Chitradurga news|nammajana.com|23-02-2025
ನಮ್ಮಜನ.ಕಾಂ, ಚಿತ್ರದುರ್ಗ: ಅಪ್ಪು ಗೆಳೆಯರ ಬಳಗ ವತಿಯಿಂದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವಕ ಸ್ವಾಮೀಜಿರವರ ನೇತೃತ್ವದಲ್ಲಿ, ಹಳೇ ಮಾಧ್ಯಮಿಕ ಶಾಲಾ (Cricket) ಆವರಣದಲ್ಲಿ ಜರುಗಿದ ಅಪ್ಪು 11 ಕ್ರಿಕೆಟ್ ಕಪ್ -2025ರ ವಿಜೇತ ತಂಡವಾಗಿ ರಾಹುಲ್ ತಂಡ ಹೊರಹೊಮ್ಮಿದೆ.
ಕಳೆದ ಮೂರುದಿನಗಳಿಂದ ಚಿತ್ರದುರ್ಗ ನಗರದಲ್ಲಿ ಕ್ರಿಕೇಟ್ ಜಾತ್ರೆ ನಡೆಯುತ್ತಿದ್ದು ನಗರವಾಸಿಗಳು ಸುಮಾರು 24 (Cricket) ತಂಡಗಳಾಗಿ ಸೆಣಸಾಡಿದ್ದಾರೆ. ಅಂತಿಮವಾಗಿ ಮೂರನೇ ರನ್ನರ್ ಅಪ್ ಆಗಿ ಸುವರ್ಣ ತಂಡ, ಎರಡನೇಯ ರನ್ನರ್ ಅಪ್ ಆಗಿ ಎವರಿಗ್ರಿನ್ ತಂಡ ಹೊರಹೊಮ್ಮಿದೆ.

ಮೊದಲನೇ ರನ್ನರ್ ಅಪ್ ಆಗಿ ಚಾಣಕ್ಯ ತಂಡ ಪಾರಿತೋಷಕ ಹಾಗೂ 25.000 ರೂಪಾಯಿಗಳ ಬಹುಮಾನ ಪಡೆದಿದೆ. ಅಪ್ಪು 11 ಕಪ್ ವಿಜೇತರಾಗಿ ರಾಹುಲ್ ತಂಡವು ಹೊರಹೊಮ್ಮಿದೆ. ತಂಡವು ಶ್ರೀ ಜಗದ್ಗುರು ಸಿದ್ದರಾಮೇಶ್ವರ ಮಹಾಸಂಸ್ಥಾನ, ಭೋವಿಗುರುಪೀಠದ ಕ್ರೀಡಾಪ್ರೋತ್ಸಾಹ ನಿಧಿಯಿಂದ ನೇರವಿನಿಂದ 50.000 ರೂಪಾಯಿಗಳ ನಗದು ಪಾರಿತೋಷಕವನ್ನು ಪಡೆದಿದೆ.
ಮಂಜುನಾಥ್ ಚಾರಿ ಅವರು ಮ್ಯಾನ್ ಆಫ್ ದಿ ಮ್ಯಾಚ್ ಸ್ವಿಕರಿಸಿದರು. ಚಾಣಕ್ಯ ತಂಡದ ಶಿವುಕುಮಾರ ಮ್ಯಾನ್ ಆಫ್ ದಿ ಸಿರಿಸ್ ಪಡೆದರು. ರಾಹುಲ್ ತಂಡದ ಲಿಂಗರಾಜು ಬೆಸ್ಟ್ ಬ್ಯಾಟ್ಸ್ ಮ್ಯಾನ್ ಪ್ರಶಸ್ತಿ ಸ್ವೀಕರಿಸಿದರು. ರಾಹುಲ್ ತಂಡ ರಂಗಸ್ವಾಮಿ (Cricket) ಬೆಸ್ಟ್ ಭೋಲರ್ ಪ್ರಶಸ್ತಿ ಸ್ವೀಕರಿಸಿದರು.
ಇದನ್ನೂ ಓದಿ: Renukaswamy ಪುತ್ರನಿಗೆ ನಾಮಕರಣ, ರೇಣುಕಾಸ್ವಾಮಿ ಪುತ್ರನ ಹೆಸರೇನು?
ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಮಹಾಸ್ವಾಮೀಜಿ ಅಧ್ಯಕ್ಷತೆವಹಿಸಿದ್ದರು. ಸಮಾರಂಭವನ್ನು (Cricket) ಕೆ.ಎನ್.ರಾಜಣ್ಣ ಉದ್ಘಾಟಿಸಿದರು. ಉದ್ಯಮಿ ಸಮರ್ಥ ಹಾಗೂ ಮೇದೆಹಳ್ಳಿ ವಿಜಯಕುಮಾರ ಅಪ್ಪು ಬಳಗದ ಪ್ರಾಸದ, ಇಂಧು, ನಾಗರಾಜ ಹಾಗೂ ಇನ್ನಿತರರು ಉಪಸ್ಥಿತಿಯಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252