Chitradurga news|nammajana.com|30-6-2024
ನಮ್ಮಜನ.ಕಾಂ, ವಿಶೇಷ: ಚಿತ್ರದುರ್ಗದ ಪಶ್ಚಿಮಭಾಗಕ್ಕೆ (Coronation of Madakarinayaka) ಚಿತ್ರದುರ್ಗದ ಸಪ್ತಶಿಖರಗಳ ಬೆಟ್ಟ ಸಾಲಿಗೆ, ಹಸಿರು ರಾಕವಚವನ್ನು ಕೊಡಿಸಿದಂತೆ ಹಬ್ಬದೆ ಗಾಧಿಮಲೆ ಗಿರಿಮಾಲೆ, ಅದರ ಬೆನ್ನಬದಿಗೆ, ಗಾಧಿಮಲೆ ಸಾಲಿನ ಮತ್ತೊಂದು ಸೀನಾದ ಹೊಸದುರ್ಗದ ಬೆಟ್ಟಗಳ ಪಂಕ್ತಿ. ಆ ಎರಡು ಬೆಟ್ಟಗಳ ಸಾಲಿನ ನಡುವೆ, ಸದಾ ಹಸಿರುಮುರಿನ ಹೆಸರನ್ನು ಸಾರ್ಥಕಪಡಿಸುವ ಪಚ್ಚೆಯ ಕಣಿವೆ. ಆ ಪಚ್ಚೆಕಣಿವೆಯ ಗೋಪುರ ಪದಕದಂತಿದೆ ಜಾನಕಲ್ಲು ಗ್ರಾಮ. ಆ ಗ್ರಾಮದ ಮಧ್ಯಭಾಗದಲ್ಲಿ ಚಿತ್ರದುರ್ಗದತ್ತ ಬರುವ ಶತ್ರುಗಳು ಸೈನ್ಯವನ್ನು ಎದುರಿಸಲು, ಎದೆಸೆಟಿಸಿ ನಿಂತ ಭಟನಂತಿದೆ ಜಾನಕಲ್ಲು ಗುಡ್ಡ. ಗುಡ್ಡದ ಎಡಬಲಭಾಗಗಳಲ್ಲೂ ಕಣ್ಣಿಟ್ಟಿ ಹೋಗುವವರೆಗೂ ಅಡಿಕೆ ತೆಂಗಿನ ತೋಟಗಳು, ಮಾವು, ಹುಣಿಸೆಯ ಮರದ ತೋವುಗಳು, ಬತ್ತದ ಗದ್ದೆಯ ಹಾಸು, ಮಲೆನಾಡ ಸೆರಗಿನ, ಹಸಿರಿನ ವಿವಿಧ ಛಾಯೆಗಳ ಲೀಲಾವಿಲಾಸವನ್ನು ನೋಡುತ್ತಾ ನಿಂತ ಮೈಯಲ್ಲಿ ಹಸಿರು ಹರ್ಷವಾಗಿ ಮೈತುಂಬುತ್ತದೆ.
