
Chitradurga news|nammajana.com|5-10-2024
ನಮ್ಮಜನ.ಕಾಂ, ಚಳ್ಳಕೆರೆ: ನಗರದ ಡಿ.ಸುಧಾಕರ್ ಕ್ರೀಡಾಂಗಣದಲ್ಲಿ ಕಳೆ ಒಂದು ವಾರದಿಂದ ನಡೆಯುತ್ತಿರುವ ಸಿಪಿಎಲ್ ಪಂದ್ಯಾವಳಿ ಶುಕ್ರವಾರ ಕೊನೆಗೊಂಡಿದ್ದು, (CPL) ಅಂತಿಮವಾಗಿ ಚಳ್ಳಕೆರೆ ವಾರಿಯರ್ಸ್ ತಂಡ ಜಯಸಾಧಿಸುವ ಮೂಲಕ ಚಾಂಪಿಯನ್ ಶಿಫ್ ಪಡೆದುಕೊಂಡಿದೆ.
ಚಳ್ಳಕೆರೆ ಪ್ರಿಮಿಯರ್ ಲಿಗ್ ಸಿಸನ್-೩ ೨೦೨೩ ಟೂರ್ನಿಯ ಫೈನಲ್ ಪಂದ್ಯದಲ್ಲಿ ಲೆಜೆಂಡ್ ತಂಡದ ವಿರುದ್ಧ ಆರು ವಿಕೆಟ್ ಅಂತರದ ಗೆಲುವು ದಾಖಲಿಸುವ ಮೂಲಕ ಚಳ್ಳಕೆರೆ (CPL) ವಾರಿಯರ್ಸ್ ತಂಡ ಮೊದಲ ಬಾರಿಗೆ ಚಾಂಪಿಯನ್ ಪಟ್ಟ ಪಡೆಯಿತು.

ಟಾಸ್ ಗೆದ್ದ ಲೆಜೆಂಡ್ ತಂಡ ಬೌಲಿಂಗ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು ಆರಂಭದಲ್ಲಿ ಅಷ್ಟೇನೂ ಆಟಗಾರರು ಪ್ರದರ್ಶನ ತೋರಲಿಲ್ಲ. ಚಳ್ಳಕೆರೆ ವಾರಿಯರ್ ತಂಡ ನಿರಂಜನ್, ತರುಣ್, ಮೃತ್ಯುಂಜಯ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿ (CPL) ೮ ಒವರ್ ಗಳಲ್ಲಿ ೫೫ ರನ್ ಲೆಜೆಂಡ್ ತಂಡವನ್ನು ಕಟ್ಟಿ ಹಾಕಿದ್ರು.
ಇನ್ನೂ ಚಳ್ಳಕೆರೆ ವಾರಿಯರ್ಸ ತಂಡದ ಆರಂಭಿಕ ಆಟಗಾರ ಪ್ರಶಾಂತ್, ೧೫ ಬಾಲಿಗೆ ೨೨ ಬಾರಿಸಿದ್ರೆ, ನಾಯಕ ಶಾಂತರಾಜ್ ೯ ಬಾಲಿಗೆ ೧೩ ರನ್ ಕಲೆ ಹಾಕಿದ್ರು. ಮುತ್ತು ೫ ಬಾಲಿಗೆ ೧೦ (CPL) ರನ್ ಹೊಡೆಯುವ ಮೂಲಕ ೫.೩ ಬಾಲಿಗೆ ಜಯವನ್ನು ತಂದು ಕೊಟ್ಟರು.
ಪ್ರಥಮ ಸ್ಥಾನ ಚಳ್ಳಕೆರೆ ವಾರಿಯರ್ಸ್, ದ್ವಿತೀಯ ಲೆಜೆಂಡ್ ಮೂರನೇ ಸ್ಥಾನ ಜಿ.ಜೆ.ಕ್ರಿಕೆಟರ್ಸ್, ಆಯುಷ್ ಲಯನ್ ಪಡೆದವು.
