸಬೇಕು ಎಂದು ಕಳಕಳಿಯಿಂದ ಮನವಿ ಮಾಡುತ್ತೇನೆ ಎಂದರು.
ಕೇಂದ್ರದಲ್ಲಿ ಕಳೆದ ಹತ್ತು ವರ್ಷಗಳಿಂದ ಅಧಿಕಾರದಲ್ಲಿದೆ. ನರೇಂದ್ರ ಮೋದಿ ಈ ದೇಶದ ಪ್ರಧಾನಿಯಾಗಿದ್ದಾರೆ. ಹತ್ತು ವರ್ಷದಲ್ಲಿ ಬಡವರು, ಹಿಂದುಳಿದವರು, ಅಲ್ಪಸಂಖ್ಯಾತರು, ಮಹಿಳೆಯರು, ರೈತರ ಪರವಾಗಿ ಏನು ಮಾಡಲಿಲ್ಲ. ಅವರಿಗೆ ಸಾಮಾಜಿಕ , ಆರ್ಥಿಕ ಶಕ್ತಿ ತುಂಬುವಲ್ಲಿ ಸಂಪೂರ್ಣ ವಿಫಲವಾಗಿದ್ದಾರೆ.
2014 ರಲ್ಲಿ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ದೇಶದ ಜನರಿಗೆ ಭರವಸೆ ಹುಟ್ಟಿಸಿದ್ದರು. ಆದರೆ ಹತ್ತು ವರ್ಷವಾದರೂ ಯಾವುದೇ ಭರವಸೆಯನ್ನು ಹಿಡೇರಿಸಿಲ್ಲ ಎಂದು ಕುಟುಕಿದರು.
ಮೋದಿ ಶಾ ಅವರಿಗೆ ಕರ್ನಾಟಕ ನೆನಪು ಆಗುವುದು ಚುನಾವಣೆಯಲ್ಲಿ ಮಾತ್ರ
ಕಳೆದ ವಿಧಾನ ಸಭೆ ಚುನಾವಣಾ ಸಮಯದಲ್ಲಿ ಪ್ರಚಾರಕ್ಕೆ ಬಂದಿದ್ದರು. ಬರಗಾಲ, ನೆರೆ ಬಂದಾಗ ಕರ್ನಾಟಕಕ್ಕೆ ಮೋದಿ ಮತ್ತು ಶಾ ಎಲ್ಲೂ ಸಹ ಬರಲಿಲ್ಲ ಎಂಬುದು ಜನರು ನೆನಪಿನಲಿಟ್ಟುಕೊಳ್ಳಬೇಕು.
ಕರ್ನಾಟಕದಲ್ಲಿ ನರೇಂದ್ರ ಮೋದಿ ಅವರ ಅಲೆ ಇಲ್ಲ.ಕರ್ನಾಟಕದಲ್ಲಿ ಗ್ಯಾರೆಂಟಿಗಳ ಅಲೆ ಇದೆ.
ನಾನು 2013 ರಿಂದ 2018 ರವರಗೆ ಮುಖ್ಯಮಂತ್ರಿ ಆದಾಗ 165 ಭರವಸೆ ನೀಡಿದ್ದೆ ಇದರಲ್ಲಿ 155 ಭರವಸೆ ಹಿಡೇರಿಸಿದ್ದೇನೆ. ಜೊತೆಗೆ 30 ಹೊಸ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ ಇದು ನಮ್ಮ ಬದ್ದತೆಯಾಗಿದೆ.
ಬಿಜೆಪಿ ಸರ್ಕಾರ ತಮ್ಮ ಪ್ರಣಾಳಿಕೆಯಲ್ಲಿ 600 ಭರವಸೆ ನೀಡಿದ್ದು ಅದರಲ್ಲಿ ಕೇವಲ 10% ಭರವಸೆ ಜಾರಿಗೆ ತರಲು ಸಾಧ್ಯವಾಗಿಲ್ಲ. ಬಿಜೆಪಿ ಮತ್ತು ಕಾಂಗ್ರೆಸ್ ಏನು ಮಾಡಿದೆ ಎಂಬುದನ್ನು ನೀವು ನೋಡಿಕೊಳ್ಳಬಹುದು ಎಂದು
10 ವರ್ಷಗಳಾದರೂ ಕಪ್ಪು ಹಣ ಬರಲಿಲ್ಲ 15 ಲಕ್ಷ ಹಾಕಲಿಲ್ಲ
ಬಿಜೆಪಿ ಸರ್ಕಾರ ಬಂದು 100 ದಿನಗಳಲ್ಲಿ ಕಪ್ಪು ಹಹ ತರುತ್ತೇವೆ ಎಂದು ಹೇಳಿದ್ದರು. ಪ್ರತಿ ಅಕೌಂಟ್ ಗೆ 15 ಲಕ್ಷ ಹಣ ಜಮಾ ಮಾಡುತ್ತೇವೆ. ಯುವ ಸಮೂಹಕ್ಕೆ ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದಿದ್ದರು. ಅದರಂತೆ 10 ವರ್ಷದಲ್ಲಿ 20 ಕೋಟಿ ಉದ್ಯೋಗ ಸೃಷ್ಟಿಸಬೇಕಿತ್ತು .ಆದರೆ 20 ಲಕ್ಷ ಉದ್ಯೋಗ ಸೃಷ್ಟಿ ಮಾಡಿಲ್ಲ. ಉದ್ಯೋಗ ಕೇಳಿದ ಯುವಕರಿಗೆ ಪಾಕೋಡ ಮಾರಟ ಮಾಡಿ ಎಂದು ಹೇಳಿದ ಏಕೈಕ ಬೇಜವಬ್ದಾರಿ ಪ್ರಧಾನಿ ನರೇಂದ್ರ ಮೋದಿ ಆಗಿದ್ದಾರೆ.