ಸುತ್ತಿ ಸುತ್ತಿ ಎಷ್ಟು ಸಲ ನೋಡಿದರೂ, ಇನ್ನಷ್ಟು ನೋಡಬೇಕೆನ್ನಿಸುವ ಆ ಹಸಿರಿನ ಅಮಲೇರಿದ ಕಣ್ಣುಗಳಿಂದ ನೋಡುತ್ತಾ ನಿಂತಿದ್ದ ಮದಕರಿನಾಯಕ ಗರಡಿಯ ಮನೆಯಲ್ಲಿ (Coronation of Madakarinayaka) ಚಳಿಯಲ್ಲೂ ಬೆವರುವಷ್ಟು ಸಾಮುಮಾಡಿ, ಗರಡಿಮನೆಯ ಮೇಲಿನ ಬಾವುಟದ ಬತೇರಿಯನ್ನೇರಿ ನಿಂತು, ಗರಡಿಮನೆಯ ಮಟ್ಟಿಯ ಕೆಂಪುಧೂಳು ಕವಿದ ಮೈಗೆ ಇರುಳು ಬಂದುಹೋದ ಜಿನಗುಮಳೆಯಲ್ಲಿ ತೊಯ್ದು ತಣ್ಣಗೆ ಬೀಸುವ ತಂಗಾಳಿಯೂ ಹಿತವಾಗಿ ಸಾಮು ಮಾಡಿದ ಎದೆ, ತೋಳು, ತೊಡೆಗಳನ್ನು ನೀವಿಕೊಳ್ಳುತ್ತಾ ಮೈಮರೆತು ನಿಂತಿದ್ದ ಮದಕರಿಗೆ ಇಹಲೋಕ ಪ್ರಜ್ಞೆ ಬಂದದ್ದು. ಚಿತ್ರದುರ್ಗದತ್ತಣಿಂದ ವೇಗವಾಗಿ ಬರುತ್ತಿದ್ದ ಹತ್ತಿಪ್ಪತ್ತು ಮಂದಿ ಅಶ್ವಾರೋಹಿಗಳನ್ನು ಕಂಡಾಗಲೇ.
ಜಾನಕಲ್ಲೂ ಚಿತ್ರದುರ್ಗಸೀಮೆಯ ಆಯಕಟ್ಟಿನ ಗಡಿಕೋಟೆ. ದುರ್ಗದಿಂದ ಸೇನೆಯ ಜನ, ಅಲ್ಲಿಗಾಗಲಿ, ಅದರಾಚೆಗಿದ್ದ ಹೊಸದುರ್ಗದ ಕೋಟೆಗಾಗಲಿ ಹೋಗಿ ಬರುವುದು ಅಪರೂಪದ ದೃಶ್ಯವೇನೂ ಅಲ್ಲ. ಎಷ್ಟೋ ಬಾರಿ, ಬರೀ ಹತ್ತಿಪ್ಪತ್ತೇನು, ನೂರಾರು ಕುದುರೆಗಳ ಸೇನೆ ಬಂದದ್ದನ್ನು ಯುದ್ಧಕಾರ್ಯವಿದ್ದಾಗ, ಅಂಥ ಹೊತ್ತಿನಲ್ಲಿ ಬರೀ ಸೇನೆ ಬಂದು ಹೋಗುವುದೇನು, ಜಾನಕಲ್ಲು ಕೋಟೆಯೂ ಬಗೆಬಗೆಯ ಯುದ್ಧಚಟುವಟಿಕೆಗಳ ಜೇನುಗೂಡಾಗುತ್ತಿತ್ತು.
ಆ ಸಮಯದಲ್ಲಿ ಮೂರು ದಿನ ಮುಂಚೆಯೇ ದುರ್ಗದತ್ತಣಿಂದ ಯುದ್ಧದ ಸುದ್ದಿಯ ಗಾಳಿ ಬೀಸುತ್ತಿತ್ತು. ಈಗ ಅಂಥ (Coronation of Madakari) ಸಿದ್ದತೆ ವಾರ್ತೆಯೇನೂ ಬಂದಿರಲಿಲ್ಲ. ಆದರೂ ಇಷ್ಟು ಹೊತ್ತಿಗೆ ಮುಂಚೆ ಈ ಸವಾರರೇಕೆ ಬರುತ್ತಿದ್ದಾರೆ ಎನಿಸಿ, ಹುಡುಗುತನದ ಉತ್ಸಾಹದಲ್ಲಿ ಹತ್ತಿರದಲ್ಲಿದ್ದ ಬತೇರಿಯ ಕಾವಲುಸೈನಿಕನಿಗೆ “ಜೋಗನಾಯಕ…ದುರ್ಗದ ಕಡೆಯಿಂದ ಕುದುರೆಗಳು ಬರುತ್ತಿವೆ. ಅಪ್ಪಯ್ಯನಿಗೆ ಸುದ್ದಿ ಹೇಳು”ಎಂದು ಕೂಗಿ ಹೇಳಿ, ಕಾಲಕಳೆದಂತೆ ಹತ್ತಿರವಾಗುತ್ತಿದ್ದ ಅಶ್ವಾರೋಹಿಗಳನ್ನು ಕುತೂಹಲದಿಂದ ನೋಡುತ್ತಾ ನಿಂತಿದ್ದ, ಮದಕರಿನಾಯಕ.
