Chitradurga news | nammajana.com |12-02-2025
ನಮ್ಮಜನ.ಕಾಂ, ಚಿತ್ರದುರ್ಗ: ಭಾರತದಲ್ಲಿ ಪ್ರತಿ ಕೆಲಸಗಳು ಶಾಸ್ತ್ರ ಸಂಪ್ರದಾಯದ ಇಂದಿನ ರಾಶಿ ಭವಿಷ್ಯ (Dina Bhavishya) ಮೇಲೆ ನಡೆಯುತ್ತವೆ. ಮನುಷ್ಯನಿಗೆ ಪ್ರತಿ ದಿನ ಒಳಿತು ಕೆಡುಕುಗಳನ್ನು ನೋಡಿಕೊಂಡು ಮುಂದುವರೆಯುತ್ತಾನೆ.
ಪ್ರತಿಯೊಂದು ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು (Dina Bhavishya) ನೀಡುತ್ತವೆ. ಅದರಂತೆ ಇಂದು ದ್ವಾದಶ ರಾಶಿಗಳ ಫಲ ಹೇಗಿದೆ ನೋಡಿ.

ಪಂಚಾಂಗ (Dina Bhavishya)
ಮೇಷ
ಉದ್ಯೋಗದಲ್ಲಿ ನೌಕರರಿಗೆ ತಾರತಮ್ಯ ತೋರಿಸುವುದು ಬೇಡ. ನಿಮ್ಮ ಕಾರ್ಯ ಕುಶಲತೆಗೆ ಮೆಚ್ಚುಗೆ ಪ್ರಾಪ್ತವಾಗುವುದು.
ವೃಷಭ
ನಿಮ್ಮ ಇರಾದೆಯನ್ನು ಸಂಗಾತಿಯ ಜೊತೆ ಹೇಳಿಕೊಳ್ಳಬಹುದು. ನಿಮಗೆ ಉಂಟಾದ ಅನುಕೂಲ ಸ್ಥಿತಿಯನ್ನು ನೀವು ಪುಣ್ಯವೆಂದು ತಿಳಿಯುವಿರಿ.
ಮಿಥುನ
ಒಂಟಿತನವು ನಿಮಗೆ ಇಷ್ಟವಾಗದು. ಇನ್ನೊಬ್ಬರ ನೋವನ್ನು ಕಂಡೂ ನೀವು ಸುಮ್ಮನಿರುವುದು ಬೇಡ. ಆಕರ್ಷಕ ವಸ್ತುಗಳಿಗೆ ಮನಸೋಲುವಿರಿ.
ಕಟಕ
ಅವಸರದ ನಿರ್ಧಾರವನ್ನು ಮಾಡಲುಹೋಗುವುದು ಬೇಡ. ನೀವು ಇಂದು ಕೆಟ್ಟವರಾಗಿ ಬಿಂಬಿತವಾಗುವಿರಿ.
ಸಿಂಹ
ಮಕ್ಕಳು ನಿಮ್ಮ ಜೊತೆ ವಾದಕ್ಕೆ ಇಳಿಯಬಹುದು. ಸಂಕೀರ್ಣ ಕಾರ್ಯವು ನಿಮಗೆ ಪೂರ್ಣವಾಗಿ ಅರ್ಥವಾಗದು. ಸೋಲನ್ನು ಅಷ್ಟು ಸುಲಭವಾಗಿ ಒಪ್ಪಿಕೊಳ್ಳಲಾರಿರಿ.
ಕನ್ಯಾ
ಯಾರದೋ ಕೈಗೊಂಬೆಯಾಗಿ ವರ್ತಿಸಬೇಕಗುವುದು. ವೃತ್ತಿಯಲ್ಲಿ ನಿಮ್ಮ ತಿಳಿವಳಿಕೆಯನ್ನು ಪ್ರದರ್ಶಿಸಿ ನಿಮ್ಮ ಸಾಮರ್ಥ್ಯವನ್ನು ಪರಿಚಯಿಸುವಿರಿ.
ತುಲಾ
ಇನ್ನೊಬ್ಬರ ಮನೋಗತವನ್ನು ನೀವು ಅರ್ಥಮಾಡಿಕೊಳ್ಳಲಾರಿರಿ. ನಿಮ್ಮ ವಿದ್ಯಾಭ್ಯಾಸದ ಕನಸನ್ನು ಕುಟುಂಬದಲ್ಲಿ ಹಂಚಿಕೊಳ್ಳುವಿರಿ.
ವೃಶ್ವಿಕ
ನೀವು ಸಹನೆಯನ್ನು ಮೀರಿ ವರ್ತಿಸುವಿರಿ. ಆರ್ಥಿಕ ಸ್ಥಿತಿಯನ್ನು ಸ್ಥಿರಗೊಳಿಸಿಕೊಳ್ಳುವಿರಿ.
ಧನಸ್ಸು
ಒಂದು ರೀತಿಯಲ್ಲಿ ನಿಮಗೆ ಆತಂಕದ ದಿವಸವೂ ಆಗಬಹುದು. ವಿದೇಶದ ವ್ಯವಹಾರವು ನಿಮಗೆ ಸರಿಯಾಗಿ ಆಗಿಬರದು.
ಮಕರ
ಕುಟುಂಬದ ಸಮಸ್ಯೆಗಳ ಪರಿಹಾರಕ್ಕೆ ನಿಮ್ಮ ಸಲಹೆಯು ಬೇಕಾಗುವುದು. ಅನಾರೋಗ್ಯವು ವಿದ್ಯಾರ್ಥಿಗಳ ಅಭ್ಯಾಸಕ್ಕೆ ತೊಂದರೆ ಕೊಡುವುದು.
ಕುಂಭ
ಮನೆಯ ಜವಾಬ್ದಾರಿಯು ನಿಮಗೆ ಅನಿರೀಕ್ಷಿತವಾಗಿ ಬರಬಹುದು. ಗ್ರಾಹಕರಿಂದ ಮೋಸ ಹೋಗಬೇಕಾದೀತು.
ಮೀನ
ವಿದ್ಯಾಭ್ಯಾಸದಲ್ಲಿ ಶ್ರದ್ಧೆಯು ಹೆಚ್ಚು ಬೇಕಾಗುವುದು. ನಿರ್ಮಾಣ ಕಾರ್ಯದ ಅಗತ್ಯವನ್ನು ನೀವು ಅನುಭವಿಸುವಿರಿ.
ಇದನ್ನೂ ಓದಿ: Guarantee scheme | ಜಿಲ್ಲೆಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಪ್ರಚಾರ
ಈ ದಿನದ ದಿನ ಭವಿಷ್ಯ (Dina Bhavishya) ದಲ್ಲಿ ಯಾವ ರಾಶಿ ಶುಭವಿದೆ ಎಂದು ನೋಡಿಕೊಂಡು ಮುಂದುವರೆದರೆ ಒಳಿತಾಗಲಿದೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252