Chitradurga news|Nammajana.com|13-7-2025
ನಮ್ಮಜನ.ಕಾಂ, ಚಿತ್ರದುರ್ಗ: ಮಲೆನಾಡಿನಲ್ಲಿ ಮಳೆಯ ಪ್ರಮಾಣ ಹೆಚ್ಚುತ್ತಿದ್ದು ದಿನದಿಂದ ದಿನಕ್ಕೆ ಮಳೆ ಮುಂದುವರೆಯುತ್ತಿದ್ದು ಭದ್ರಾ ಜಲಾಶಯದ (Dam Level) ಒಳ ಹರಿವು ತುಸು ಏರಿಕೆಯಾಗಿದೆ. ಇವತ್ತು ಜಲಾಶಯಕ್ಕೆ 11,643 ಕ್ಯೂಸೆಕ್ ಒಳ ಹರಿವು ದಾಖಲಾಗಿದೆ.

ಭದ್ರಾ ಜಲಾಶಯದ ನೀರಿನ ಮಟ್ಟ 175 ಅಡಿಗೆ ತಲುಪಿದೆ. ಗರಿಷ್ಠ ನೀರಿನ ಸಂಗ್ರಹ ಮಟ್ಟ 186 ಅಡಿ. ಇವತ್ತು (Dam Level) ಜಲಾಶಯದಿಂದ 2975 ಕ್ಯೂಸೆಕ್ ಹೊರ ಹರಿವು ಇದೆ.
ಇದನ್ನೂ ಓದಿ: ಬೀದಿ ನಾಯಿ ದಾಳಿ ನಿರ್ಲಕ್ಷಿಸಿದರೆ FIR