ರೈತರ ಹಣ ದುಪ್ಪಟ್ಟು ಮಾಡಿದ್ದು ಎಲ್ಲಿ ಎಂದು ಉತ್ತರಿಸಲಿ
ರೈತರ ಆರ್ಥಿಕತೆ ಸುಧಾಕರಣೆ ಮಾಡಿ ದುಡಿಮೆಯನ್ನು ದುಪ್ಪಟ್ಟು ಮಾಡುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ ರೈತರ ಖರೀದಿಸುವ ಬೀಜ, ಗೊಬ್ಬರ ಎಲ್ಲಾ ದುಪ್ಪಟ್ಟು ಮಾಡಿದ್ದು ಮೋದಿ ಸಾಧನೆ ಎಂದು ಗೇಲಿ ಮಾಡಿದರು. ಮೋದಿ ಅವರಿಗೆ ರೈತರ ಸಾಲ ಮನ್ನಾ ಮಾಡಲು ಆಗಲಿಲ್ಲ. ಆದರೆ ಕೈಗಾರಿಕೆ ಉದ್ಯಮಿಗಳ 16 ಸಾವಿರ ಲಕ್ಷ ಕೋಟಿ ಶ್ರೀಮಂತ ಸಾಲ ಮನ್ನಾ ಮಾಡಿದ್ದಾರೆ.
ಕೋವಿಡ್ ನೆಪದಲ್ಲಿ ಬಂಡವಾಳ ಶಾಹಿಗಳ ಟ್ಯಾಕ್ಸ್ ಇಳಿಕೆ
ಕಾರ್ಪೋರೆಟ್ ಡ್ಯಾಕ್ಸ್ 30 % ಟ್ಯಾಕ್ಸ್ ಇತ್ತು. ಕೋವಿಡ್ ನೆಪದಲ್ಲಿ 25 % ಟ್ಯಾಕ್ಸ್ ನ್ನು ಬಂಡವಾಳ ಶಾಹಿಗಳ ಟ್ಯಾಕ್ಸ್ ಕಡಿಮೆ ಮಾಡಿದ್ದು ಮೋದಿ ಸಾಧನೆಯಾಗಿದೆ.
ಜನಸಾಮಾನ್ಯರ ಅಗತ್ಯ ವಸ್ತುಗಳ ಬೆಲೆ ಇಳಿಸುತ್ತೇನೆ ಎಂದು ಅಧಿಕಾರಕ್ಕೆ ಬಂದಿದ್ದು 48 ರೂ ಡಿಸೇಲ್ ಬೆಲೆ 95 ಆಗಿದೆ. ಪೆಟ್ರೋಲ್ 70 ರೂ ಇತ್ತು, ಈಗ 105ರೂ ಆಗಿದೆ.ಗ್ಯಾಸ್ ಬೆಲೆ 415 ಇತ್ತು ಈಗ 950 ರೂ ಆಗಿದೆ. ಡಾಲರ್ ಬೆಲೆ ಕಾಂಗ್ರೆಸ್ ಸರ್ಕಾರದಲ್ಲಿ 58 ಇದ್ದಿದ್ದು 83 ಆಗಿದೆ.
ಕೇಂದ್ರ ಸರ್ಕಾರ ರಾಜ್ಯಕ್ಕೆ ಕೊಟ್ಟಿದ್ದು ಖಾಲಿ ಚಂಬೂ
ನರೇಂದ್ರ ಮೋದಿ ಅವರು ಕರ್ನಾಟಕಕ್ಕೆ ಕೊಟ್ಟಿದ್ದು ಖಾಲಿ ಚಾಂಬೂ ಆಗಿದೆ. ದೇವೇಗೌಡರು ಸೋಲುವ ಭಯದಿಂದ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದಾರೆ. ಆದರೆ ಈ ಮೈತ್ರಿ ಅಪವಿತ್ರ ಮೈತ್ರಿ ಆಗಿದೆ. ಮುಂದಿನ ಬಾರಿ ನರೇಂದ್ರ ಪ್ರಧಾನಿ ಆದರೆ ದೇಶ ಬಿಟ್ಟು ಹೋಗುತ್ತೇನೆ ಎಂದಿದ್ದರು ಈಗ ಫ್ರೆಂಡ್ಸ್ ಆಗಿದ್ದಾರೆ.
