Chitradurga news | nammajana.com | 02-08-2025
ನಮ್ಮಜನ.ಕಾಂ,ಚಿತ್ರದುರ್ಗ: ಹೊಳಲ್ಕೆರೆ ತಾಲ್ಲೂಕು(village meeting ) ವ್ಯಾಪ್ತಿಯಲ್ಲಿ ಬರುವ ಗಣಿಬಾಧಿತ ಪ್ರದೇಶದ ಹಳ್ಳಿಗಳಲ್ಲಿ ಅರ್ಹ ವಸತಿ, ನಿವೇಶನ ರಹಿತರನ್ನು ಆಯ್ಕೆ ಮಾಡಲು ಉದ್ದೇಶಿಸಲಾಗಿದ್ದು, ಇದಕ್ಕಾಗಿ ಆಗಸ್ಟ್ 11 ರಿಂದ 22 ರವರೆಗೆ ಗ್ರಾಮ ಸಭೆಗಳನ್ನು ಹಳ್ಳಿಗಳಲ್ಲಿ ಕೈಗೊಳ್ಳಲು ದಿನಾಂಕ ನಿಗದಿಪಡಿಸಲಾಗಿದೆ.
ಇದನ್ನೂ ಓದಿ: ಕುಡಿಯುವ ನೀರಿಗಾಗಿ ಶಾಲಾ ಮಕ್ಕಳು ಪ್ರತಿಭಟನೆ

ಮೊದಲ ಆದ್ಯತೆಯಾಗಿ ಹೊಳಲ್ಕೆರೆ ತಾಲ್ಲೂಕಿನ 5 ಕಿ.ಮೀ. ವ್ಯಾಪ್ತಿಗೆ ಬರುವ ಗಣಿ ಬಾಧಿತ ಪ್ರದೇಶದ ಚಿತ್ರಹಳ್ಳಿ, ಆಡನೂರು, ಉಪ್ಪರಿಗೇನಹಳ್ಳಿ, ಹೆಚ್.ಡಿ. ಪುಯರ, ಗುಂಜಿಗನೂರು, ಟಿ. ನುಲೇನೂರು, ತೇಕಲವಟ್ಟಿ ಮತ್ತು ತಾಳ್ಯ ಗ್ರಾಮ ಪಂಚಾಯತಿಡಿ ಬರುವ ಹಳ್ಳಿಗಳಲ್ಲಿ ಆಗಸ್ಟ್ 11 ರಿಂದ 22 ರವರೆಗೆ ಗ್ರಾಮ ಸಭೆಗಳನ್ನು ಆಯೋಜಿಸಲು ದಿನಾಂಕ ನಿಗದಿಪಡಿಸಲಾಗಿದೆ.
ಗ್ರಾಮ ಸಭೆಗಳ ದಿನಾಂಕದ ವಿವರ ಇಂತಿದೆ
ಚಿತ್ರಹಳ್ಳಿ ಗ್ರಾ.ಪಂ. ವ್ಯಾಪ್ತಿಯಲ್ಲಿ(village meeting) ಆ. 11 ರಂದು ಕೇಶವಾಪುರ, 12 ರಂದು ಹನುಮನಕಟ್ಟೆ, 13 ರಂದು ಅಮೃತಾಪುರ. ಆಡನೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಆ. 13 ರಂದು ಅರಸಘಟ್ಟ, 14 ರಂದು ಮೇಕೆನಹಟ್ಟಿ. ಉಪ್ಪರಿಗೇನಹಳ್ಳಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಆ. 16 ರಂದು ಬೂದಿಪುರ, 18 ರಂದು ಗೂಳಿಹೊಸಹಳ್ಳಿ, 19 ರಂದು ಹಾಲೇನಹಳ್ಳಿ.
ಹೆಚ್.ಡಿ.ಪುರ ಗ್ರಾ.ಪಂ. ವ್ಯಾಪ್ತಿಯಲ್ಲಿ ಆ. 16 ರಂದು ಬೋರೆನಹಳ್ಳಿ, 18 ರದು ಪಂಪಾಪುರ, 19 ರಂದು ರಾಮೇನಹಳ್ಳಿ, 20 ರಂದು ನೆಲ್ಲಿಕಟ್ಟೆ, 21 ರಂದು ಮತ್ತಿಘಟ್ಟ, 22 ರಂದು ಕಸವನಹಳ್ಳಿ. ಆ. 14 ರಂದು ಗುಂಜಿಗನೂರು ಗ್ರಾ.ಪಂ.ನ ಚಿಕ್ಕಂದವಾಡಿ. ಟಿ. ನುಲೇನೂರು ಗ್ರಾ.ಪಂ. ನಲ್ಲಿ ಆ. 18 ರಂದು ದಗ್ಗೆ, ಆ. 19 ರಂದು ಬಂಜೆಗೊಂಡನಹಳ್ಳಿ. ಆ. 20 ರಂದು ತೇಕಲವಟ್ಟಿ ಗ್ರಾ.ಪಂ.ನ ಕಣಿವೆಜೋಗಿಹಳ್ಳಿ ಹಾಗೂ ತಾಳ್ಯ ಗ್ರಾ.ಪಂ. ವ್ಯಾಪ್ತಿಯಲ್ಲಿ ಆ. 13 ರಂದು ವೆಂಕಟೇಶಪುರ ಮತ್ತು ಆ. 14 ರಂದು ಕುಮ್ಮಿನಘಟ್ಟ ಗ್ರಾಮದಲ್ಲಿ ಗ್ರಾಮ ಸಭೆ ನಡೆಯಲಿದೆ.
ಇದನ್ನೂ ಓದಿ: ಒಳಮೀಸಲಾತಿ ಜಾರಿ ಖಚಿತ : ಮಾಜಿ ಸಚಿವ ಎಚ್.ಆಂಜನೇಯ
ಈ ಗ್ರಾಮಗಳ ವ್ಯಾಪ್ತಿಯಲ್ಲಿ ಬರುವ(village meeting) ವಸತಿ, ನಿವೇಶನ ರಹಿತ ಅರ್ಹ ಫಲಾನುಭವಿಗಳು ನಿಗದಿಪಡಿಸಿದ ಗ್ರಾಮ ಸಭೆಗಳ ದಿನಾಂಕದಂದು ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೊಳಲ್ಕೆರೆ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು ತಿಳಿಸಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252