Chitradurga News | Nammajana.com | 29-08-2025
ನಮ್ಮಜನ ನ್ಯೂಸ್ ಕಾಂ, ಹಿರಿಯೂರು: ದಸರಾ(Dasara) ಹಬ್ಬದ ಉದ್ಘಾಟನೆಯನ್ನು ಭಾನು ಮುಸ್ತಾಕ್ ರವರಿಗೆ ನೀಡಿರುವುದು ಹಿಂದುಗಳಿಗೆ ಮಾಡಿರುವ ಅವಮಾನ ಎಂದು ಹಿಂದೂ ಜಾಗರಣ ವೇದಿಕೆಯವರು ಗುರುವಾರ ತಹಸೀಲ್ದಾರ್ ಕಚೇರಿಗೆ ಮನವಿ ಸಲ್ಲಿಸಿ ಆರೋಪಿಸಿದರು.

ಇದನ್ನೂ ಓದಿ: ನಾಮನಿರ್ದೇಶಿತ ಸದಸ್ಯರ ನೇಮಕಕ್ಕೆ ಅರ್ಜಿ ಆಹ್ವಾನ
ದಸರಾ ಹಬ್ಬವು ಕನ್ನಡ ನಾಡಿನ ಸಾಂಸ್ಕೃತಿಕ ಹಬ್ಬವಾಗಿದೆ. ನಾಡಿನಾದ್ಯಟತ ಹಿಂದೂಗಳು ಬಹು ಶ್ರದ್ಧೆಯಿಂದ ಆಚರಿಸಿಕೊಂಡುಬರುತ್ತಿರುವದಸರಾಹಬ್ಬದ ಉದ್ಘಾಟನೆ ಯನ್ನು ಕನ್ನಡಾಂಬೆಯ ಅಸ್ಮಿತೆಯನ್ನು ಪ್ರಶ್ನಿಸಿರುವ ಭಾನು ಮುಸ್ತಾಕ್ ಅವರಿಗೆ ನೀಡಲಾಗಿದೆ.
ಹಿಂದೂ ಧಾರ್ಮಿಕ ಪದ್ಧತಿಗಳಲ್ಲಿ ನಂಬಿಕೆ ಇಡದ ಮುಸ್ಲಿಂರನ್ನು ಉದ್ಘಾಟನೆಗೆ ಆಯ್ಕೆ ಮಾಡಿರುವುದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ನೀತಿ ತೋರಿಸುತ್ತದೆ. ಕೇವಲ ಬೂಕರ್‌ಪ್ರಶಸ್ತಿ ಪಡೆಯುವುದೇ ದಸರಾ ಉದ್ಘಾಟನೆಗೆ ಮಾನದಂಡವಾಗಿದ್ದರೆ ದೀಪ ಭಸ್ತಿಯವರು ಸಹ ಪ್ರಶಸ್ತಿ ಪಾಲುದಾರರು ಎಂಬುದನ್ನು ಯಾರೂ ಮರೆಯಬಾರದು.
ಇದನ್ನೂ ಓದಿ: ವಾಲ್ಮೀಕಿ ಅಭಿವೃದ್ಧಿ ನಿಗಮ : ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ
ವೋಟಿಗಾಗಿ ಮುಸ್ಲಿಂರನ್ನು(Dasara) ಮುಂದಿಟ್ಟುಕೊಂಡು ರಾಜಕಾರಣ ಮಾಡುವುದು ಸಿದ್ದರಾಮಯ್ಯನವರಿಗೆ ಹೊಸದೇನಲ್ಲ. ಹಾಗಾಗಿ ಕೂಡಲೇ ಹಿಂದೂ ಧಾರ್ಮಿಕ ಪದ್ಧತಿಗಳಲ್ಲಿ ನಂಬಿಕೆ ಇರುವವರನ್ನು ದಸರಾ ಉದ್ಘಾಟನೆಗೆ ಆಯ್ಕೆಮಾಡಬೇಕು ಎಂದು ಜಾಗರಣ ವೇದಿಕೆಯವರು ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಶ್ರೀನಿವಾಸ್ ಮಸ್ಕಲ್, ಮಂಜು ಹಾಜರಿದ್ದರು.