ದೇವತೆಗಳ ಹಾರೈಕೆಯೇ ಮಂಗಳನಿನಾದವಾಗಿ ಹೊರಹೊಮ್ಮಿದಂತೆ, ಹತ್ತಾರು ಗುಡಿಗಳಿಂದ ಗಂಟೆ, ಜಾಗಟೆ, ಶಂಖಗಳ ನಾದ. ದುರ್ಗದ ಗುಹೆಗಹ್ವರಗಳಿಂದ ಮಾರ್ದನಿಸಿದ ದಿನವಾಗಿದೆ.
ಮದಕರಿನಾಯಕ ಪಟ್ಟಾಭಿಷೇಕ ದಿನ ಹೇಗಿತ್ತು ಸಿದ್ದತೆ (Coronation of Madakarinayaka)
ಶಕವರ್ಷ ೧೬೭೬ನೇ ಭಾವಸಂವತ್ಸರದ ಆಷಾಢ ಶುದ್ಧ ದ್ವಾದಶಿಯ ದಿನ- ಸಂಪಿಗೆ ಸಿದ್ದೇಶ್ವರನ ದೇವಾಲಯದ ಮುಂದಿನ ಪಟ್ಟಾಭಿಷೇಕಾಂಗಣದಲ್ಲಿ, ಮಣಿಖಚಿತ ದಿವ್ಯ ಹೇಮಸಿಂಹಾಸನದ ಮೇಲೆ, ಪುರೋಹಿತರು ನಿಷ್ಕರ್ಷಿಸಿದ ಶುಭಮುಹೂರ್ತದಲ್ಲಿ, ಹೊನ್ನುಡುಗೆಯುಟ್ಟು, ರತ್ನಕಿರೀಟ ತೊಟ್ಟು, ಬಾಲರವಿಯಂತೆ ಬೆಳಗುತ್ತಾ, ಸಿದ್ದರು ಅನುಗ್ರಹಿಸಿದ ದೆಸೆಗಟ್ಟಿನ ಧೂಳಿತ. ಉತ್ಸವಾಂಬೆಯ ಭಂಡಾರವನ್ನು ಲಲಾಟದಲ್ಲಿ ಧರಿಸಿ, ಕೈಯಂಬು ಹಿಡಿದು, ವಿಪತ್ರ ಸ್ತೋಮ ಗಂಭೀರ ಧ್ವನಿಯಲ್ಲಿ ರಾಜ್ಯಭಿಷೇಕದ ಮಂತ್ರೋಚ್ಚಾರಣೆ ಮಾಡುತ್ತಿರಲು, ದುರ್ಗದ
ಅರಸು ಪೀಠಕ್ಕೆ ರಕ್ಷೆಯೆಂಬಂತೆ ರಾಜಗುರುಗಳಾದ ಶ್ರೀ ಮುರುಗೀಸ್ವಾಮಿಗಳು, ಕೂಡಲೀ ಶೃಂಗೇರಿಯ ಶ್ರೀ ಶಾರದಾಪೀಠದ ಶ್ರೀಗಳು ರಜತಪೀಠದಲ್ಲಿ ಮಂಡಿಸಿರಲು, ಮದಕರಿನಾಯಕರು ಪಟ್ಟಾಭಿಷಿಕ್ತ ರಾದರು.
