
Chitradurga news|nammajana.com|7-8-2024
ನಮ್ಮಜನ.ಕಾಂ, ಚಿತ್ರದುರ್ಗ: ಪರೀಕ್ಷೆ ಎಂದರೆ ಪ್ರಶ್ನೆ ಪತ್ರಿಕೆ ಕೊಡುವುದು ಸಾಮಾನ್ಯ, ಪ್ರಶ್ನೆ ಪತ್ರಿಕೆ ಕೊಟ್ಟ ತಕ್ಷಣ (Davangere University) ವಿದ್ಯಾರ್ಥಿಗಳು ನಾನು ಓದಿಕೊಂಡಿದ್ದು ಬರ್ಲಪ್ಪ ಅಂತ ದೇವರ ಹತ್ತಿರ ಬೇಡಿಕೊಳ್ಳತ್ತಿರ್ತಾರೆ, ಆದರೆ ಇಲ್ಲಿ ವಿಶೇಷ ಎಂದರೆ ಪ್ರಶ್ನೆ, ಉತ್ತರ ಎರಡು ಒಟ್ಟಿಗೆ ಇರುವ ಪತ್ರಿಕೆಗಳನ್ನು ಇ-ಕಾಮರ್ಸ್ ವಿದ್ಯಾರ್ಥಿಗಳಿಗೆ ಕೊಡುತ್ತಿದ್ದಂತೆ ವಿದ್ಯಾರ್ಥಿಗಳು ಶಾಕ್ ಆಗಿರುವ ಘಟನೆ ಮಂಗಳವಾರ ಚಿತ್ರದುರ್ಗ–ದಾವಣಗೆರೆ ಪದವಿ ವಿಭಾಗದಲ್ಲಿ ನಡೆದಿದೆ.
ಅಂತಿಮ ವರ್ಷದ ವಾಣಿಜ್ಯ ವಿಭಾಗದ ಇ- ಕಾಮರ್ಸ್ ಪತ್ರಿಕೆಗೆ ಮಂಗಳವಾರ ದಾವಣಗೆರೆ ವಿಶ್ವವಿದ್ಯಾನಿಲಯದಿಂದ (Davangere University) ನಡೆಯಬೇಕಿದ್ದ 6 ನೇ ಸೆಮಿಸ್ಟರ್ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆಗಳ ಬದಲಿಗೆ ಬೋರ್ಡ್ ಆಫ್ ಎಕ್ಸಾಮಿನೇಷನ್ (BOA) ಅಧಿಕಾರಿ, ಸಿಬ್ಬಂದಿ ನಿರ್ಲಕ್ಷ್ಯದಿಂದಾಗಿ ಸ್ತ್ರೀಂ ಆಫ್ ವ್ಯಾಲುವೇಷನ್ ಪತ್ರಿಕೆ ನೀಡಿದ್ದ ಆಚಾತುರ್ಯದಿಂದ ಈಗ ಪರೀಕ್ಷೆಯನೇ ಮುಂದೂಡಲಾಗಿದೆ.

ದಾವಣಗೆರೆ ವಿಶ್ವವಿದ್ಯಾನಿಲಯ ವ್ಯಾಪ್ತಿಯ ದಾವಣಗೆರೆ, ಚಿತ್ರ ದುರ್ಗ ಜಿಲ್ಲೆಗಳ 15 ಪದವಿ ಕಾಲೇಜುಗಳ ಅಂತಿಮ ವರ್ಷದ ವಾಣಿಜ್ಯ ವಿಭಾಗದ ಸುಮಾರು 500 ರಿಂದ 600 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಆದರೆ ಪಕ್ಕ ಪರೀಕ್ಷೆ ಬರೆಯಲು ಹಗಲಿರುಳು ಓದಿ ಅಭ್ಯಾಸ ಮಾಡಿಕೊಂಡು ಸನ್ನದ್ದರಾಗಿ (Davangere University) ಬಂದಿದ್ದ ವಿದ್ಯಾರ್ಥಿಗಳು ತಮ್ಮದಲ್ಲದ ತಪ್ಪಿಗೆ, ಇ-ಕಾಮರ್ಸ್ ಪರೀಕ್ಷೆ ದಿನಾಂಕ ಮಂದೂಡಿದ್ದು ಈಗ ಮರುದಿನಾಂಕಕ್ಕೆ ವಿದ್ಯಾರ್ಥಿಗಳು ಎದುರು ನೋಡುವ ಸಂಕಷ್ಟ ಪರಿಸ್ಥಿತಿ ಎದುರಾಗಿದೆ.
