Chitradurga News | Nammajana.com | 20-08-2025
ನಮ್ಮಜನ ನ್ಯೂಸ್ ಕಾಂ,ಹಿರಿಯೂರು: ಸದನದಲ್ಲಿ (Dharmapura) ಧರ್ಮಪುರ ಹೋಬಳಿಯನ್ನು ತಾಲೂಕು ಕೇಂದ್ರವನ್ನಾಗಿ ಮಾಡುವಂತೆ ಒತ್ತಾಯಿಸಲು ಕ್ಷೇತ್ರದ ಸಚಿವರಿಗೆ ಇಚ್ಛಾಶಕ್ತಿ ಕೊರತೆಯಿದೆ. ಹಾಗಾಗಿ ಧರ್ಮಪುರ ತಾಲೂಕು ಕೇಂದ್ರ ಜಾರಿಯ ಬಗ್ಗೆ ಮಾತನಾಡುತ್ತಿಲ್ಲ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಅಭಿನಂದನ ಆರೋಪಿಸಿದರು.
ಇದನ್ನೂ ಓದಿ: ಒಳಮೀಸಲಾತಿಗೆ ಸಚಿವ ಸಂಪುಟ ಒಪ್ಪಿಗೆ | ಎಡಗೈಗೆ 6 ಬಲಗೈಗೆ 6 ಉಳಿದವರಿಗೆ 5 | ಇಲ್ಲಿದೆ ಸಂಪೂರ್ಣ ಡಿಟೈಲ್

ತಾಲೂಕಿನ ಧರ್ಮಪುರ ಗ್ರಾಮದಲ್ಲಿ ಮಂಗಳವಾರ ಹೋಬಳಿಯ ಜನರ ಜೊತೆ ಸಭೆ ನಡೆಸಿ ಅವರು ಮಾತನಾಡಿದರು.
ಸದನದಲ್ಲಿ ಪಕ್ಷದ ತಾಲೂಕಿನ ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಅವರು ಪರಶುರಾಮಪುರವನ್ನು ತಾಲೂಕು ಕೇಂದ್ರವನ್ನಾಗಿ ಮಾಡಬೇಕು ಎಂದು ಸಭಾಪತಿಗಳಿಗೆ ಮನವಿ ಮಾಡಿದ್ದಾರೆ. ಆದರೆ ನಮ್ಮ ಹಿರಿಯೂರಿನ ಸಚಿವರು ಧರ್ಮಪುರದ ಬಗ್ಗೆ ಯಾವುದೇ ಮಾತನಾಡದೆ ಸುಮ್ಮನೆ ಕುಳಿತಿರುವುದು ನಮ್ಮನ್ನು ದಿಗ್ಟಮೆಗೊಳಿಸಿದೆ. ಧರ್ಮಪುರವನ್ನು ತಾಲೂಕು ಮಾಡುವ ಬಗ್ಗೆ ಸದನದಲ್ಲಿ ಧ್ವನಿ ಎತ್ತದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಉಗ್ರವಾಗಿರುತ್ತದೆ ಎಂದು ಎಚ್ಚರಿಸಿದರು.
ಚುನಾವಣೆ ಸಂದರ್ಭದಲ್ಲಿ ಧರ್ಮಪುರವನ್ನು ತಾಲೂಕು ಕೇಂದ್ರವನ್ನಾಗಿ ಮಾಡಲಾಗುವುದು ಎಂದು ಈ ಭಾಗದ ಜನರಿಗೆ ಭರವಸೆ ನೀಡಿ ಮತವನ್ನು ಹಾಕಿಸಿಕೊಂಡು ಗೆದ್ದಿರುವ ಸಚಿವರು ಈ ಭಾಗದ ಜನರ ಋಣವನ್ನು ತೀರಿಸಬೇಕು ಎಂದು ಹೇಳಿದರು.
ಧರ್ಮಪುರದಲ್ಲಿ ಧರ್ಮಪುರವನ್ನು ತಾಲೂಕು ಕೇಂದ್ರವನ್ನಾಗಿಸುವಂತೆ ಆಗ್ರಹಿಸಿ ಬಿಜೆಪಿಯಿಂದ ಸಭೆ ನಡೆಸಲಾಯಿತು
1974ರ ಕರ್ನಾಟಕ ಮರು ವಿಂಗಡಣಾ(Dharmapura) ಸಮಿತಿ, ಕೊಲ್ಕತ್ತಾ ಅಂಕಿ ಅಂಶ ಆಯೋಗ, ವಾಸುದೇವರಾವ್ ಸಮಿತಿ, ಗದ್ದಿಗೌಡರ್‌ಸಮಿತಿಗಳು ಧರ್ಮಪುರವನ್ನು ತಾಲೂಕು ಮಾಡಬಹುದು ಎಂದು ಶಿಫಾರಸ್ಸುಮಾಡಿವೆ. ಅಂದಿನಿಂದ ಇಂದಿನವರೆಗೂ ಹೋರಾಟ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ ಸಚಿವರು ಕೂಡಲೇ ಧರ್ಮಪುರವನ್ನು ತಾಲೂಕು ಕೇಂದ್ರ ಮಾಡು ವಂತೆ ಸದನದಲ್ಲಿ ಒತ್ತಾಯಿಸಬೇಕು ಎಂದರು.
ಇದನ್ನೂ ಓದಿ: ಭರಮಸಾಗರ | ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನ
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಯಲ್ಲಪ್ಪ, ಶಿವಮೂರ್ತಿ, ನಾಗರಾಜರಾವ್, ರೈತ ಹೋರಾಟಗಾರ ತಿಪ್ಪೇಸ್ವಾಮಿ, ಬಿಜೆಪಿ ಯುವ ನಾಯಕರಾದ ಗಿರೇಶ್, ರವಿಶಂಕರ್, ರಂಗಸ್ವಾಮಿ, ಈರಣ್ಣ, ರಾಕೇಶ್, ಗುರುಲಿಂಗಪ್ಪ, ದಿಲೀಪ್, ದ್ಯಾಮಣ್ಣ, ಬಸವರಾಜ್, ರವಿಕುಮಾರ್‌ಸೇರಿದಂತೆ ಪಕ್ಷದ ಅನೇಕ ಕಾರ್ಯಕರ್ತರು, ರೈತ ಹೋರಾಟಗಾರರು ಉಪಸ್ಥಿತರಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252