ವಿಪ್ರೋತ್ತಮರ ವೇದಾಶೀರ್ವಾದದ ಧ್ವನಿಗಿಂತ ಹತ್ತುಪಟ್ಟು ಮಿಗಿಲಾಗಿ ಉಚ್ಚಸ್ವರದಿಂದ ಜಯಘೋಷ ಕೂಗಿದ ಜನಸ್ತೋಮ ಹೊಸ ಅರಸರಿಗೆ ಜನತಾಶೀರ್ವಾದ ನೀಡಿತು.
ರಾಜ್ಯದ ಪ್ರಧಾನಿಗಳು, ದಳವಾಯಿಗಳು ಪೇಟೆ-ಪಟ್ಟಣಶೆಟ್ಟರು.(Coronation of Madakarinayaka) ಅರಸುಮಿತ್ರರು ತಮ್ಮ ಶಕ್ತಾನುಸಾರ ಪಟ್ಟಗಾಣಿಕೆ ಕೊಟ್ಟು, ಹೂ-ತಳಿರಿನ ಹಂದರವಿದ್ದ ರಾಜಾಂಗಣವನ್ನು ಹೊನ್ನಿನ ವಜ್ರ-ವೈಡೂರ್ಯಗಳ ಪ್ರದರ್ಶನಶಾಲೆಯನ್ನಾಗಿ ಮಾಡಿದನಂತರ ದೇವತಾಪ್ರಸಾದ, ಗುರುಗಳ ಆಶೀರ್ವಾದ, ಜಡಶಿಲೆಯನ್ನು ಚೈತನ್ಯದ ಚಿಲುಮೆಯನ್ನಾಗಿ ಮಾಡುವ ಜನತೆಯ ಆನಂದೋನ್ಮತ್ತ ಜಯಘೋಷದಿಂದ, ಆನಂದೋದ್ವೇಗಗಳು ಎದೆಯನ್ನು ತುಂಬಿ ತೂಗುತ್ತಿರಲು, ಗಂಟಲಾಳದಲ್ಲಿ ಹುದುಗಲೆಳಸುವ ಮಾತನ್ನು ಪ್ರಯತ್ನಪೂರ್ವಕವಾಗಿ ಹೊರತಂದರು.
ಸಿಂಹಾಸನಕ್ಕಿಂತಲೂ ಮಿಗಿಲಾದದ್ದು ನಿಮ್ಮ ಹೃದಯದಲ್ಲಿರುವ ಪ್ರೇಮಸಿಂಹಾಸನ (Coronation of Madakarinayaka)
-“ನಾವಿಂದು ಅರಸಾಗಿರುವುದು ನಿಮ್ಮ ವಿಶ್ವಾಸದಿಂದ, ನಾವಿಂದು ಕುಳಿತ ಈ ಸ್ವರ್ಣ ಸಿಂಹಾಸನಕ್ಕಿಂತಲೂ ಮಿಗಿಲಾದದ್ದು ನಿಮ್ಮ ಹೃದಯದಲ್ಲಿರುವ ಪ್ರೇಮಸಿಂಹಾಸನ, ನೀವು ಕೊಟ್ಟ ಆಸನಕ್ಕೆ ಅರ್ಹರಾಗಿ ಬಾಳುವಂತೆ, ದುರ್ಗದ ದೇವ-ದೇವಿಯರು, ಸಿದ್ದ-ಸತ್ಪುರುಷರು, ಗುರು-ಹಿರಿಯರು ನಮ್ಮನ್ನು ಆಶೀರ್ವದಿಸಿ. ನಮ್ಮನ್ನು ಅರಸಾಗಿ ಆರಿಸಿದಿರಿ, ಆ ಪ್ರೇಮಕ್ಕೆ ನಮ್ಮ ದೇಹ ಇರುವಷ್ಟು ದಿನವೂ, ಇದರ ಹನಿಹನಿ ರಕ್ತವೂ ಕೃತಜ್ಞವಾಗಿರುತ್ತದೆ. ಆ ಶಕ್ತಿ ಆ ಭಾವನೆ ಸದಾ ನಮ್ಮಲ್ಲಿ ಎಚ್ಚರವಾಗಿರುವಂತೆ ಅನುಗ್ರಹಿಸಿ”
ಎಂದಷ್ಟೇ ಹೇಳಿ, ಕುಳಿತರು ನಾಯಕರು, ಕಲಿಸಿದ ಮಾತನ್ನು ನಿಧಾನವಾಗಿ ಆಡಿ. ಆ ಮಾತು ಕೇಳಿದ ಜನ ಹರ್ಷದಲ್ಲಿ ಹುಚ್ಚಾಗಿ ಜಯಧ್ವನಿ ಮಾಡಿದರು. ಅದರೊಂದಿಗೆ ಸ್ಪರ್ಧಿಸುವಂತೆ ಭಟರಾಜರು ನಾಯಕರ ಬಿರುದು-ಬಾವಲಿಗಳನ್ನು ಉಗ್ಗಡಿಸಿದರು.
