Chitradurga news|nammajana.com|4-7-2024
ನಮ್ಮಜನ.ಕಾಂ, ಚಿತ್ರದುರ್ಗ: ಕಡ್ಲೆಗುದ್ದು ಹಾಗೂ ಸಾಸಲು ರಸ್ತೆಗಳಲ್ಲಿ ಅದಿರು ತುಂಬಿರುವ ಬೃಹತ್ ವಾಹನಗಳು ಸಂಚಾರ (Deregistration of 20 year old vehicles) ಮಾಡುತ್ತಿವೆ. ಈ ವಾಹನಗಳಿಂದ ರಸ್ತೆ ಹಾಳಾಗುವುದರ ಜೊತೆ ಪರಿಸರ ಮಾಲಿನ್ಯವು ಉಂಟಾಗುತ್ತಿದೆ. ಈ ವಾಹನಗಳ ಪೈಕಿ 20 ವರ್ಷ ಪೂರೈಸಿದ ವಾಹನಗಳ ನೊಂದಣಿಯನ್ನು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ರದ್ದು ಪಡಿಸಬೇಕು. ಗ್ರಾಮೀಣ ಭಾಗದಲ್ಲಿ ಹಳೆಯ ಗೂಡ್ಸ್ ವಾಹನ, ಟ್ಯಾಕ್ಟರ್, ಟ್ರ್ಯಾಲಿ, ಲಾರಿ, ಟಿಪ್ಪರ್‍ಗಳ ಹಿಂಬದಿಯಲ್ಲಿ ರಿಫ್ಲೆಕ್ಟರ್‍ಗಳು ಇಲ್ಲದೇ ಇರುವುದು ಕಂಡುಬರುತ್ತದೆ. ಇದರಿಂದ ಸಾಕಷ್ಟು ಅಫಘಾತ ಹಾಗೂ ಸಾವು ನೋವು ಸಂಭವಿಸುತ್ತಿವೆ. ಸಾರಿಗೆ ಇಲಾಖೆ ಅಧಿಕಾರಿಗಳು ರಿಫ್ಲೆಕ್ಟರ್‍ಗಳ ಅಳವಡಿಕೆಗೆ ವಿಶೇಷ ಅಭಿಯಾನ ನಡೆಸಬೇಕು.
ತಪಾಸಣೆ ನಡೆಸಿ ವಾಹನ ಮಾಲಿಕರಿಂದ ಹಣ ಪಡೆದು (Deregistration of 20 year old vehicles) ರಿಫ್ಲೆಕ್ಟರ್‍ಗಳನ್ನು ಅಳವಡಿಸಬೇಕು. ಗ್ರಾಮೀಣ ಭಾಗದಲ್ಲಿ ಸರಕು ಸಾಗಣೆ ವಾಹನಗಳಲ್ಲಿ ಪ್ರಯಾಣಿಕರನ್ನು ಕರೆದೊಯ್ಯುವುದು ಕಂಡುಬರುತ್ತಿದೆ ಇದಕ್ಕೆ ಕಡಿವಾಣ ಹಾಕುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚನೆ ನೀಡಿದರು.
ಇದನ್ನೂ ಓದಿ: New Ration card | ಹೊಸ ರೇಷನ್ ಕಾರ್ಡ್ ಗೆ ಸರ್ವರ್ ಸಮಸ್ಯೆ | ಜನರ ಪರದಾಟ
ಜಿಲ್ಲೆಯಲ್ಲಿ ಒಟ್ಟು 33,000 ಎಲ್.ಎಂ.ವಿಗಳು (Deregistration of 20 year old vehicles) ನೊಂದಣಿಯಾಗಿವೆ. ಇದರಲ್ಲಿ ಬಹುತೇಕ ಟ್ಯಾಕ್ಟರ್ ಹಾಗೂ ಗೂಡ್ಸ್ ವಾಹನಗಳು ಆಗಿವೆ. ಸಾರಿಗೆ ಇಲಾಖೆಯಿಂದ ರಿಫ್ಲಕ್ಟರ್ ಅಡಳವಡಿಸಲು ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಯಲ್ಲಿ 247 ಅದಿರು ಸಾಗಣೆ ಮಾಡುವ ಲಾರಿಗಳು ಇವೆ. ಇವುಗಳಲ್ಲಿ ನೊಂದಣಿ ಅವಧಿ ಮುಕ್ತಾಯಗೊಂಡ ಹಾಗೂ ಸಕ್ಷಮವಾಗಿ ಇರುವ ಲಾರಿಗಳ ನೊಂದಣಿ ನವೀಕರಿಸದೇ, ರದ್ದು ಮಾಡುವುದಾಗಿ ಪ್ರಾದೇಶಿಕ ಸಾರಿಗೆ ಭರತ್.ಎಂ.ಕಾಳೆಸಿಂಗೆ ಹೇಳಿದರು.
ರಸ್ತೆ ಸುರಕ್ಷತಾ ಸಮಿತಿ ನೀಡಿದ ಸೂಚನೆ ಪಾಲಿಸಿ
ರಸ್ತೆ ಸುರಕ್ಷತಾ ಸಮಿತಿ ನೀಡಿದ ಸೂಚನೆಗಳನ್ನು ಅಧಿಕಾರಿಗಳು ತಪ್ಪದೆ ಪಾಲಿಸಬೇಕು. ಜಿಲ್ಲೆಯಲ್ಲಿ ಉಂಟಾಗುತ್ತಿರುವ (Deregistration of 20 year old vehicles) ಅಪಘಾತಗಳ ಪ್ರಮಾಣ ಇಳಿಕೆಯಾಗಬೇಕು. ರಾಷ್ಟ್ರೀಯ, ರಾಜ್ಯ ಹಾಗೂ ಜಿಲ್ಲಾ ರಸ್ತೆಗಳ ಸುರಕ್ಷತಾ ಲೆಕ್ಕ ಪರಿಶೋಧನೆಯನ್ನು ಮಾಡಿಸಬೇಕು. ಜಿಲ್ಲೆಯಲ್ಲಿ ರಾಜ್ಯ ಹಾಗೂ ಜಿಲ್ಲಾ ರಸ್ತೆಗಳ ಸ್ಥಿತಿಗತಿ ಬಗ್ಗೆ ವರದಿ ನೀಡಬೇಕು.
ಇದನ್ನೂ ಓದಿ: ಅಕ್ರಮ ಮೈನಿಂಗ್ ಮೇಲೆ ದಾಳಿ | ನಾಲ್ಕು ಲಾರಿ, ಒಂದು JCB ವಶ | Attack illegal mining
ರಸ್ತೆ ಸುರಕ್ಷತಾ ನಿಧಿಯಡಿಯಲ್ಲಿ ಅನುದಾನ ಒದಗಿಸುವಂತೆ (Deregistration of 20 year old vehicles) ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿ. ರಸ್ತೆ ಸುರಕ್ಷತಾ ನಿಧಿಯಿಂದ ಜಿಲ್ಲೆಯಲ್ಲಿ ಈಗಾಗಲೇ ಗುರುತಿಸಲಾಗಿರುವ ಅಪಘಾತ ವಲಯಗಳಲ್ಲಿ ಸೂಚನಾ ಫಲಕ, ಮಾಕಿರ್ಂಗ್, ಬ್ಲಿಂಕರ್ಸ್ ಅಳವಡಿಕೆ ಸೇರಿದಂತೆ ಅಗತ್ಯ ರಸ್ತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದರು.