Chitradurga news | nammajana.com | 29-8-2024
ನಮ್ಮಜನ.ಕಾಂ, ಚಳ್ಳಕೆರೆ: ಚಳ್ಳಕೆರೆ ನಗರಸಭೆ ಚುನಾವಣೆಯಲ್ಲಿ ನಗರಸಭೆ ಅಧ್ಯಕ್ಷೆಯಾಗಿ ಕಾಂಗ್ರೆಸ್‌ನ ನಗರದ ೩೧ನೇ ವಾರ್ಡ್ ಜೈ ತುಂಬಿ ಮಾಲೀಕ್‌ಸಾಬ್ ಚುನಾವಣೆ ಮೂಲಕ (Congress) ಆಯ್ಕೆಯಾದರೆ, ಉಪಾಧ್ಯಕ್ಷೆಯಾಗಿ ಕಾಂಗ್ರೆಸ್ ಪಕ್ಷದ ೮ನೇ ವಾರ್ಡ್ ಸದಸ್ಯೆ ಓ.ಸುಜಾತಪಾಲಯ್ಯ ಅವಿರೋಧವಾಗಿ ಆಯ್ಕೆಯಾದರು.
ನಗರಸಭೆಯ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಚುನಾವಣೆಯನ್ನು ಉಪವಿಭಾಗಾಧಿಕಾರಿ ಎಂ.ಕಾರ್ತಿಕ್ (Congress) ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.

ಬಿಜೆಪಿ ಜೆಡಿಎಸ್ ಮೈಕೂಟದ ಅಭ್ಯರ್ಥಿಯಾಗಿ ೧ನೇ ವಾರ್ಡ್ನ ಬಿಜೆಪಿ ಸದಸ್ಯೆ ಸಾಕಮ್ಮ ನಾಮಪತ್ರ ಸಲ್ಲಿಸಿದ್ದು ೧೧ ಮತಗಳನ್ನು ಪಡೆದು ಪರಾಭವಗೊಂಡರೆ ಗೆದ್ದ ಅಭ್ಯರ್ಥಿ ಜೈತುಂಬಿ ೧೮ ಮತಗಳನ್ನು ಪಡೆದರು.
ಕಾಂಗ್ರೆಸ್ ಸದಸ್ಯೆ ಎಂ.ಸಾವಿತ್ರಮ್ಮ ಚುನಾವಣೆ ಪ್ರಕ್ರಿಯೆಯಿಂದ ದೂರ ಉಳಿಸಿದ್ದು, ನಾಲ್ಕನೇ ವಾರ್ಡ್ ಸದಸ್ಯ ಕೆ.ಸಿ.ನಾಗರಾಜು ನೀಡಿದ ರಾಜೀನಾಮೆ ಅಂಗೀಕೃತವಾಗಿದ್ದು, ಒಟ್ಟು ೨೯ ಸದಸ್ಯರು ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
ಚುನಾವಣಾ ಪ್ರಕ್ರಿಯೆ ಮುಗಿದ ನಂತರ ನಗರಸಭೆಗೆ ಆಗಮಿಸಿದ ಶಾಸಕ ಟಿ.ರಘುಮೂರ್ತಿ, ನೂತನ ಅಧ್ಯಕ್ಷೆ, ಉಪಾಧ್ಯಕ್ಷೆಯನ್ನು ಅಭಿನಂದಿಸಿದರಲ್ಲದೆ, ಮತದಾನದ ನೀಡಿದ ಪಕ್ಷದ ಎಲ್ಲಾ ಸದಸ್ಯರಿಗೂ ಅಭಿನಂದನೆ ತಿಳಿಸಿ ನಗರದ ಸರ್ವತೋಮುಖ (Congress) ಅಭಿವೃದ್ದಿಗೆ ಎಲ್ಲಾ ಚುನಾಯಿತ ಸದಸ್ಯರು ಕೈಜೋಡಿಸುವಂತೆ ಮನವಿ ಮಾಡಿದರು.