ಇದೆಲ್ಲವನ್ನೂ ಕಂಡು ಕೇಳಿ, ಹರ್ಷದಲ್ಲಿ ಹುಚ್ಚೇರಿದಂತೆ, ಝಂಡಾಬತೇರಿಯ ಮೇಲಿದ್ದ ಕುಸುಂಬಿವರ್ಣದ ಹನುಮದ್ಗರುಡ ರಾಜಧ್ವಜ ಬೀಸುಗಾಳಿಯೊಂದಿಗೆ ಸ್ಪರ್ಧಿಸಿ, ನರ್ತಿಸಿತು. “ಚಿರಾಯುವಾಗಿ ಬಾಳು ನಮ್ಮ ದೊರೆ’-ಎಂದು ಜನ ಕೂಗಿದರು. ಸಹಸ್ರ ಸಹಸ್ರ ಮಂದಿ ಆ ನೋಟವನ್ನು ಕಂಡು ಹಿಗ್ಗಿದರು.
ಪಾಳೇಗಾರರಲ್ಲಿ ಸಾಹಸಿ ಮದಕರಿನಾಯಕ (Coronation of Madakarinayaka)
ಮಧ್ಯಕಾಲೀನ ಕರ್ನಾಟಕದಲ್ಲಿ ವಿಜಯನಗರೋತ್ತರ ಕಾಲಘಟ್ಟದಲ್ಲಿ ಆಳ್ವಿಕೆ ನಡೆಸಿದ (ಪಾಳೆಯಗಾರ) ಮನೆತನಗಳಲ್ಲಿ ಚಿತ್ರದುರ್ಗ ಸಂಸ್ಥಾನ ಪ್ರಮುಖವಾದದು. ವಿಜಯನಗರ ಸಾಮ್ರಾಟರ ಸಾಮಂತರಾಗಿ ಅಧಿಕಾರಕ್ಕೆ ಬಂದ ಇವರು, 1568ರಿಂದ 1779 ರವರೆಗೆ ಸುಮಾರು 211 ವರ್ಷ ಸ್ವತಂತ್ರರಾಗಿ ಆಳ್ವಿಕೆ ನಡೆಸಿದರು. ಚಿತ್ರದುರ್ಗವನ್ನು ಕೇಂದ್ರಸ್ಥಾನ ಮಾಡಿಕೊಂಡು 13 ನಾಯಕ ಅರಸರು ಆಳಿದ್ದಾರೆ. ‘ವಾಲ್ಮೀಕಿ ಗೋತ್ರದ ಶ್ರೀಮನ್ಮಹಾನಾ ಯಕಚಾರ್ಯ ಕಾಮಗೇತಿ ಕಸ್ತೂರಿ’ (Coronation of Madakarinayaka) ಎಂಬ ಅಭಿದಾನವನ್ನು ಹೊಂದಿದ್ದ ಈ ಅರಸರು ‘ಹಗಲುಕಗೊಲೆಯ ಮಾನ್ಯ’, ‘ಗಂಡುಗೊಡಲಿಯ ಸರ್ಜಾ’, ‘ಚಂದ್ರಗಾವಿ ಛಲದಾಂಕ್ಯ’, ‘ಧೂಳ್ ಕೋಟೆ ವಜೀರ’, ‘ಗಾದ್ರಿಮಲೆ ಹೆಬ್ಬುಲಿ’ ಇತ್ಯಾದಿ ಬಿರುದುಗಳಿಂದ ಪುರಸ್ಕೃತರಾಗಿದ್ದರು.
