
Chitradurga news |nammajana.com |11-9-2024
ನಮ್ಮಜನ.ಕಾಂ, ಚಿತ್ರದುರ್ಗ: ಚಿತ್ರದುರ್ಗ ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್ (DCCB) ಚುನಾವಣೆಯಲ್ಲಿ 200 ಸೊಸೈಟಿಗಳ ಅನರ್ಹತೆ ಪ್ರಕರಣಕ್ಕೆ ಕೋರ್ಟ್ ಮೆಟ್ಟಿಲು ಹತ್ತಿದ ಚಳ್ಳಕೆರೆ (DCC Bank Election) ಶಾಸಕ ಟಿ.ರಘುಮೂರ್ತಿ ಅವರ ಪ್ರಕರಣ ಕುರಿತು ಇಂದು ತೀರ್ಪು ಹೊರ ಬಿದ್ದಿದ್ದು ಕೋರ್ಟ್ ಅನಹರ್ತೆ ತಿರ್ಮಾನ ಸರಿ ಇದೆ ಎಂದು ತೀರ್ಪು ನೀಡಿದೆ.
ಡಿಸಿಸಿ ಬ್ಯಾಂಕ್ ಚುನಾವಣೆ ದಿನಾಂಕ 12-9-2024 ಗುರುವಾರ ನಿಗದಿಯಾಗಿದ್ದು ಚುನಾವಣೆ ಕಣದಲಿದ್ದ ಶಾಸಕ (DCC Bank Election) ಟಿ.ರಘುಮೂರ್ತಿ ಅವರು ಕೋರ್ಟ್ ತೀರ್ಪಿನಿಂದ ಚುನಾವಣೆ ಕಣದಿಂದ ಅನರ್ಹತೆಯಾಗಿದ್ದಾರೆ.

ಕಳೆದ ಬಾರಿ ನಿರ್ದೇಶಕ ಸ್ಥಾನಕ್ಕೆ ಆಯ್ಕೆಯಾಗಿದ್ದ ರಘುಮೂರ್ತಿ ಅವರು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಸಚಿವ ಸುಧಾಕರ್ ಅವರಿಗೆ ನೇರ ಸ್ಪರ್ಧೆ ಮಾಡುತ್ತಾರೆ ಎಂಬ ಮಾತು ಒಂದು ವರ್ಷದ ಹಿಂದೆ ಕೇಳಿ ಬರುತ್ತಿತ್ತು.
ಇದನ್ನೂ ಓದಿ: ಅಡಿಕೆ ಧಾರಣೆ | 11 ಸೆಪ್ಟೆಂಬರ್ 2024 | ಶಿವಮೊಗ್ಗ ಸೇರಿ ಇವತ್ತು ಎಲ್ಲೆಲ್ಲಿ ಎಷ್ಟಿದೆ ಅಡಿಕೆ ರೇಟ್ ? Adike Rate
ಆದರೆ ಈ ಎಲ್ಲಾ ಗಮನಿಸಿದ ರಾಜ್ಯದಲ್ಲಿ ಎಲ್ಲೂ ಸಹ ಸ್ವಯಂ ಕೋರ್ಟ್ ಮೆಟ್ಟಿಲು ಏರಿ ಸೊಸೈಟಿಗಳನ್ನು ಅನರ್ಹತೆ ಮಾಡಿದ ಉದಾಹರಣೆಗೆ ಇಲ್ಲ. ಚುನಾವಣೆ ಇಷ್ಟು ವರ್ಷ ಸಹ ತಣ್ಣಗಿದ್ದು ಅನರ್ಹತೆ ಮಾತಾಡದೇ ನೇರವಾಗಿ ಚುನಾವಣೆ ಸಂದರ್ಭದಲ್ಲಿ (DCC Bank Election) ಅದು ತನ್ನದೇ ಪಕ್ಷದ ಶಾಸಕ ಪ್ರತಿನಿಧಿಸುವ ಸಹಕಾರಿ ಸಂಘ ಸೇರಿ 200 ಸೊಸೈಟಿ ಅನರ್ಹತೆ ಮಾಡಿದ್ದರಿಂದ ಸುಧಾಕರ್ v/s ರಘುಮೂರ್ತಿ ಎರಡು ಬಣಗಳಾಗಿ ಜಿಲ್ಲೆಯಲ್ಲಿ ಹೊಸ ರಾಜಕೀಯ ಪ್ರಾರಂಭವಾಗಿದೆ.
