Chitradurga News | Nammajana.com |15-09-2025
ನಮ್ಮಜನ ನ್ಯೂಸ್ ಕಾಂ,ಹೊಳಲ್ಕೆರೆ: ಅನೇಕ(Democracy) ದೇಶಗಳಲ್ಲಿ ಸರ್ಕಾರಗಳು ಬದಲಾಗುವುದನ್ನು ನೋಡಿದ್ದೇವೆ. ಅದೇ ನಮ್ಮ ಭಾರತದಲ್ಲಿ ಪ್ರಜಾಪ್ರಭುತ್ವ ಶಕ್ತಿಶಾಲಿಯಾಗಿದೆ ಎಂದು ಶಾಸಕ ಡಾ.ಎಂ.ಚಂದ್ರಪ್ಪ ಹೇಳಿದರು.

ಇದನ್ನೂ ಓದಿ: Chitradurga today Gold Rate | ಬಂಗಾರದ ಬೆಲೆಯಲ್ಲಿ ಇಳಿಕೆ
ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಡಾ.ಬಿ.ಅಂಬೇಡ್ಕರ್‍ರವರ ಸಂವಿಧಾನ ಪೀಠಿಕೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
ನಮ್ಮ ರಾಜ್ಯದ ಎಲ್.ಜಿ.ಹಾವನೂರ್‍ರವರನ್ನು ನೆಲ್ಸನ್ ಮಂಡೇಲ ದಕ್ಷಿಣ ಆಫ್ರಿಕಾಕ್ಕೆ ಕರೆಸಿಕೊಂಡು ಭಾರತದಲ್ಲಿರುವ ಸಂವಿಧಾನದಂತೆ ನಮ್ಮ ದೇಶದಲ್ಲಿಯೂ ರಚಿಸುವಂತೆ ಕೇಳಿಕೊಳ್ಳುತ್ತಾರೆ. ಯಾವುದೇ ಸರ್ಕಾರವಿರಲಿ, ಪ್ರಜೆಗಳಿಂದ, ಪ್ರಜೆಗಳಿಗೋಸ್ಕರ, ಪ್ರಜೆಗಳಿಗಾಗಿ ಎನ್ನುವುದು ಸಂವಿಧಾನದಲ್ಲಿ ಉಲ್ಲೇಖಿಸಲಾಗಿದೆ.
ಎಲ್ಲಾ ಜಾತಿ ಧರ್ಮದವರಿಗೂ ಸಂವಿಧಾನದಲ್ಲಿ ಸಮಾನತೆ ನೀಡಿರುವುದರಿಂದ ನಮ್ಮ ದೇಶದ ಪ್ರಜಾಪ್ರಭುತ್ವ ಗಟ್ಟಿಯಾಗಿದೆ ಎಂದು ತಿಳಿಸಿದರು.
ಡಾ.ಬಿ.ಆರ್.ಅಂಬೇಡ್ಕರ್‍ರವರು ಕೊಟ್ಟಿರುವ ಭಾರತದ ಸಂವಿಧಾನವನ್ನು ಇಡಿ ವಿಶ್ವವೇ ಮೆಚ್ಚಿಕೊಂಡಿದೆ. ಮೂರನೆ ಬಾರಿಗೆ ದೇಶದ ಪ್ರಧಾನಿಯಾಗಿರುವ ನರೇಂದ್ರಮೋದಿರವರು ಪ್ರಜಾಪ್ರುಭತ್ವಕ್ಕನುಗುಣವಾಗಿ ಆಡಳಿತ ನಡೆಸುತ್ತಿರುವುದರಿಂದ ಮುಂದುವರೆದ ದೇಶಗಳು ನಮ್ಮ ದೇಶದ ಬಗ್ಗೆ ಅತ್ಯಂತ ಗೌರವವನ್ನಿಟ್ಟುಕೊಂಡಿವೆ.
ಇದನ್ನೂ ಓದಿ: ಕೈಮಗ್ಗ ಅಭಿವೃದ್ಧಿ-ಜವಳಿ ನಿಗಮಗಳ ವಿಲೀನ : ಸಚಿವ ಶಿವಾನಂದ ಪಾಟೀಲ
ರಾಜಕಾರಣದಲ್ಲಿ(Democracy) ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿ ನೀಡಲಾಗಿದೆಯೆಂದರೆ ಅದಕ್ಕೆ ಪ್ರಜಾಪ್ರಭುತ್ವವೇ ಕಾರಣ, ಇದರಿಂದ ಸಂಸತ್ತು ಮತ್ತು ವಿಧಾನಸಭೆಗೆ ಆಯ್ಕೆಯಾಗಲು ಮಹಿಳೆಯರಿಗೆ ಅವಕಾಶ ಸಿಕ್ಕಿದೆ. ಪ್ರಜಾಪ್ರಭುತ್ವದಲ್ಲಿ ಮತದಾನ ಪ್ರಬಲವಾದ ಅಸ್ತ್ರ. ಒಂದೊಂದು ಮತಕ್ಕೂ ಶಕ್ತಿಯಿದೆ. ದೇಶದ ವ್ಯವಸ್ಥೆಯನ್ನು ಬದಲಾವಣೆ ಮಾಡಬಹುದು ಎಂದರು.
ತಹಶೀಲ್ದಾರ್ ವಿಜಯಕುಮಾರ್, ತಾಲ್ಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಶ್ವನಾಥ, ಪುರಸಭೆ ಅಧ್ಯಕ್ಷ ವಿಜಯಸಿಂಹ ಖಾಟ್ರೋತ್, ಉಪಾಧ್ಯಕ್ಷೆ ನಾಗರತ್ನ ವೇದಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀನಿವಾಸ್, ಪುರಸಭೆ ಸದಸ್ಯರುಗಳಾದ ಆರ್.ಎ.ಅಶೋಕ್, ಪಿ.ಹೆಚ್.ಮುರುಗೇಶ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಚನ್ನಬಸಪ್ಪ, ಪ್ರದೀಪ್‍ಕುಮಾರ್, ಡಾ.ಶಿವಮೂರ್ತಿನಾಯ್ಕ, ಮೋನಿಕಾ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು, ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.