ಇಡಿ ಸಿಪಿಎಲ್ ಸಿಜನ್ ೩ರಲ್ಲಿ ೧೨ ಮ್ಯಾಚ್ ನಲ್ಲಿ ೨೦೮ ರನ್ ಹೊಡೆಯುವ ಮೂಲಕ ಲೆಜೆಂಡ್ ತಂಡದ ಆಟಗಾರ ಬೆಸ್ಟ್ ಬ್ಯಾಟ್ಸ್ ಮ್ಯಾನಾಗಿ ಮುರುಘ, ೧೨ ಇನಿಂಗ್ಸ್ ನಲ್ಲಿ ೨೫ ವಿಕೆಟ್ ಪಡೆಯವ ಲೆಜೆಂಡ್ ತಂಡದ ಆಟಗಾರ ಅಪ್ಪಯ್ಯ ಮೊದಲ ಸ್ಥಾನದಲ್ಲಿದರೆ, ಎರಡನೇ ಸ್ಥಾನ ಚಳ್ಳಕೆರೆ ವಾರಿಯ್ಸ್ ತಂಡದ ಆಟಗಾರ ಮುತ್ತು ೧೧ ಇನಿಂಗ್ಸ್ ನಲ್ಲಿ ೧೯ ವಿಕೆಟ್ ಪಡೆದಿದ್ದಾರೆ. ಬೆಸ್ಟ್ ಪಿಲ್ಡರ್ ಪ್ರಶಸ್ತಿ ವಂಶಿ ಪಡೆದಿದ್ದಾರೆ.
ಕಳೆದ ಬಾರಿ ನಾವು ಪ್ಲೇ ಆಪ್ ಬರಲು ಸಾಧ್ಯವಾಗಿರಲಿಲ್ಲ. ಆದ್ರೆ ಈ ಬಾರಿ ತಂಡ ಒಗ್ಗಟ್ಟಿನಿಂದ ಉತ್ತಮ ಪ್ರದರ್ಶನ ನೀಡಿದ್ದೇವೆ. ನಿರಂಜನ್, ಮುತ್ತು, ತರುಣ್ ವೆಂಕಟೇಶ ಸೇರಿದಂತೆ ಎಲ್ಲಾ ಆಟಗಾರರ ಶ್ರಮದಿಂದ ನಾವು ಟ್ರೋಪಿ ಪಡೆದ ಸಂಭ್ರಮ ಇದೆ. ಇನ್ನೂ ಫ್ರಾಂಚೈಸಿ ಗಳಾದ ಜಾಂಟಿ, ಮುತ್ತುರಾಜು, (CPL) ಮಂಜುನಾಥ್, ಮಹೇಂದ್ರ ಆಟಗಾರರಿಗೆ ಸಾಥ್ ನೀಡಿ ಬೆಂಬಲಿಸಿದರಿಂದ ತಂಡಕ್ಕೆ ಶಕ್ತಿ ತುಂಬಿದ್ದಾರೆ.
ಇದನ್ನೂ ಓದಿ: ಒಂದೇ ರಾತ್ರಿ 426.18 ಎಂ.ಎಂ. ಮಳೆ : ಮನೆ, ಜಮೀನುಗೆ ಬೆಳೆಗೆ ಹಾನಿ | Challakere rain report
ಚಳ್ಳಕೆರೆ ಯಲ್ಲಿ ಸಿಪಿಎಲ್ ಸಿಜನ್ ೩ ಹಬ್ಬದ ವಾತಾವರಣ ಸೃಷ್ಟಿ . ಕಳೆದ ಬಾರಿಗಿಂತಲೂ ಈ ಸಿಜನ್ ಎಂಜಾಯ್ (CPL) ಮಾಡಿದ್ದಾರೆ. ಪ್ರಾಚೈಸಿ ಗಳು, ಕ್ರೀಡಾಪಟುಗಳು ಸಾಥ್ ಕೊಟ್ಟಿದ್ದರಿಂದ ಸಿಪಿಎಲ್ ಯಶಸ್ವಿಯಾಗಿದೆ.
ಮಂಜುನಾಥ ಕ್ರೀಡಾಪ್ರೇಮಿ.
