
Chitradurga news|nammajana.com|09-03-2025
ನಮ್ಮಜನ.ಕಾಂ, ಚಿತ್ರದುರ್ಗ: ಪ್ರಪಂಚದಲ್ಲಿ ಹಲವು (Cow calf) ವಿಸ್ಮಯಗಳ ಕುರಿತು ಕೇಳಿದ್ದುಂಟು ನೋಡಿದ್ದೂ ಉಂಟು. ಆದರೆ ಈ ವಿಷಯದಲ್ಲಿ ಸ್ಬಲ್ಪ ಸ್ಪೇಷಲ್ ಆಗಿದೆ.
ಹೌದು ಚಿತ್ರದುರ್ಗ ತಾಲೂಕಿನ ಅನ್ನೇಹಾಳ ಗ್ರಾಮದಲ್ಲಿ ಜನಿಸಿದ ಮೂರೇ ದಿನದಲ್ಲಿ ಹಸುವಿನ ಕರು ಹಾಲು ಕರೆಯುವ ಮೂಲಕ ಅಚ್ಚರಿಗೆ ಕಾರಣವಾಗಿದೆ. ಹಾಲು ಕುಡಿಯುವ ಒಂದು ತಿಂಗಳ ಕರು ಸ್ವತಃ ಹಾಲು ಕರೆಯುವ ಮೂಲಕ ಜನರಲ್ಲಿ ವಿಸ್ಮಯ ಉಂಟು ಮಾಡಿದೆ.

ಒಂದು ಕಡೆ ಕರುವಿಗೆ ಶ್ರದ್ಧಾ ಭಕ್ತಿಯಿಂದ ಪೂಜೆ ಮಾಡಿ ಅದರ ಕಾಲಿಗೆ ನಮಸ್ಕಾರ ಮಾಡ್ತಿರೋ ಜನ. ಮತ್ತೊಂದೆಡೆ ಈ ವಿಶಿಷ್ಟ ಕರುವನ್ನು ನೋಡಲು ಗುಂಪು ಗುಂಪುಗಳಾಗಿ ಜಿಲ್ಲೆಯಿಂದ ಬರುತ್ತಿರುವ ಜನ.
ಇಲ್ಲಿ ರೈತರು ಹಾಲು ಕರೀತಿದಾರೆ. ಇದರಲ್ಲೇನು ಸ್ಪೆಷಲ್ ಅನ್ನಬೇಡಿ. ಆದರೆ ಇಲ್ಲಿ ಹಸುವಿನ ಹಾಲು ಕರೆಯುತ್ತಿಲ್ಲ, (Cow calf) ಬದಲಾಗಿ ಮೊನ್ನೆ ಮೊನ್ನೆಯಷ್ಟೇ ಭೂಮಿಗೆ ಬಂದ ಕರುವಿನಿಂದ ಹಾಲು ಕರೆಯಲಾಗುತ್ತಿದೆ.
ಈ ಅನ್ನೇಹಾಳ ಗ್ರಾಮದ ನಿರಂಜನ ಮೂರ್ತಿ ಎಂಬುವರ ಮನೆಯಲ್ಲಿ ಡೈರಿ ಹಸುವೊಂದು ಮರಿ ಹಾಕಿದ್ದು ಆ ಕರು ಜನಿಸಿದ ಮೂರೇ ದಿನಕ್ಕೆ ಹಾಲು ಕೊಡಲು ಪ್ರಾರಂಭಿಸಿದೆ. (Cow calf) ಕರುವಿನ ಕೆಚ್ಚಲಿನಿಂದ ಹಾಲು ಸುರಿಯುತ್ತಿದ್ದನ್ನ ಕಂಡ ನಿರಂಜನ ಮೂರ್ತಿ ಕುಟುಂಬಸ್ಥರು ಅಚ್ಚರಿಗೊಂಡಿದ್ದಾರೆ.
ಇದನ್ನೂ ಓದಿ: Innova car accident | ಇನ್ನೋವಾ ಕಾರು-ಲಾರಿ ಅಫಘಾತ | ಐವರು ಸಾವು
ತಾಯಿಯ ಹಾಲು ಕುಡಿದು ಸುತ್ತಾಡಿಕೊಂಡಿರಬೇಕಾದ ಕರು. 31 ದಿನಗಳಿಂದ ಈ ರೀತಿ ಹಾಲು ಕೊಡ್ತಿರೋದು ಅಚ್ಚರಿಗೆ ಕಾರಣವಾಗಿದೆ.