೨೦೧೮ರಿಂದ ಇಲ್ಲಿಯವರೆಗೂ ಸತತವಾಗಿ ಕಾಂಗ್ರೆಸ್ ಪಕ್ಷ ನಗರಸಭೆಯ ಆಡಳಿತದ ಚುಕ್ಕಾಣಿಯನ್ನು ಹಿಡಿದು ನಾಗರೀಕರಿಗೆ ಉತ್ತಮ ಆಡಳಿತ ನೀಡುತ್ತಿದೆ ಎಂದರು.
ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯೂ ಸಹ ಚುನಾವಣೆಗೆ ಸ್ಪರ್ಧಿಸಿದರೂ ಅಭಿವೃದ್ದಿ ವಿಚಾರದಲ್ಲಿ ಎಲ್ಲರೂ ಸಹಕಾರ ನೀಡುತ್ತಾರೆ ಎಂದರು.
ಪ್ರಸ್ತುತ ಅಧ್ಯಕ್ಷ ಸ್ಥಾನ ಬಿಸಿಎಂ(ಬಿ) ಮಹಿಳೆಗೆ ಮೀಸಲಿದ್ದು, ಪಕ್ಷದ ಏಕೈಕ ಬಿಸಿಎಂ(ಬಿ), ಮಹಿಳಾ ಅಭ್ಯರ್ಥಿ ಎಂ.ಸಾವಿತ್ರಮ್ಮ ಆದಾಯ ಮೀರಿದ ಹಿನ್ನೆಲೆಯಲ್ಲಿ ಅವರಿಗೆ ಅಗತ್ಯ ದಾಖಲಾತಿ ನೀಡದ ಹಿನ್ನೆಲೆಯಲ್ಲಿ ಬಿಸಿಎಂ(ಎ) ಮಹಿಳೆಗೆ ಅವಕಾಶ (Congress) ಮಾಡಿದ್ದು, ಇದರ ಸದುಪಯೋಗವನ್ನು ಪಕ್ಷದ ಪಡೆದುಕೊಂಡಿದೆ ಎಂದರು.
ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರೊಂದಿಗೆ ಚರ್ಚಿಸಿ ಅಧ್ಯಕ್ಷ, ಉಪಾಧ್ಯಕ್ಷ ಯಾರಾಗಬೇಕೆಂಬ ಬಗ್ಗೆ ಸೌಹಾರ್ಧಿತವಾಗಿ ಚರ್ಚಿಸಲಾಗಿದೆ. ಸದ್ಯದ ಸ್ಥಿತಿಯಲ್ಲಿ (Congress) ಯಾರಲ್ಲೂ ಅಸಮಧಾನವಿಲ್ಲ ಎಂದರು.
ನೂತನ ಅಧ್ಯಕ್ಷೆ ಜೈತುಂಬಿ ಮಾತನಾಡಿ, ಶಾಸಕ ಟಿ.ರಘುಮೂರ್ತಿಯವರ ಮಾರ್ಗದರ್ಶನದಲ್ಲಿ ಅಧ್ಯಕ್ಷ ಸ್ಥಾನದ ಚುನಾವಣೆಗೆ ನಡೆದಿದ್ದು, ಶಾಸಕರು ನನ್ನ ಮೇಲೆ ವಿಶ್ವಾಸವಿಟ್ಟು ಅಧ್ಯಕ್ಷರನ್ನಾಗಿ ಮಾಡಿದ್ದಾರೆ.
ಕಳೆದ ಸುಮಾರು ಏಳು ವರ್ಷಗಳ ಅವಧಿಯಲ್ಲಿ ನಗರಸಭೆಯಲ್ಲಿ ಹಲವಾರು ರೀತಿಯ ಅಭಿವೃದ್ದಿ ಕಾಮಗಾರಿಗಳನ್ನು ಶಾಸಕ ನೇತೃತ್ವದಲ್ಲಿ ನಡೆಸಲಾಗಿದೆ. ಮುಂದಿನ ದಿನದಲ್ಲೂ ಎಲ್ಲರ ವಿಶ್ವಾಸದೊಂಧಿಗೆ ನಗರಸಭೆ ಅಭಿವೃದ್ದಿಗೆ ಶ್ರಮಿಸುವೆ ಎಂದರು.
