Chitradurga news|Nammajana.com|5-10-2025
ನಮ್ಮಜನ.ಕಾಂ, ಚಳ್ಳಕೆರೆ: ಚಿತ್ರದುರ್ಗದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ದಾವಣಗೆರೆ ವಿಶ್ವವಿದ್ಯಾಲಯ ಅಂತರ್‌ಕಾಲೇಜು ಪುರುಷರ ಹಾಕಿಪಂದ್ಯದಲ್ಲಿ ಚಳ್ಳಕೆರೆಯ ಎಚ್‌ಪಿಪಿಸಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಕ್ರೀಡಾಪಟುಗಳು ದ್ವಿತೀಯಸ್ಥಾನಪಡೆಯುವ ಮೂಲಕ (Davangere University) ಕಾಲೇಜಿಗೆ ಕೀರ್ತಿತಂದಿದ್ದು, ಕಾಲೇಜು ಎಸ್‌ಡಿಎಂಸಿ ಅಧ್ಯಕ್ಷ, ಶಾಸಕ ಟಿ.ರಘುಮೂರ್ತಿ ಹಾಗೂ ಪ್ರಾಂಶುಪಾಲ ಡಾ.ಎಂ.ಕೆ.ದೇವಪ್ಪ ವಿಜೇತರಾದ ಎಲ್ಲಾ ಕ್ರೀಡಾಪಟುಗಳಿಗೆ ಅಭಿನಂದನೆ ಸಲ್ಲಿಸಿದ್ಧಾರೆ.

ಕಾಲೇಜಿನ ದೈಹಿಕಶಿಕ್ಷಣನಿರ್ದೇಶಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಉತ್ತಮ ಆಟಪ್ರದರ್ಶಿಸಿದ್ಧಾರೆ. ಹಾಕಿಪಂದ್ಯದಲ್ಲಿ (Davangere University) ಗೆಲುವು ಸಾಧಿಸಲು ಹೆಚ್ಚು ಶ್ರಮವಹಿಸಿದ್ಧಾರೆ.
ವಿದ್ಯಾರ್ಥಿಗಳು ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ಧಾರೆ. ಪಂದ್ಯದ ನಂತರ ಗೆಲುವು ಸಾಧಿಸಿದ ವಿದ್ಯಾರ್ಥಿಗಳು ಟ್ರೋಪಿ ಹಾಗೂ ಪ್ರಶಸ್ತಿ ಪತ್ರವನ್ನು ಪಡೆದರು.
ಇದನ್ನೂ ಓದಿ: Socialist Party | ಅಕ್ಟೋಬರ್ 11,12 ಕ್ಕೆ ಚಿತ್ರದುರ್ಗಕ್ಕೆ ಮಾಜಿ ಸಿಎಂ ಅಖಿಲೇಶ್ ಯಾದವ್ ಆಗಮನ
ಈ ಸಂದರ್ಭದಲ್ಲಿ ಚಿತ್ರದುರ್ಗದ ಸರ್ಕಾರಿ ಪ್ರಥಮ ದರ್ಜೆ (Davangere University) ಕಾಲೇಜು ಪ್ರಾಂಶುಪಾಲ ಡಾ.ಕರಿಯಪ್ಪಮಾಳಿಗೆ, ಮಾಜಿದೈಹಿಕ ನಿರ್ದೇಶಕ ಎಚ್.ತಿಪ್ಪೇಸ್ವಾಮಿ, ಪ್ರಾಧ್ಯಾಪಕರಾದ ವೆಂಕಟೇಶ್, ಮುಜೀಬುಲ್ಲಾ, ಲೀಲಾವತಿ, ಜಮುನರಾಣಿ ಮುಂತಾದವರು ಅಭಿನಂದಿಸಿದರು.
