
Chitradurga news |nammajana.com|17-12-2024
ನಮ್ಮಜನ.ಕಾಂ, ಚಳ್ಳಕೆರೆ: ತಾಲ್ಲೂಕಿನ ಪರಶುರಾಮಪುರ ಹೋಬಳಿಯ ಪಗಡಲಬಂಡೆ ಗ್ರಾಮದಲ್ಲಿ ಸ್ನೇಹಿತ (Death young man) ಮದುವೆಯಲ್ಲಿ ಪಾಲ್ಗೊಂಡು ಸಂಭ್ರಮದಿಂದ ಡಿಜೆ ಸದ್ದಿಗೆ ಕುಣಿಯುತ್ತಿದ್ದ ಆದರ್ಶ(25)ಯುವಕ ದಿಢೀರ್ ಕುಸಿದು ಬಿದ್ದು ಮೃತಪಟ್ಟಿರುತ್ತಾನೆ.
ಇದನ್ನೂ ಓದಿ: Electric Scooty | ಚಾರ್ಜಿಂಗ್ ವೇಳೆಯಲ್ಲಿ ಬೆಂಕಿ | ಧಗ ಧಗನೇ ಹೊತ್ತಿ ಉರಿದ ಓಲೋ ಎಲೆಕ್ಟ್ರಿಕ್ ಸ್ಕೂಟಿ

ಶನಿವಾರ ರಾತ್ರಿ ಗ್ರಾಮದಲ್ಲಿ ಸ್ನೇಹಿತ ಮದುವೆ ನಡೆಯುತ್ತಿದ್ದು, ಮದುವೆಯಲ್ಲಿ ಪಾಲ್ಗೊಂಡ ಆದರ್ಶ ಸಂತೋಷದಿಂದ ಡಿಜೆಯಿಂದ ಬರುತ್ತಿದ್ದ ಹಾಡುಗಳಿಗೆ ರಸ್ತೆಯುದ್ದಕ್ಕೂ (Death young man) ಕುಣಿದುಕುಪ್ಪಳಿಸುತ್ತಾ ಸಾಗಿದ್ದ. ಸ್ವಲ್ಪಹೊತ್ತಿನ ನಂತರ ನಿತ್ರಾಣಗೊಂಡು ಸ್ಥಳದಲ್ಲೇ ಕುಸಿದುಬಿದಿದ್ದ ಕೂಡಲೇ ಅವನನ್ನು ಪರಶುರಾಮಪುರ ಮತ್ತು ಚಳ್ಳಕೆರೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದಾಗ ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದರು. ಆದರ್ಶ ಸಾವಿನಿಂದ ಮದುವೆ ಮನೆಯಲ್ಲಿ ಸಂಭ್ರಮವೇ ಮಾಯವಾಗಿತ್ತು.