Chitradurga news|nammajana.com|8-7-2024
ನಮ್ಮಜನ.ಕಾಂ, ಚಿತ್ರದುರ್ಗ: ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಡೆಂಗ್ಯೂಜ್ವರದ (Dengue case Chitradurga) ಚಿಕಿತ್ಸೆಗಾಗಿ ಬೇಕಾಗುವ ಪ್ಲೇಟ್‍ಲೆಟ್ಸ್ (Platelets) ಲಭ್ಯವಿದ್ದು, ಜಿಲ್ಲಾ ಆಸ್ಪತ್ರೆ ಡೆಂಗ್ಯೂ ಪ್ರಕರಣಗಳ ದಿನ ನಿತ್ಯ ಸಾವಿರಾರು ಜನರನ್ನು ಟೆಸ್ಟಿಂಗ್ ಮಾಡಲಾಗುತ್ತಿದೆ.
ಸಾರ್ವಜನಿಕರು ಮತ್ತು ರೋಗಿಗಳು ತಮ್ಮ ಆರೋಗ್ಯದಲ್ಲಿ (Dengue case Chitradurga) ವ್ಯತ್ಯಾಸ ಕಂಡು ಬಂದರೆ ಕೂಡಲೇ ನೀವು ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಬೇಕು. ಇದಕ್ಕೆ ಅಗತ್ಯವಾದ ಚಿಕಿತ್ಸೆ ಸೌಲಭ್ಯ ಚಿತ್ರದುರ್ಗ ಜಿಲ್ಲಾ ಆಸ ಜಿಲ್ಲಾ ಆಸ್ಪತ್ರೆಯಲ್ಲಿ ಲಭ್ಯವಿದೆ.
ಚಿತ್ರದುರ್ಗ ಜಿಲ್ಲೆಯಲ್ಲಿನ ಡೆಂಗ್ಯೂಜ್ವರದ ಪ್ರಕರಣಗಳು ದಿನಾಂಕ-8-7-2024 (Dengue case Chitradurga)
- ಡೆಂಗ್ಯೂಜ್ವರ ಪರೀಕ್ಷೆ-1776
- ಡೆಂಗ್ಯೂಜ್ವರ ಪಾಸಿಟಿವ್ -338
- ಸಾವಿನ ಸಂಖ್ಯೆ-0
ಜಿಲೆಯಲ್ಲಿ ಇಂದು 338 ಪಾಸಿಟಿವ್ ಪ್ರಕರಣಗಳು ಕಂಡು ಬಂದಿವೆ. ಜನರು ತಮ್ಮ ಸುತ್ತಮುತ್ತಲಿನ ವಾತವರಣವನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕು. ಮನೆ ಅಕ್ಕ ಪಕ್ಕದಲ್ಲಿ ನೀರು ನಿಲ್ಲದಂತೆ ಜಾಗೃತಿ ವಹಿಸಿದರೆ ತಮ್ಮ ಆರೋಗ್ಯ ರಕ್ಷಣೆ ಮಾಡಿಕೊಂಡಂತೆ ಆಗುತ್ತದೆ.
ಇದನ್ನೂ ಓದಿ: ಹಿರಿಯೂರು | ಶಾಲೆಯಲ್ಲೇ ನೇಣು ಹಾಕಿಕೊಂಡು ವಿದ್ಯಾರ್ಥಿ ಆತ್ಮಹತ್ಯೆ | student hanged Navodaya School
ಆರಂಭಿಕ ಪತ್ತೆ ಮತ್ತು ವೈದ್ಯಕೀಯ ಆರೈಕೆ: (Dengue case Chitradurga)
ಡೆಂಗ್ಯೂ ಜ್ವರವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಆರಂಭಿಕ ಪತ್ತೆ ಮತ್ತು ತ್ವರಿತ ವೈದ್ಯಕೀಯ ಆರೈಕೆ ಅತ್ಯಗತ್ಯ. ನೀವು ಡೆಂಗ್ಯೂಗೆ ಸಂಬಂಧಿಸಿದ ರೋಗಲಕ್ಷಣಗಳನ್ನು ಅನುಭವಿಸಿದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಿ. ವೈದ್ಯಕೀಯ ವೃತ್ತಿಪರರು ರೋಗನಿರ್ಣಯ ಪರೀಕ್ಷೆಗಳನ್ನು ನಡೆಸಬಹುದು, ನಿಮ್ಮ ಸ್ಥಿತಿಯನ್ನು ಮೇಲ್ವಿಚಾರಣೆ ಮಾಡಬಹುದು ಮತ್ತು (Dengue case Chitradurga) ರೋಗಲಕ್ಷಣಗಳನ್ನು ನಿರ್ವಹಿಸಲು ಮತ್ತು ತೊಡಕುಗಳನ್ನು ತಡೆಗಟ್ಟಲು ಸೂಕ್ತವಾದ ಚಿಕಿತ್ಸೆಯನ್ನು ಒದಗಿಸಬಹುದು. ಅವರ ಸಲಹೆಯನ್ನು ಅನುಸರಿಸಿ, ಸೂಚಿಸಿದ ಔಷಧಿಗಳನ್ನು ತೆಗೆದುಕೊಳ್ಳಿ ಮತ್ತು ಸಾಕಷ್ಟು ವಿಶ್ರಾಂತಿ ಮತ್ತು ಜಲಸಂಚಯನವನ್ನು ಖಚಿತಪಡಿಸಿಕೊಳ್ಳಿ.