ಚಿತ್ರದುರ್ಗ ಸಂಸ್ಥಾನದ ಮೊದಲ ನಾಯಕ ಆರಸನೆಂದರೆ ಮತ್ತಿ ತಿಮ್ಮಣ್ಣ ನಾಯಕ ( 1568-1589). ಈತನ ತರುವಾಯ ಒಂದನೇ ಓಬಣ್ಣ ನಾಯಕ (1589-1603), ಒಂದನೇ ಕಸ್ತೂರಿ ರಂಗಪ್ಪ ನಾಯಕ (1603-1652), ಇಮ್ಮಡಿ ಮದಕರಿ ನಾಯಕ (1652-1675), ಇಮ್ಮಡಿ ಓಬಣ್ಣನಾಯಕ (1675) , ಕಸ್ತೂರಿ ಚಿಕ್ಕಣ್ಣನಾಯಕ (1675-1686), ಮುಮ್ಮಡಿ ಮದಕರಿ ನಾಯಕ (1686-1688), ದೊಣ್ಣೆ ರಂಗಪ್ಪ ನಾಯಕ (1688), ಸೂರ್ಯಕಾಂತಿ ರಂಗಪ್ಪನಾಯಕ (1689), ಬಿಚ್ಚುಗತ್ತಿ ಭರಮಣ್ಣ ನಾಯಕ (1689-1721), ಹಿರೇಮದಕರಿ ನಾಯಕ (1721-1749), ಇಮ್ಮಡಿ ಕಸ್ತೂರಿ ರಂಗಪ್ಪ ನಾಯಕ (1749- 1754), ರಾಜವೀರ ಮದಕರಿ ನಾಯಕ (1754-1779). ಈ ಅರಸರು ಮಹಾರಣಪಂಡಿತರು, ಮಹಾ ಧರ್ಮನಿಷ್ಠರೂ, ಗುರುಭಕ್ತಿಯುಳ್ಳವರೂ, ಪ್ರಜಾವತ್ಸಲರೂ, ಪಕ್ಷಪಾತರಹಿತ ರಾಜನೀತಿ ನಿಪುಣರು, ಕೃಷಿ-ವಾಣಿಜ್ಯಗಳ ಪೋಷಕರೂ ಹಾಗೂ ಸಂರಕ್ಷಕರೂ ಆಗಿದ್ದರು.
12 ವಯಸ್ಸಿನಲ್ಲಿ ಪಟ್ಟಕ್ಕೆ ಏರಿದ ಮದಕರಿನಾಯಕ (Coronation of Madakarinayaka)
ಕರ್ನಾಟಕದ ರಾಜಕೀಯ ಮತ್ತು ಸಾಂಸ್ಕೃತಿಕ ಚರಿತ್ರೆಯಲ್ಲಿ ಮಹತ್ವದ ಪಾತ್ರ ವಹಿಸಿರುವ ಚಿತ್ರದುರ್ಗ ನಾಯಕ ಅರಸರಲ್ಲಿ ಕೊನೆಯ ದೊರೆ ರಾಜವೀರ ಮದಕರಿ ನಾಯಕ, ಈತನನ್ನು ಇತಿಹಾಸದಲ್ಲಿ ಚಿಕ್ಕಮದಕರಿ, ಕೊನೇ ಮದಕರಿ, 5ನೇ ಮದಕರಿ, ವೀರಮದಕರಿ ಎಂದೆಲ್ಲಾ ಕರೆಯಲಾಗಿದೆ. ಈತನು ಜಾನಕಲ್ಲು ತೊದಲು ಭರಮಪ್ಪ ನಾಯಕನ ಎರಡನೇ ಮಗನಾಗಿದ್ದನು. (Coronation of Madakarinayaka) 1754ರಲ್ಲಿ ಕಸ್ತೂರಿ ರಂಗಪ್ಪ ನಾಯಕ ಮರಣ ಹೊಂದಿದ ಸಂದರ್ಭದಲ್ಲಿ ಈತನ ತಾಯಿ ಗಂಡಿಲ ಓಬವ್ವ ನಾಗತಿಯು ಜಾನಕಲ್ಲಿನಿಂದ ಭರಮಪ್ಪನ ಮಗ ‘ಚಿಕ್ಕ ಮದಕರಿ’ಯನ್ನು ಕರೆತಂದು ದುರ್ಗದಲ್ಲಿ ಪಟ್ಟಕಟ್ಟಿದಳು. ಈತ ಪಟ್ಟಾಭಿಷಿಕ್ತನಾ- ದಾಗ ಕೇವಲ 12 ವರ್ಷದ ಬಾಲಕ.
