Chitradurga news | nammajana.com | 19-07-2025
ನಮ್ಮಜನ.ಕಾಂ,ಚಿತ್ರದುರ್ಗ: ಕರ್ತವ್ಯ ಲೋಪ ಹಾಗೂ ಹಣ ದುರುಪಯೋಗವೆಸಗಿರುವ ಹೊಸದುರ್ಗ ತಾಲೂಕು ಮಲ್ಲಪ್ಪನಹಳ್ಳಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ(PDO) ಉಮಾದೇವಿಯನ್ನು ಸೇವೆಯಿಂದ ಅಮಾನತ್ತುಗೊಳಿಸುವಂತೆ ಬಂಜಾರ (ಲಂಬಾಣಿ) ಸಮಾಜದಿಂದ ಜಿಲ್ಲಾಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿ ಕಾರಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.

ಇದನ್ನೂ ಓದಿ: ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ
ವರ್ಗ-1ರ ಹಣ ವಸೂಲಿ ಮಾಡಿ ಮೂರು ತಿಂಗಳ ನಂತರ ಬ್ಯಾಂಕ್‌ಗೆ ಜಮಾ ಮಾಡಲಾಗಿದೆ. ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗದೆ ಬೇಜವಾಬ್ದಾರಿ ಯಿಂದವರ್ತಿಸುತ್ತಿರುವುದು. ಮಾರ್ಗಸೂಚಿ ಪ್ರಕಾರ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಗ್ರಾಪಂ ವ್ಯಾಪ್ತಿಯಲ್ಲಿಯೇ ವಾಸಿಸಬೇಕು. ಚಿತ್ರದುರ್ಗದಿಂದ ದಿನವೂ ಪ್ರಯಾಣ ಮಾಡುತ್ತಿದ್ದಾರೆ. ಫೆ.15.2025 ರಂದು ಸಂತ ಸೇವಾಲಾಲ್ ಜಯಂತಿ ಆಚರಿಸದೆ ಬಂಜಾರ ಸಮಾಜವನ್ನು ಅಗೌರವಿಸಿದ್ದಾರೆ.
ಉದ್ಯೋಗ ಖಾತ್ರಿ ಯೋಜನೆಯಡಿ ಜೆಸಿಬಿಯಿಂದ ಕೆಲಸ ಮಾಡಿಸಿರುವು ದರಿಂದಬಡವರಿಗೆ ಉದ್ಯೋಗವಿಲ್ಲದಂತಾ ಗಿದೆ. ಪಂಚಾಯಿತಿ ಅಧ್ಯಕ್ಷರ ಗಮನಕ್ಕೆ ತಾರದೆ ಅನಗತ್ಯ ವಿಚಾರಗಳನ್ನುರೆಸೆಲ್ಯೂ ಷನ್ ಬುಕ್‌ನಲ್ಲಿ ಬರೆದು ಅಧ್ಯಕ್ಷರಿಗೆ ಬೆದರಿಕೆ ಹಾಕಿ ಸಹಿ ಮಾಡಿಸಿಕೊಂಡಿರುವ ಅಭಿವೃದ್ಧಿ ಅಧಿಕಾರಿ(PDO) ಉಮಾದೇವಿಯನ್ನು ಅಮಾನತ್ತು ಗೊಳಿಸುವಂತೆ ಈ ಹಿಂದೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಕ್ರಮ ಕೈಗೊಂಡಿಲ್ಲ.
ಹಾಗಾಗಿ ತಕ್ಷಣವೇ ಪಿಡಿಒ ಅವರನ್ನು ಅಮಾನತ್ತುಪಡಿಸಬೇಕು. ಇಲ್ಲವಾದಲ್ಲಿ ಬಂಜಾರ ಸಮಾಜದಿಂದ ಉಗ್ರ ಹೋರಾಟ ನಡೆಸಲಾಗುವುದೆಂದು ಎಚ್ಚರಿಸಿದರು.
ಇದನ್ನೂ ಓದಿ: ವಸತಿ ಶಾಲೆಗಳ 6ನೇ ತರಗತಿ ಪ್ರವೇಶಾತಿ | ಜು.21ರಂದು ಸೀಟು ಹಂಚಿಕೆ ಕೌನ್ಸಿಲಿಂಗ್
ಈ ವೇಳೆ ಪ್ರವೀಣ್ ನಾಯ್ಕ, ಕೃಷ್ಣನಾಯ್ಕ, ಕಲ್ಲೇಶ್, ಧನ್ಯ ಕುಮಾರ್, ಶಂಕರ್‌ನಾಯ್ಕ ಇದ್ದರು.
