Chitradurga News | Nammajana.com | 18-09-2025
ನಮ್ಮಜನ ನ್ಯೂಸ್ ಕಾಂ,ಚಿತ್ರದುರ್ಗ: ಚಿತ್ರದುರ್ಗದಲ್ಲಿ(DJ) ನಡೆದ ಹಿಂದೂ ಮಹಾಗಣಪತಿ ಶೋಭಾಯಾತ್ರೆ ವೇಳೆ ಡಿಜೆ ಬಳಸಿದ ವಿಚಾರದಲ್ಲಿ ಡಿಜೆ ಹಾಗೂ ವಾಹನ ಮಾಲೀಕರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಲಾಗಿದೆ ಎಂದು ಎಸ್‌ಪಿ ರಂಜಿತ್ ಕುಮಾರ್‌ಬಂಡಾರು ತಿಳಿಸಿದ್ದಾರೆ.

ಇದನ್ನೂ ಓದಿ: ಕೋಟೆನಾಡು ಚಿತ್ರದುರ್ಗ | ಅದ್ದೂರಿಯಾಗಿ ಜರುಗಿದ ಹಿಂದೂ ಮಹಾಗಣಪತಿ ಶೋಭಯಾತ್ರೆ | ಸುಮಾರು 4 ಲಕ್ಷ ಜನ ಭಾಗೀ
ಶೋಭಾಯಾತ್ರೆ ವಿಚಾರವಾಗಿ ಡಿಜೆ ಬಳಕೆ ನಿಷೇಧಿಸಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಆದೇಶ ಹೊರಡಿಸಿದ್ದರು.ಈ ಬಗ್ಗೆ ಹಲವಾರು ಸಭೆಗಳ ನಡೆಸಿ ತಿಳುವಳಿಕೆ ನೀಡಲಾಗಿತ್ತು.
ನಿಷೇಧ ಉಲ್ಲಂಘಿಸಿ ಅಧಿಕ ಶಬ್ದ ಹೊರಸೂಸುವ ಡಿಜೆ ಬಳಸಲಾಗಿದೆ. ಈ ಸಂಬಂಧ ತಾಲೂಕು ದಂಡಾಧಿಕಾರಿಗಳು ನೀಡಿದ ದೂರಿನನ್ವಯ ಬಡಾವಣೆ ಠಾಣೆಯಲ್ಲಿ ಡಿಜೆ ಹಾಗೂ ಅವುಗಳ ತಂದ ವಾಹನ ಮಾಲೀಕರ ಮೇಲೆ ಕ್ರಿಮಿಲ್ ಮೊಕದ್ದಮೆ ದಾಖಲು ಮಾಡಲಾಗಿದೆ ಎಂದ ಎಸ್‌ಪಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