ದಾವಣಗೆರಡ ವಿಶ್ವ ವಿದ್ಯಾಲಯ ಅಂತಿಮ ವರ್ಷದ ವಾಣಿಜ್ಯ ವಿದ್ಯಾರ್ಥಿಗಳಿಗೆ 6 ನೇ ಸೆಮಿಸ್ಟರ್‌ನ ಇ-ಕಾಮರ್ಸ್ ಪತ್ರಿಕೆಗೆ ಪರೀಕ್ಷೆಗೆ ಕ್ಷಣಗಣನೆ ಶುರುವಾಗಿತ್ತು. ಆದರೆ, ವಿ.ವಿ. ಯ (Davangere University) ಬೋರ್ಡ್ ಆಫ್ ಎಕ್ಸಾಮಿನೇಷನ್ ನಿಂದ ಪ್ರಶ್ನೆಪತ್ರಿಕೆಗಳು ಸೀಲ್ ಆಗಿ, ಮುಚ್ಚಿದ ಲಕೋಟೆಯಲ್ಲಿ ಕಾಲೇಜುಗಳಿಗೆ ತಲುಪಿಸಲಾಗಿತ್ತು.
ಆದರೆ ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿಗಳಿಗೆ ಪ್ರಶ್ನೆಪತ್ರಿಕೆಯೆಂದು ಕೈಗಿಟ್ಟರೆ, ಅದು ಆಫ್ ವ್ಯಾಲ್ಯುವೇಷನ್ ಪತ್ರಿಕೆಗಳಾಗಿತ್ತು. ಈ ಅಚಾತುರ್ಯ ಕಂಡ ಪರೀಕ್ಷಾ ಕೊಠಡಿ ಮೇಲ್ವಿಚಾರಕರು, ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು ತಕ್ಷಣ (Davangere University) ವಿಷಯವನ್ನು ದಾವಣಗೆರೆ ವಿ.ವಿ.ಪರೀಕ್ಷಾಂಗ ಕುಲಸಚಿವರ ಗಮನಕ್ಕೆ ತಂದಿದ್ದಾರೆ.
ಚಿತ್ರದುರ್ಗ-ದಾವಣಗೆರೆ 15 ಪದವಿ ಕಾಲೇಜುಗಳಿಗೆ ಕಿರಿಕಿರಿ. (Davangere University)
ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳ 15 ಪದವಿಕಾಲೇಜುಗಳಲ್ಲಿ ಬೆಳಗ್ಗೆ 10 ಗಂಟೆಗೆ ಪರೀಕ್ಷೆ ಶುರುವಾಗಿತ್ತು. ಆದರೆ, ಪದವಿ ವಿದ್ಯಾರ್ಥಿಗಳು ತಮಗೆ ಪ್ರಶ್ನೆಪತ್ರಿಕೆ ಮಾತ್ರವಲ್ಲದೇ, ಉತ್ತರದ (Davangere University) ಸಮೇತ ಪ್ರಶ್ನೆಪತ್ರಿಕೆ ಕೈಗೆ ಬಂದಿದ್ದನ್ನು ಕಂಡು ಒಂದು ಕ್ಷಣ ವಿದ್ಯಾರ್ಥಿಗಳ ದಂಗಾಗಿದ್ದಾರೆ. ಬಿಪಿಇ ಅಧಿಕಾರಿ, ಸಿಬ್ಬಂದಿ ಎಡವಟ್ಟಿನಿಂದ ಆದ ಗಂಭೀರ ಪ್ರಮಾದವನ್ನು ತಕ್ಷಣವೇ ದಾವಿವಿ ಗಮನಕ್ಕೆ ತಂದಿದ್ದರಿಂದ ಪರೀಕ್ಷೆ ರದ್ದುಗೊಳಿಸಿ ಮುಂದಿನ ದಿನಾಂಕ ತಿಳಿಸುವುದಾಗಿ ತಿಳಿಸಿದ್ದಾರೆ.