ಉಪಾಧ್ಯಕ್ಷೆಯಾಗಿ ಆಯ್ಕೆಯಾದ ಓ.ಸುಜಾತಪಾಲಯ್ಯ ಮಾತನಾಡಿ, ಮೊದಲ ಬಾರಿಗೆ ನನಗೆ ನಗರಸಭೆಯಲ್ಲಿ ಉಪಾಧ್ಯಕ್ಷ ಸ್ಥಾನ ದೊರಕಿರುವುದು ಸಂತಸ ತಂದಿದೆ. ನನ್ನ ೮ನೇ ವಾರ್ಡ್ನ ಎಲ್ಲಾ ಸಾರ್ವಜನಿಕರನ್ನು ಅಭಿನಂದಿಸುವೆ.
ನಗರದ ಅಭಿವೃದ್ದಿ ಹಾಗೂ ಸರ್ಕಾರದ ಯೋಜನೆಗಳನ್ನು ಜಾರಿಗೆ ತಂದುಸಾರ್ವಜನಿಕರಿಗೆ ಹೆಚ್ಚಿನ ಸೌಲಭ್ಯವನ್ನು ಕೊಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವೆ. ಶಾಸಕ ಟಿ.ರಘುಮೂರ್ತಿ ಮತ್ತು ಪಕ್ಷದ ಎಲ್ಲಾ ಮುಖಂಡರು ಅಭಿನಂದಿಸುವೆ ಎಂದರು.
ಇದನ್ನೂ ಓದಿ: Accident: ಲಾರಿ-ಕಾರು ಅಪಘಾತ | ಇಬ್ಬರು ಸಾವು
ತಹಶೀಲ್ದಾರ್ ರೇಹಾನ್‌ಪಾಷ, ಪೌರಾಯುಕ್ತ ಜಗರೆಡ್ಡಿ, ನಗರಸಭಾ ಸದಸ್ಯರಾದ ವೈ.ಪ್ರಕಾಶ್, ಆರ್.ರುದ್ರನಾಯಕ, ಟಿ.ಮಲ್ಲಿಕಾರ್ಜುನ್, ಕವಿತಾಬೋರಯ್ಯ, ಟಿ.ಶಿವಕುಮಾರ್, ಪ್ರಮೋದ್, ಸುಮಾ, ಎಸ್.ಜಯಣ್ಣ, ಸಿ.ಎಂ.ವಿಶುಕುಮಾರ್, ಕವಿತಾನಾಯಕಿ, ಹೊಯ್ಸಳಗೋವಿಂದ, ಸಿ.ಬಿ.ಜಯಲಕ್ಷಿö್ಮ, ಎಂ.ನಾಗಮಣಿ, ಸುಮಕ್ಕ, ಎಂ.ಜೆ.ರಾಘವೇಂದ್ರ, ಕವಿತಾ, ನಿರ್ಮಲ, ತಿಪ್ಪಮ್ಮ, ವಿರೂಪಾಕ್ಷಿ, ಆರ್.ಮಂಜುಳಾ, ಚಳ್ಳಕೆರೆಯಪ್ಪ, ಸಿ.ಶ್ರೀನಿವಾಸ್, ಬಿ.ಟಿ.ರಮೇಶ್‌ಗೌಡ, ಕೆ.ವೀರಭದ್ರಯ್ಯ, ಪಾಲಮ್ಮ, ಪ್ರಶಾಂತ್‌ಕುಮಾರ್, ನಾಮಿನಿ ಸದಸ್ಯರಾದ ಕೆ.ಎನ್.ನಟರಾಜ್, ಬಡಗಿಪಾಪಣ್ಣ, ಆರ್.ವೀರಭದ್ರಪ್ಪ, ಮಹಮ್ಮದ್‌ಅನ್ವರ್, ನೇತಾಜಿ ಪ್ರಸನ್ನ, ಪಿಎಸ್‌ಐ ಶಿವರಾಜ್ ಮುಂತಾದವರು ಉಪಸ್ಥಿತರಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252