Chitradurga news | nammajana.com|8-07-2025
ನಮ್ಮಜನ.ಕಾಂ, ಹೊಸದುರ್ಗ: ರೈತರೊಬ್ಬರ ಅಡಿಕೆ ತೋಟಕ್ಕೆ ರಾತ್ರೋರಾತ್ರಿ ನುಗ್ಗಿದ ಕಿಡಿಗೇಡಿಗಳು ಎರಡು ಎಕರೆಯ ಅಡಿಕೆ ಗಿಡ(areca nut)ಗಳನ್ನು ಮನಬಂದಂತೆ ಕಡಿದು ಹಾಕಿರುವ ಘಟನೆ ತಾಲೂಕಿನ ಮತ್ತೋಡು ಗೊಲ್ಲರಹಟ್ಟಿ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ.

ಇದನ್ನೂ ಓದಿ: ವಸತಿ ಶಾಲೆ | ಖಾಲಿ ಸ್ಥಾನಗಳಿಗೆ ನೇರ ಪ್ರವೇಶ
ಸಣ್ಣಮ್ಮ ಮತ್ತು ಚಿತ್ತಪ್ಪ ಎಂಬ ದಂಪತಿ ತಮ್ಮ 2 ಎಕರೆ ಜಮೀನಿನಲ್ಲಿ ಸುಮಾರು ಸಾವಿರದ ಇನ್ನೂರಕ್ಕೂ ಅಧಿಕ ಅಡಿಕೆ ಗಿಡಗಳನ್ನು ನೆಟ್ಟು ಪೋಷಣೆ ಮಾಡುತ್ತಿದ್ದರು. ಉತ್ತಮ ದರ ಸಿಗುತ್ತಿದೆ ಎಂದು ಅಡಿಕೆ ಹಾಕಿದ್ದರು. ಇನ್ನೆರಡು ವರ್ಷಗಳಾಗಿದ್ದರೆ, ಫಸಲು ಬರುತ್ತಿತ್ತು. ಆದರೆ, ಕಿಡಿಗೇಡಿಗಳ ಅಟ್ಟಹಾಸಕ್ಕೆ 100 ಕ್ಕೂ ಹೆಚ್ಚು ಗಿಡಗಳು ನಾಶವಾಗಿವೆ. ಇದರಿಂದಾಗಿ ರೈತ ಕುಟುಂಬವೇ ಕಣ್ಣೀರು ಹಾಕುವಂತಾಗಿದೆ.
ಕೃಷಿ ಮಾಡಬೇಕು ಎಂಬ ಉದ್ದೇಶದಿಂದ ಬೋರ್ವೆಲ್ ಕೊರೆಸಿ, ಮೋಟಾರ್, ಪೈಪ್ ಲೈನ್ ಗಾಗಿ 10 ಲಕ್ಷಕ್ಕೂ ಅಧಿಕ ಹಣವನ್ನು ಖರ್ಚು ಮಾಡಿ, ಅಡಿಕೆ ಗಿಡಗಳನ್ನು ನೆಟ್ಟಿದ್ದೆವು. ಇದರಲ್ಲಿ ಎರಡು ಎಕರೆಯಲ್ಲಿದ್ದ ಗಿಡ(areca nut)ಗಳನ್ನು ರಾತ್ರೋರಾತ್ರಿ ಕಿಡಿಗೇಡಿಗಳು ಕಡಿದು ಹಾಕಿದ್ದಾರೆ.
ಇದನ್ನೂ ಓದಿ: ಕೃಷಿ ಪ್ರಶಸ್ತಿಗೆ ಅರ್ಜಿ ಆಹ್ವಾನ
ನಾವು ಕಷ್ಟಪಟ್ಟು ಗೊಬ್ಬರ ಹಾಕಿ ಗಿಡ(areca nut)ಗಳನ್ನು ಬೆಳೆಸಿದ್ದೆವು. ಆದರೆ, ಕಿಡಿಗೇಡಿಗಳು ಮಚ್ಚುಗಳಿಂದ ಗಿಡಗಳನ್ನು ನೆಲಕ್ಕುರಳಿಸಿದ್ದು, ಲಕ್ಷಾಂತರ ರೂ.ನಷ್ಟವಾಗಿದೆ. ಶೀಘ್ರವೇ ದುಷ್ಕರ್ಮಿಗಳನ್ನು ಬಂಧಿಸಿ ಶಿಕ್ಷಿಸಬೇಕು. ನಮಗೆ ನ್ಯಾಯ ಒದಗಿಸಿಕೊಡಿ ಎಂದು ರೈತ ಪೂಜಾರಿ ಚಿತ್ತಪ್ಪ ಮನವಿ ಮಾಡಿದ್ದಾರೆ.
ಈ ಬಗ್ಗೆ ತೋಟದ ರೈತ ಶ್ರೀರಾಂಪುರ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