ಬಿಕಾಂ ಇ-ಕಾಮರ್ಸ್ ಆಫ್ ವ್ಯಾಲುವೇಷನ್ ಪತ್ರಿಕೆ. (Davangere University)
ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳಲ್ಲಿ ದಾವಿವಿಗೆ ಒಳಪಡುವ ಒಟ್ಟು 90 ಕಾಲೇಜು ಇವೆ. ಈ ಪೈಕಿ 15 ಕಾಲೇಜುಗಳಲ್ಲಿ ಇ ಕಾಮರ್ಸ್ ಆಫ್ ವ್ಯಾಲುವೇಷನ್ ಪತ್ರಿಕೆಗಳು ವಿದ್ಯಾರ್ಥಿಗಳ ಕೈಗೆ ತಲುಪಿದ್ದರಿಂದ ಇಷ್ಟೆಲ್ಲಾ ಗೊಂದಲಏರ್ಪಟ್ಟಿದೆ. ದಾವಣಗೆರೆ (Davangere University) ವಿ.ವಿಪ್ರಶ್ನೆಪತ್ರಿಕೆಗಳನ್ನು ಸೆಟ್ ಮಾಡಿದನಂತರ ಅವುಗಳನ್ನು ಪ್ರಿಂಟ್ ಮಾಡಿಸಲುಬೋರ್ಡ್ ಆಫ್ ಎಕ್ಸಾಮಿನೇಷನ್‌ಗೆ ನೀಡುತ್ತದೆ. ಪ್ರಶ್ನೆಪತ್ರಿಕೆ ಜೊತೆಗೆ ಮೌಲ್ಯ ಮಾಪನ ಮಾಡುವ ಬೋಧಕರಿಗೂ ಸ್ವೀಂ ಆಫ್ ವ್ಯಾಲ್ಯುವೇಷನ್ ಸಹ ಮುಂಚಿತವಾಗಿ, ಪ್ರಶ್ನೆಪತ್ರಿಕೆ ಜೊತೆಗೆ ಮಾಡಿಸಿದ್ದೇ ಇಷ್ಟೆಲ್ಲಾ ಗೊಂಪಲ ಲ ಲದಲ, ಎಡವಟ್ಟುಗಳಿಗೆ ಕಾರಣ ಎನ್ನಲಾಗುತ್ತಿದೆ.
ವಿದ್ಯಾರ್ಥಿಗಳ ಪೋಷಕರಿಂದ ಅಸಮಾಧಾನ (Davangere University)
ವಿವಿ ವ್ಯಾಪ್ತಿಯ ಎರಡೂ ಜಿಲ್ಲೆಯಲ್ಲಿ ಇ-ಕಾಮರ್ಸ್ ಪರೀಕ್ಷೆ ಮುಂದೂಡಲಾಗಿದೆ. ಸಿಬ್ಬಂದಿ ಗೊಂದಲದಿಂದಾಗಿ ಪರೀಕ್ಷೆಯನ್ನು ಮುಂದೂಡಲಾಗಿದೆ. ಇದ್ದರಿಂದ ವಿದ್ಯಾರ್ಥಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಪೋಷಕರು ಸಹ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಆಗಿರುವ ಪ್ರಮಾದವನ್ನು ದಾವಣಗೆರೆ ವಿಶ್ವವಿದ್ಯಾ ನಿಲಯ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ.(Davangere University) ಪ್ರಶ್ನೆಪತ್ರಿಕೆ ಸಿದ್ದಗೊಂಡ ನಂತರ ಮುಚ್ಚಿದ ಲಕೋಟೆಯಲ್ಲಿ ಸೀಲ್ ಮಾಡಲಾದ ಪ್ರಶ್ನೆಪತ್ರಿಕೆಗಳ ಕವರ್ ಕಳಿಸುವ ವೇಳೆ ನಿರ್ಲಕ್ಷ್ಯ ತೋರಿದ್ದರಿಂದ ಪರೀಕ್ಷೆ ಮುಂದೂಡಬೇಕಾದ ಸ್ಥಿತಿ ಬಂದೊದಗಿದೆ ಎಂದು ಹೇಳಲಾಗಿದೆ.
ಬಾಕ್ಸ್
ದಾವಣಗೆರೆ ವಿಶ್ವವಿದ್ಯಾನಿಲಯದ ಬಿ.ಕಾಂ. ಅಂತಿಮ ವರ್ಷದ ಇ-ಕಾಮರ್ಸ್ ಪತ್ರಿಕೆ ಪರೀಕ್ಷೆ ಅ.6ರಂದು ನಡೆಯಬೇಕಿತ್ತು. ಆದರೆ, ತಾಂತ್ರಿಕ ಕಾರಣಗಳಿಂದ ತೊಂದರೆಯಾದ ಹಿನ್ನೆಲೆ ಪರೀಕ್ಷೆ ಮುಂದೂಡಲಾಗಿದೆ. ಮುಂದೂಡಿದ ಪರೀಕ್ಷೆಯ ದಿನಾಂಕವನ್ನು ಶೀಘ್ರವೇ ತಿಳಿಸಲಾಗುವುದು. ಅಂತಿಮ ವರ್ಷದ ಇ-ಕಾಮರ್ಸ್ ಪರೀಕ್ಷೆ ಬರೆಯಬೇಕಿದ್ದ ವಿದ್ಯಾರ್ಥಿಗಳಿಗೆ ಆಗಿರುವ ತೊಂದರೆಗೆ ದಾವಿವಿ ವಿಷಾದಿಸುತ್ತದೆ
• ಪ್ರೊ.ಸಿ.ಕೆ.ರಮೇಶ ಪರೀಕ್ಷಾಂಗ ಕುಲಸಚಿವ, ದಾವಿವಿ (Davangere University)
