Chitradurga news |nammajana.com|5-7-2024
ನಮ್ಮಜನ.ಕಾಂ, ಚಳ್ಳಕೆರೆ: ಇತ್ತೀಚಿನ ದಿನಗಳಲ್ಲಿ ಡೆಂಘಿಜ್ವರ ಎಲ್ಲೆಡೆ ಹರಡುವ ಭೀತಿ ಇದ್ದು, ರೋಗಿಗಳ ಸುರಕ್ಷತೆ (Dialysis Center) ದೃಷ್ಠಿಯಿಂದ ವೈದ್ಯರು ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಶಾಸಕ, ಸಣ್ಣ ಕೈಗಾರಿಕೆ ಅಭಿವೃದ್ದಿ ಮಂಡಳಿ ಅಧ್ಯಕ್ಷ ಟಿ.ರಘುಮೂರ್ತಿ ತಿಳಿಸಿದರು.
ಅವರು ಗುರುವಾರ ಸಾರ್ವಜನಿಕ ಆಸ್ಪತ್ರೆಯ ಸಭಾಂಗಣದಲ್ಲಿ ಮೈಸೂರಿನ ಬ್ಯಾಂಕ್ ನೋಟ್‌ಮಿಲ್ ಇಂಡಿಯಾ ಪ್ರೈ.ಲಿ.ನವರು ನಿರ್ಮಿಸಿದ ಉನ್ನತ್ತೀಕರಣದ ಡಯಾಲಿಸಿಸ್ ಸೆಂಟರನ್ನು (Dialysis Center) ಉದ್ಘಾಟಿಸಿ ಮಾತನಾಡಿದರು.

ಸಾರ್ವಜನಿಕ ಆಸ್ಪತ್ರೆಯ ವೈದ್ಯರ ಮೇಲೆ ಜನತೆ ಹೆಚ್ಚು ಭರವಸೆ ಇಟ್ಟಿದ್ದು, ಎಲ್ಲರೋಗಿಗಳು ರೋಗಮುಕ್ತರಾಗಿ ಮನೆಗೆ ತೆರಳುವ ವಾತಾವರಣವನ್ನು ವೈದ್ಯರ ನಿರ್ಮಾಣ ಮಾಡಬೇಕೆಂದರು.
ಇದನ್ನೂ ಓದಿ: ಚಳ್ಳಕೆರೆ ವಿದ್ಯಾರ್ಥಿನಿಲಯ ಪ್ರವೇಶಕ್ಕೆ ಅರ್ಜಿ ಆಹ್ವಾನ | Application Invitation for Challakere Hostel
ಕಾರ್ಯಕ್ರಮದಲ್ಲಿ ಬ್ಯಾಂಕ್ ನೋಟ್‌ಮಿಲ್ ಇಂಡಿಯಾ ಪ್ರೆöÊ.ಲಿ.ನ ವ್ಯವಸ್ಥಾಪಕ ತಾಳಿಕೇರಪ್ಪ, ಲಕ್ಷ್ಮಿಕಾಂತ್, ಸಾರ್ವಜನಿಕ ಆಸ್ಪತ್ರೆ ಆರೋಗ್ಯಾಧಿಕಾರಿ ಡಾ.ಜೆ.ಡಿ.ವೆಂಕಟೇಶ್, ನಗರಸಭಾ ಸದಸ್ಯರಾದ ಕೆ.ವೀರಭದ್ರಪ್ಪ, ಸುಮಭರಮಯ್ಯ, ಕವಿತಾಬೋರಯ್ಯ, ಎಂ.ಜೆ.ರಾಘವೇಂದ್ರ, ರಮೇಶ್‌ಗೌಡ, ನಾಮಿನಿ ಸದಸ್ಯರಾದ ಬಡಗಿಪಾಪಣ್ಣ, ಅನ್ವರ್‌ಮಾಸ್ಟರ್, ನೇತಾಜಿಪ್ರಸನ್ನ, ನಟರಾಜು, ಭದ್ರಿ, ಆರೋಗ್ಯ ರಕ್ಷಾ ಸಮಿತಿ ಸದಸ್ಯ ಶಿವಸ್ವಾಮಿ, ಮೂಡಲಗಿರಿಯಪ್ಪ, ಶ್ರೀನಿವಾಸ್ ಮುಂತಾದವರು ಉಪಸ್ಥಿತರಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252