ಮದಕರಿ ನಾಯಕ ತನ್ನ ಆಳ್ವಿಕೆ ಅವಧಿಯಲ್ಲಿ ಕೈಗೊಂಡ ಹಲವು ರಾಜಕೀಯ ನಿರ್ಣಯಗಳು ಚಿತ್ರದುರ್ಗ ಸಂಸ್ಥಾನದ ಕೀರ್ತಿಯನ್ನು ಭಾರತದ ಹಾಗೂ ವಿಶೇಷವಾಗಿ ದಕ್ಷಿಣ ಏಷ್ಯಾದಲ್ಲಿ ಹರಡಲು ಕಾರಣ ಇವೆನಿಸಿದವು.
ಮದಕರಿನಾಯಕನ ಆಳ್ವಿಕೆಯಿಂದಾಗಿಯೇ ಚಿತ್ರದುರ್ಗ (Coronation of Madakarinayaka) ಸಂಸ್ಥಾನವು ಭಾರತದಲ್ಲಿ ಪರಾಕ್ರಮಿ ಆಳ್ವಿಕೆ ಹೊಂದಿದ ಮತ್ತು ಅತ್ಯಂತ ಬಲಿಷ್ಠ ಸೈನ್ಯದಿಂದ ಹೆಚ್ಚು ಪ್ರವರ್ಧಮಾನಕ್ಕೆ ಬರಲು ಸಾಧ್ಯವಾಯಿತು.
ಅತಿ ಮುಖ್ಯವಾಗಿ ಶ್ರೀರಂಗಪಟ್ಟಣದ ನವಾಬರು ಮತ್ತು ಮರಾಠಾ ಪೇಶ್ವಗಳೊಡನೆ ಈ ನಾಯಕನು ಇಟ್ಟುಕೊಂಡಿದ್ದ ರಾಜಕೀಯ ಬಾಂಧವ್ಯ ಮತ್ತು ನಡೆಸಿದ ಹೋರಾಟಗಳು ಆತನ ರಾಜಕೀಯ ದೂರದೃಷ್ಟಿ ಹಾಗೂ ಶೌರ್ಯ- ಸಾಹಸಗಳನ್ನು ಪ್ರತಿನಿಧಿಸುತ್ತವೆ. ತನ್ನ ಬದುಕಿನ ಹೆಚ್ಚಿನ ಸಮಯವನ್ನು ಯುದ್ದಗಳಲ್ಲಿ ಭಾಗಿಯಾಗುತ್ತಿದ್ದ ಮದಕರಿನಾಯಕರ ಸಂಸ್ಥಾನವನ್ನು ಬಲಪಡಿಸುವಲ್ಲಿ, ರಾಜ್ಯವನ್ನು ಸುಭಿಕ್ಷೆಯಿಂದ ಇಟ್ಟುಕೊಳ್ಳುವಲ್ಲಿ ವಹಿಸುತ್ತಿದ್ದ ಪಾತ್ರ ವಿಶೇಷವಾದದ್ದಾಗಿದೆ.
