Chitradurga news | nammajana.com | 31-07-2025
ನಮ್ಮಜನ.ಕಾಂ, ಚಿತ್ರದುರ್ಗ: ಜಿಲ್ಲೆಯಲ್ಲಿ(Crop Insurance) ಬಹುವಾರ್ಷಿಕ ತೋಟಗಾರಿಕೆ ಬೆಳೆಗಳಾದ ಅಡಿಕೆ, ದಾಳಿಂಬೆ ಹಾಗೂ ಮಾವು ಬೆಳೆಗೆ 2025-26ನೇ ಸಾಲಿನಲ್ಲಿ ಹವಾಮಾನ ಆಧಾರಿತ ಬೆಳೆ ಮಿಮಾ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ.
ಇದನ್ನೂ ಓದಿ: ಅನ್ನೇಹಾಳ್ ಕೆರೆ ಒತ್ತುವರಿ ತೆರವಿಗೆ ಸೂಚನೆ

ಸ್ಥಳೀಯ ಟೆಲಿಮೆಟ್ರಿಕ್ ಮಳೆ ಮಾಪನ ಕೇಂದ್ರಗಳಲ್ಲಿ ದಾಖಲಾಗುವ ತಾಪಮಾನ, ಗಾಳಿಯ ವೇಗ, ಮಳೆಯ ಪ್ರಮಾಣ, ಆದ್ರ್ರತೆ ಮಾಹಿತಿಗಳನ್ನು ಅಂಶಗಳ ಆಧಾರದಲ್ಲಿ ಬೆಳೆ ವಿಮಾ ನಷ್ಟ ತೀರ್ಮಾನಿಸಲಾಗುವುದು. ಈ ಬಾರಿ ಜಿಲ್ಲೆಗೆ ರಿಲಯನ್ಸ್ ಇನ್ಸೂರೆನ್ಸ್ ಕಂಪನಿಯನ್ನು ವಿಮಾ ನೊಂದಣಿಗಾಗಿ ನಿಗದಿ ಪಡಿಸಲಾಗಿದೆ.
ಪ್ರತಿ ಹೆಕ್ಟೇರ್ ಆಧಾರದಲ್ಲಿ ಮಾವು(Crop Insurance) ಬೆಳೆಗೆ ರೂ.80,000, ದಾಳಿಂಬೆಗೆ ರೂ.1,27,000 ಅಡಿಕೆಗೆ ರೂ.1,28,000 ಮಿಮಾ ಮೊತ್ತ ನಿಗದಿ ಮಾಡಲಾಗಿದೆ. ಇದಕ್ಕೆ ಅನುಗುಣವಾಗಿ ರೈತರು ಶೇ.5 ಲೆಕ್ಕಾಚಾರದಲ್ಲಿ ಮಾವಿಗೆ ರೂ.4,000 ದಾಳಿಂಬೆಗೆ ರೂ.6,350 ಹಾಗೂ ಅಡಿಕೆಗೆ ರೂ.6,400 ವಿಮಾ ಕಂತು ಪಾವತಿಸಿ ಬೆಳೆ ವಿಮೆಗೆ ನೊಂದಣಿ ಮಾಡಿಕೊಳ್ಳಬಹುದು.
ನೊಂದಣಿ ಮಾಡಲು ಉದ್ದೇಶಿದ ಬೆಳೆ ಹಿಂದಿನ ವರ್ಷಗಳ ಬೆಳೆ ಸಮೀಕ್ಷೆಯಲ್ಲಿ ಕಂಡುಬರದಿದ್ದರೆ ನೊಂದಣಿಗೆ ಅನುಮತಿ ಇರುವುದಿಲ್ಲ.
ಇದನ್ನೂ ಓದಿ: Development work | 11 ಕೋಟಿ ವೆಚ್ಚದಲ್ಲಿ ರಸ್ತೆ ಮತ್ತು ಶಾಲೆ ಅಭಿವೃದ್ದಿ: ಟಿ.ರಘುಮೂರ್ತಿ
ಪಹಣಿ, ಎಫ್.ಐ.ಡಿ ಸಂಖ್ಯೆ, ಆಧಾರ್(Crop Insurance) ಕಾರ್ಡು ಹಾಗೂ ಬ್ಯಾಂಕ್ ಪಾಸ್ ಬುಕ್ ಪ್ರತಿಗಳೊಂದಿಗೆ ಹತ್ತಿರ ಗ್ರಾಮ-1, ಬ್ಯಾಂಕ್, ಸಿ.ಎಸ್.ಸಿ ಕೇಂದ್ರಗಳಲ್ಲಿ ರೈತರು ನೊಂದಣಿ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ ಹತ್ತಿರ ತೋಟಗಾರಿಕೆ ಇಲಾಖೆ ಅಥವಾ ಬ್ಯಾಂಕ್ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252