
Chitradurga news|nammajana.com|23-03-2025
ನಮ್ಮಜನ.ಕಾಂ, ಚಳ್ಳಕೆರೆ: ಕಳೆದ ಫೆ.28 ರಂದು ನಿವೃತ್ತರಾದ ಚಿತ್ರದುರ್ಗ ಜಿಲ್ಲಾ ಡಿಎಫ್ಒ ಓ (DFO) ರಾಜಣ್ಣರ ಮನೆಗೆ ಲೋಕಾಯುಕ್ತ ಅಧಿಕಾರಿಗಳು ಶನಿವಾರ ಬೆಳ್ಳಂಬೆಳಗ್ಗೆ ದಾಳಿ ನಡೆಸಿ ಶಾಕ್ ನೀಡಿದ್ಧಾರೆ.
ಇತ್ತೀಚೆಗೆ ನಡೆದ ಲೋಕಾಯುಕ್ತ ದಾಳಿಯಲ್ಲಿ ಬೆಂಗಳೂರಿನ ಅರಣ್ಯ ಇಲಾಖೆ ನೌಕರರ ಗೋಪಾಲ್ ಎಂಬುವವರ ಬಳಿ ಪತ್ತೆಯಾದ ಸುಮಾರು ೪೫ ಲಕ್ಷ ಹಣ ಡಿಎಫ್ಒ (DFO) ರಾಜಣ್ಣನವರಿಗೆ ಸೇರಿದ್ದು ಎಂದು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಲೋಕಾಯುಕ್ತ ಡಿವೈಎಸ್ಪಿ ಮೃತ್ಯುಂಜಯ ತಂಡ ದಾಳಿ ನಡೆಸಿ ಪರಿಶೀಲನೆ ನಡೆಸಿತು.

ಇದನ್ನೂ ಓದಿ: pregnant | ಹೊಸದುರ್ಗದಲ್ಲಿ ಹೆಚ್ಚುತ್ತಿರುವ ಬಾಲ ಗರ್ಭಿಣಿಯರು
ಡಿಎಫ್ಒ ರಾಜಣ್ಣ ಸೇವೆಯಿಂದ ನಿವೃತ್ತಿನಂತರ ಚಿತ್ರದುರ್ಗದಲ್ಲಿ ವಾಸವಿದ್ದು, ಚಳ್ಳಕೆರೆ ನಗರದ ವಾಲ್ಮೀಕಿ ನಗರದ (DFO) ಬಂಡೆಆAಜನೇಯಸ್ವಾಮಿ ದೇವಸ್ಥಾನದ ಬಳಿ ನೂತನ ಮನೆ ನಿರ್ಮಿಸಿದ್ದು ಅಲ್ಲಿಗೆ ಆಗಮಿಸಿ ಪರಿಶೀಲನೆ ನಡೆಸಿದ್ಧಾರೆ.