ಸ್ವಾಭಿಮಾನಿ, ಸಾಹಸಿ, ನಿರ್ಭಿತಿ ನಡೆಯ ಮದಕರಿನಾಯಕ
ಸ್ವಾಭಿಮಾನಿ, ಸಾಹಸಿ, ನಿರ್ಭಿಡೆ ನಡೆಯ ಮದಕರಿ ದುರ್ಗದ ಮಣ್ಣಿಗೆ ಸಾಂಸ್ಕೃತಿಕ ಮಹತ್ವ ತಂದುಕೊಡುವಲ್ಲಿ ಮಹತ್ವದ ಪಾತ್ರವಹಿಸಿದವನು. ಸುತ್ತಲಿನ ಹರಪನಹಳ್ಳಿ, ರಾಯದುರ್ಗ, ಬಿದನೂರು, ಸವಣೂರು ಮುಂತಾದ ಸಂಸ್ಥಾನಿಕರೊಂದಿಗೆ ನಿರಂತರ ಕಾಳಗಗಳಲ್ಲಿ ನಿರತನಾಗಿರುತ್ತಿದ್ದ. ಹೈದರಾಲಿಯೊಂದಿಗೆ ವಿಶೇಷ ಸ್ನೇಹ ಇರಿಸಿಕೊಂಡಿದ್ದ ಮದಕರಿ ಆತನ ದಂಡಯಾತ್ರೆಗಳಲ್ಲಿ ಪಾಲ್ಗೊಂಡು ಅನೇಕ ಬಗೆಯಲ್ಲಿ ಸಹಾಯ ಮಾಡಿದೆ.
ದುರ್ಗದ ಮೇಲೆ ಬಿದ್ದ ಹೈದರ್ ಕಣ್ಣು (Coronation of Madakarinayaka)
ಕೊನೆಯಲ್ಲಿ ಹೈದರ್ ಕಣ್ಣು ದುರ್ಗದ ಮೇಲೆ ಬಿದ್ದು ಚಿತ್ರದುರ್ಗದ ಮೇಲೆಯೂ ದಂಡೆತ್ತಿ ಬಂದ. ನಾಲ್ಕು ಬಾರಿ ದುರ್ಗದ ಮೇಲೆ ಯುದ್ಧ ಮಾಡಿದ. ಕೊನೆಯ ಯುದ್ಧ 1779ರ ಫೆಬ್ರುವರಿಯಲ್ಲಿ ಪ್ರಾರಂಭವಾಗಿ ನಾಲ್ಕು ತಿಂಗಳುಗಳ ಕಾಲ ನಡೆದು ಮೇ ತಿಂಗಳಲ್ಲಿ ದುರ್ಗದ ಪತನದೊಂದಿಗೆ ಅಂತ್ಯವಾಯಿತು.
ರಾಜವೀರ ಮದಕರಿ ನಾಯಕನ ಕುರಿತಂತೆ ಸಮಕಾಲೀನ ಕವಿ ಚಂದ್ರಭೀಮನ ‘ಮದಕರಿ ರಾಜೇಂದ್ರನ ದಂಡಕ’, ‘ಭೀಮಾಜಿ ಪಂತನ’, ‘ಚಿತ್ರದುರ್ಗದ ಬಟ್ಟೆರು’ ಹಾಗೂ ಚಿನ್ನದಮನೆ (Coronation of Madakarinayaka) ರಾಮಪ್ಪನ ‘ಚಿನ್ಮೂಲಾದ್ರಿ ಗಿರಿದುರ್ಗದಲ್ಲಿ ಆಳಿದ ಹಿಂದಿನ ಆರಸರು ಕೃತಿಗಳು ವಸ್ತುನಿಷ್ಠ ಮಾಹಿತಿಗಳನ್ನು ನೀಡುತ್ತವೆ.