ರಾಜ್ಯಕ್ಕೆ ಐದು ಗ್ಯಾರೆಂಟಿ ಮೂಲಕ ಬಡವರ ಹೊರೆ ಇಳಿಕೆ
ಬಡವರಿಗೋಸ್ಕರ ನಾವು ಐದು ಗ್ಯಾರೆಂಟಿ ಜಾರಿಗೆ ತಂದಿದ್ದೇವೆ. ಮೋದಿ ಅವರು ಕಾಂಗ್ರೆಸ್ ಸರ್ಕಾರ ಗ್ಯಾರೆಂಟಿ ಜಾರಿ ಮಾಡಲ್ಲ ಎಂದಿದ್ದರು. ಒಂದು ವೇಳೆ ಜಾರಿ ಮಾಡದರೆ ಕರ್ನಾಟಕ ಸರ್ಕಾರ ಆರ್ಥಿಕವಾಗಿ ದಿವಾಳಿ ಆಗುತ್ತದೆ ಎಂದಿದ್ದರು ಈಗ ಜಾರಿ ಮಾಡಿ ದಿವಾಳಿ ಆಗಿದೆಯಾ ಎಂದು ಪ್ರಶ್ನಿಸಿದರು.
ಗ್ಯಾರೆಂಟಿ ನಿಲ್ಲಿಸಲು ನಾವು ಬಿಜೆಪಿಯಲ್ಲ
ಕರ್ನಾಟಕ ಬಿಜೆಪಿ-ಜೆಡಿಎಸ್ ನಾಯಕರು ಚುನಾವಣೆ ನಂತರ ಗ್ಯಾರೆಂಟಿ ಯೋಜನೆ ನಿಲ್ಲಿಸುತ್ತೇನೆ ಎಂದು ಚುನಾವಣೆಯಲ್ಲಿ ಪ್ರಚಾರ ಮಾಡುತ್ತಿದ್ದು ನಿಲ್ಲಿಸಲು ನಾವು ಬಿಜೆಪಿ ಅಲ್ಲ ಕಾಂಗ್ರೆಸ್ ಎಂದು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ರಾಜ್ಯದಿಂದ ಆಯ್ಕೆಯಾದ 25 ಸಂಸದರು ಬಾಯಿ ಬಿಡಲಿಲ್ಲ
ಕೇಂದ್ರದಲ್ಲು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಐದು ನ್ಯಾಯ ಗ್ಯಾರೆಂಟಿ ಯೋಜನೆ ಜಾರಿ ಮಾಡಲಾಗುತ್ತದೆ. ರಾಜ್ಯದಿಂದ ಆಯ್ಕೆಯಾದ 25 ಸಂಸದರು ಕೇಂದ್ರದಲ್ಲಿ ಬಾಯಿ ಬಿಟ್ಟಿಲ್ಲ.
ಕೇಂದ್ರದಿಂದ ರಾಜ್ಯಕ್ಕೆ ವಂಚನೆ
ಕರ್ನಾಟಕ ಸರ್ಕಾರಕ್ಕೆ ತೆರಿಗೆ ವಂಚನೆ, 15 ಹಣಕಾಸು ಮೋಸ, ಅಪ್ಪರ್ ಭದ್ರಾ ಯೋಜನೆಗೆ 5300 ಕೋಟಿ ನೀಡುತ್ತೇವೆ ಎಂದು ಒಂದು ರೂಪಾಯಿ ಕೊಡಲಿಲ್ಲ. ಕೇಂದ್ರ ಹಣ ಕೊಡದಿದ್ದರು ಭದ್ರಾ ಯೋಜನೆಯನ್ನು ನಾವು ಮುಗಿಸುತ್ತೇವೆ. ಬರಗಾಲಕ್ಕೆ ಕೇಂದ್ರ ಒಂದು ಬಿಡಿಗಾಸು ಬಿಡುಗಡೆ ಮಾಡಿಲ್ಲ. ಸುಪ್ರೀಂ ಕೋರ್ಟ್ ಹೋಗಿದ್ದರಿಂದ ಕೋರ್ಟ್ ಸೂಚನೆಯಂತೆ ಒಂದು ವಾರದಲ್ಲಿ ಹಣ ಬಿಡುಗಡೆ ಆಗುವ ಸಾಧ್ಯತೆ ಇದೆ.